ಲಕ್ನೋ: ಕೆಲವರು ಪ್ರೀತಿಗಾಗಿ ಏನೂ ಬೇಕಿದ್ದರೂ ಮಾಡುತ್ತಾರೆ. ಇಂತಹ ಹಲವು ನಿದರ್ಶನಗಳನ್ನು ಸಹ ನಾವು ನೋಡಿರುತ್ತೇವೆ. ಅದೇ ರೀತಿ ಇಲ್ಲೊಬ್ಬ ಯುವಕ ತನ್ನ ಲವರ್ ಮದುವೆಗೆ ಸೀರೆಯುಟ್ಟು, ಮೇಕಪ್ ಮಾಡಿಕೊಂಡು, ಬಳೆ, ಆಭರಣ ತೊಟ್ಟು ವಧುವಿನ ವೇಷದಲ್ಲೇ ಹೋಗುವ ಮೂಲಕ ಗಮನ ಸೆಳೆದಿದ್ದಾನೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಉತ್ತರ ಪ್ರದೇಶದ ಬದೋಹಿಯಲ್ಲಿ ಘಟನೆ ನಡೆದಿದ್ದು, ಯುವಕ ತನ್ನ ಲವರ್ ನೋಡಲು ವಧುವಿನ ವೇಷ ಧರಿಸಿಕೊಂಡು ಮದುವೆ ಮನೆಗೆ ಪ್ರವೇಶಿಸಿದ್ದಾನೆ. ವ್ಯಕ್ತಿಯ ಚಲನವಲನ ಗಮನಿಸಿದ ಕುಟುಂಬಸ್ಥರು, ಅನುಮಾನಗೊಂಡಿದ್ದಾರೆ. ಬಳಿಕ ಯುವಕನ ಪ್ಲಾನ್ ಉಲ್ಟಾ ಆಗಿದ್ದು, ಹುಡುಗಿಯ ಕುಟುಂಬಸ್ಥರು ಪತ್ತೆಹಚ್ಚಿದ್ದಾರೆ. ಈ ವೀಡಿಯೋ ಇದೀಗ ಸಖತ್ ವೈರಲ್ ಆಗಿದೆ.
ವ್ಯಕ್ತಿ ಕೆಂಪು ಸೀರೆಯುಟ್ಟು ಹುಡುಗಿಯಂತೆ ಸಿಂಗಾರಗೊಂಡಿದ್ದು, ತಲೆಗೆ ವಿಗ್, ಕೈಗೆ ಬಳೆ, ಆಭರಣ ಮಾತ್ರವಲ್ಲದೆ ಮೇಕಪ್ ಸಹ ಮಾಡಿಕೊಂಡಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಅಲ್ಲದೆ ಹುಡುಗಿ ಸಹ ಬೇರೊಬ್ಬ ವ್ಯಕ್ತಿಯನ್ನು ವಿವಾಹವಾಗಲು ಸಿದ್ಧವಾಗಿದ್ದಳು. ಬಾಯ್‍ಫ್ರೆಂಡ್ ಆಕೆಯನ್ನು ಭೇಟಿಯಾಗಲು ಬಂದಾಗ ವಿವಾಹದ ಸಿದ್ಧತೆಗಳು ಭರದಿಂದ ಸಾಗಿದ್ದವು.
ಆರಂಭದಲ್ಲಿ ಹುಡುಗಿಯ ರೂಮ್‍ಗೆ ಹೋಗಬಹುದೆಂದು ವ್ಯಕ್ತಿ ಯೋಚಿಸಿದ್ದ. ಆದರೆ ಅಷ್ಟರಲ್ಲೇ ಹುಡುಗಿಯ ಕುಟುಂಬಸ್ಥರಿಗೆ ಸಿಕ್ಕಿಬಿದ್ದ. ಆದರೆ ಪೊಲೀಸರಿಗೆ ಮಾಹಿತಿ ನೀಡುವಷ್ಟರಲ್ಲಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಎಸ್ಕೇಪ್ ಆಗಿದ್ದಾನೆ ಎಂದು ವರದಿಯಾಗಿದೆ.