ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಈಗ ಇರುವ ನಿಯಮಗಳು ಜೂ.14 ರ ಬೆಳಿಗ್ಗೆ 6 ವರೆಗೆ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಲಾಕ್ ಡೌನ್ ವಿಸ್ತರಣೆ ಬಗ್ಗೆ ಜೂ.03 ರಂದು ಸಂಜೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಸಿಎಂ ಯಡಿಯೂರಪ್ಪ, ಕೊರೋನಾ ನಿಯಂತ್ರಣಕ್ಕಾಗಿ ವಿಧಿಸಲಾಗಿಸಲಾಗಿರುವ ನಿಯಮಗಳಲ್ಲಿ ಸದ್ಯಕ್ಕೆ ಯಾವುದೇ ಸಡಿಲಿಕೆ, ಬದಲಾವಣೆಗಳೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಕೆಲವು ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ಹೊಟೆಲ್ ಗಳಿಂದ ಪಾರ್ಸಲ್ ಪಡೆಯುವುದಕ್ಕೆ, ರಫ್ತು ಮಾಡುವುದಕ್ಕೆ ಅಗತ್ಯವಿರುವ ಚಟುವಟಿಕೆಗಳಿಗೆ ನಿರ್ಬಂಧವನ್ನು ಸಡಿಲಿಸಲಾಗಿದೆ.
- ಮೀನುಗಾರರು: 3000 ರೂಪಾಯಿ
- ಪವರ್ ಲೂಮ್ ನೇಕಾರರು: 3,000ರೂಪಾಯಿ
- ಅಂಗನವಾಡಿ ಸಹಾಯಕರು: 2,000 ರೂಪಾಯಿ
- ಅನುದಾನರಹಿತ ಶಿಕ್ಷಕರು: 5,000 ರೂಪಾಯಿ
- ಖಾಸಗಿ ಶಿಕ್ಷಕರು: 5,000 ರೂಪಾಯಿ
- ಆಶಾ ಕಾರ್ಯಕರ್ತೆಯರು: 3,000 ರೂಪಾಯಿಗಳು
- ಇಮಾಮ್, ಮೌಲ್ವಿಗಳು: 3,000 ರೂಪಾಯಿಗಳು
- ಸಿನಿಮಾ ಕಾರ್ಮಿಕರು: 3,000 ರೂಪಾಯಿ
- ಕಿರುತೆರೆ ಕಲಾವಿದರು: 3,000 ರೂಪಾಯಿ
- ’ಸಿ’ ವರ್ಗದ ಮುಜರಾಯಿ ಇಲಾಖೆ ಅಡುಗೆ ಭಟ್ಟರು: 3,000 ರೂಪಾಯಿ
- ಮುಜರಾಯಿ ಇಲಾಖೆ ವ್ಯಾಪ್ತಿಯ ಅರ್ಚಕರು: 3,000 ರೂಪಾಯಿ ಯಂತೆ ಕೋವಿಡ್ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ.