ರಾಜಕೀಯ ಸೇರುವುದರ ಕುರಿತು ಸೋನು ಸೂದ್ ಸ್ಪಷ್ಟನೆ

Date:

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಬಾಲಿವುಡ್ ನಟ ಸೋನು ಸೂದ್ ಮಾಡುತ್ತಿರುವ ಜನಸೇವೆ ಅಪಾರ. ತನ್ನ ಸ್ವಂತ ದುಡ್ಡಿನಿಂದ ಸಂಕಷ್ಟದಲ್ಲಿರುವ ಸಾವಿರಾರು ಜನರಿಗೆ ನೆರವು ನೀಡಿರುವ ಕಲಾವಿದ ಜನಸಾಮಾನ್ಯರ ಪಾಲಿಗೆ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ.

ಸೋನು ಸೂದ್ ಜನಪರ ಕಾರ್ಯ ನೋಡಿದ ಅನೇಕರು ರಾಜಕೀಯಕ್ಕೆ ಬರುವ ತಯಾರಿ ಎಂದು ಟೀಕಿಸಿದರು. ಇನ್ನು ಹಲವು ನೀವು ರಾಜಕೀಯಕ್ಕೆ ಬನ್ನಿ ಎಂದು ಆಹ್ವಾನಿಸಿದರು. ಮತ್ತಷ್ಟು ಜನರ ಸೋನು ಸೂದ್ ಈ ದೇಶದ ಪ್ರಧಾನಿ ಆಗ್ಬೇಕು ಎಂದು ಅಭಿಯಾನನೂ ಮಾಡಿದರು. ನಮ್ಮ ರಾಜ್ಯಕ್ಕೆ ನಿಮ್ಮಂತ ವ್ಯಕ್ತಿ ಮುಖ್ಯಮಂತ್ರಿ ಆಗ್ಬೇಕು ಎಂದು ಅಸೆ ಪಟ್ಟವರು ಇದ್ದಾರೆ. ಹೀಗೆ, ಸೋನು ಸೂದ್‌ರನ್ನು ರಾಜಕಾರಣಿಯಾಗಿ ನೋಡಲು ಬಹಳಷ್ಟು ಜನರ ಬಯಸುತ್ತಿದ್ದಾರೆ. ಈ ಕುರಿತು ನಟ ಸೋನು ಸೂದ್ ‘ಬಾಲಿವುಡ್ ಲೈಫ್’ ವೆಬ್‌ಸೈಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಮುಂದೆ ಓದಿ….

 

”ನಾನು ಒಬ್ಬ ನಟ ಎನ್ನುವುದನ್ನು ಯಾವಾಗಲೂ ಹೇಳಿಕೊಳ್ಳುತ್ತಿದ್ದೇನೆ. ಒಂದು ವೃತ್ತಿಯಾಗಿ ಇದನ್ನು ಇಷ್ಟ ಪಡುತ್ತೇನೆ” ಎಂದು ಸೋನು ಸೂದ್ ಬಾಲಿವುಡ್ ಲೈಫ್ ವೆಬ್‌ಸೈಟ್ ಜೊತೆ ಹೇಳಿದರು. ರಾಜಕೀಯ ಎಂಟ್ರಿ ಬಗ್ಗೆ ಮಾತನಾಡಿ ”ಸದ್ಯಕ್ಕೆ ರಾಜಕೀಯ ಪ್ರವೇಶ ಮಾಡುವ ಯಾವುದೇ ಉದ್ದೇಶ ನನಗಿಲ್ಲ” ಎನ್ನುವ ಮೂಲಕ ಕುತೂಹಲಕ್ಕೆ ತಾತ್ಕಾಲಿಕವಾಗಿ ತೆರೆ ಎಳೆದಿದ್ದಾರೆ.

”ಜನರಿಗೆ ಸಹಾಯ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಎಲ್ಲಿದ್ದರೂ ಸಹಾಯ ಮಾಡಬಹುದು. ನನ್ನದೇ ರೀತಿಯಲ್ಲಿ ಪ್ರತಿದಿನ ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ಕೆಲವರು ಜನರಿಗೆ ನೆರವು ನೀಡಲು ಬೇರೆ ಮಾರ್ಗ ಹುಡುಕಿಕೊಳ್ಳಬಹುದು” ಎಂದು ಸೋನು ಸೂದ್ ತಿಳಿಸಿದರು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...