ಕನ್ನಡ ಕೆಟ್ಟ ಭಾಷೆಯಂತೆ; ಶ್ರೇಷ್ಠ ಭಾಷೆಗೆ ಇದೆಂತ ಅವಮಾನ!

0
63

ಕನ್ನಡ.. ಭಾರತ ದೇಶದ ಸುಂದರ, ಸುಲಲಿತ ಹಾಗೂ ಸುಮಧುರವಾದ ಭಾಷೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರಕಿವೆ. ಅಷ್ಟೇ ಯಾಕೆ ದೇಶದ ನೋಟನ್ನು ತೆಗೆದು ಕೊಂಡರೆ ಅದರಲ್ಲಿರುವ ಭಾಷೆಗಳ ಪಟ್ಟಿಯಲ್ಲಿ ಕನ್ನಡಕ್ಕೆ ನಾಲ್ಕನೇ ಸ್ಥಾನಮಾನ ದೊರೆತಿದೆ. ಹೀಗೆ ಕನ್ನಡದ ಮಹತ್ವವನ್ನು ಹೇಳಲು ಶುರುಮಾಡಿದರೆ ವರ್ಷಾನುಗಟ್ಟಲೆ ಸಮಯ ಬೇಕಾಗಬಹುದು. ಅಂತಹ ಮಹತ್ತರವಾದ ಹಿನ್ನೆಲೆಯುಳ್ಳ ಭಾಷೆ ನಮ್ಮ ಕನ್ನಡ.

 

ಅಣ್ಣಾವ್ರು ‘ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯೋ’ ಎಂದು ಕನ್ನಡ ಭಾಷೆಯನ್ನು ವರ್ಣಿಸಿದ್ದರು. ಇಂತಹ ಸುಂದರ ಭಾಷೆಯನ್ನು ಇದೀಗ ‘ಡೆಬ್ಟ್ ಕನ್ಸಾಲಿಡೇಷನ್ ಸ್ಕ್ವ್ಯಾಡ್ ಡಾಟ್ ಕಾಮ್’ ಎಂಬ ವೆಬ್ ಸೈಟ್ ಕೆಟ್ಟ ಭಾಷೆ ಎಂದು ಬರೆದುಕೊಂಡಿದೆ. ಗೂಗಲ್ ಗೆ ಹೋಗಿ ‘Ugliest language in india’ ಎಂದು ಹುಡುಕಿದರೆ ಕನ್ನಡ ಎಂದು ತೋರಿಸಿಬಿಡುತ್ತದೆ.

 

 

ಹೌದು ಈ ವೆಬ್ ಸೈಟ್ ನಲ್ಲಿ ಪ್ರಕಟವಾಗಿರುವ ಒಂದು ಅಂಕಣದಲ್ಲಿ ಕನ್ನಡವನ್ನು ಅತೀ ಕೆಟ್ಟ ಭಾಷೆ ಎಂದು ಬರೆಯಲಾಗಿದೆ. ನಿನ್ನೆ ಮೊನ್ನೆ ಹುಟ್ಟಿದ ಜ್ಞಾನವಿಲ್ಲದ ಇಂತಹ ಬುದ್ಧಿಮಾಂದ್ಯ ಬರಹಗಾರರಿಗೆ ಕನ್ನಡದ ಹಿನ್ನೆಲೆಯೇನು, ಇತಿಹಾಸವೇನು, ಮಹತ್ವವೇನು ಎಂಬುದು ಬಹುಶಃ ತಿಳಿದಿರಲಿಕ್ಕಿಲ್ಲ. ಕನ್ನಡದಂತಹ ಸುಂದರ ಭಾಷೆಯ ಬಗ್ಗೆ ಇಷ್ಟು ಕೀಳುಮಟ್ಟದಲ್ಲಿ ಬರೆದಿರುವ ಆತನ ಮನಸ್ಥಿತಿ ಎಷ್ಟು ಕೊಳಕಾಗಿದೆ ಎಂಬುದನ್ನು ನೀವೇ ಊಹಿಸಿಕೊಳ್ಳಿ. ಸದ್ಯ ಈ ವೆಬ್ ಸೈಟ್ ನ ಸುದ್ದಿ ವೈರಲ್ ಆಗಿದ್ದು ಕನ್ನಡಿಗರೆಲ್ಲರೂ ಕಿಡಿಕಾರುತ್ತಿದ್ದಾರೆ ಹಾಗು ಆ ಸುದ್ದಿಯ ವಿರುದ್ಧ ಫೀಡ್ ಬ್ಯಾಕ್ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೀವು ಕೂಡ ಮೇಲಿನ ವಿಡಿಯೋದಲ್ಲಿರುವ ರೀತಿ ಫೀಡ್ ಬ್ಯಾಕ್ ಕೊಡುವುದರ ಮೂಲಕ ಆ ಸುದ್ದಿಯನ್ನು ತೆಗೆಸುವುದಕ್ಕೆ ಸಹಾಯ ಮಾಡಿ ಮತ್ತು ಇದನ್ನು ಎಲ್ಲರಿಗೂ ಶೇರ್ ಮಾಡಿ.

LEAVE A REPLY

Please enter your comment!
Please enter your name here