ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಬಯೋಪಿಕ್‌ನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8 ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ನಟಿಸುತ್ತಿದ್ದಾರಂತೆ. ಈ ಕುರಿತು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಾಕಷ್ಟು ವಿಷಯ ಹಂಚಿಕೊಂಡಿದ್ದಾರೆ.
ನಿರ್ದೇಶಕ ಮಂಜುನಾಥ್ ಅವರ ಬಯೋಪಿಕ್ ಮಾಡಬೇಕು ಎಂದುಕೊಂಡಿದ್ದೇನೆ, ನೀವು ಡಿಕೆ ರವಿ ಅವರ ಪಾತ್ರ ಮಾಡಿ ಅಂತ ಹೇಳಿದರು, ಆಮೇಲೆ ನಾನು ಈ ಬಯೋಪಿಕ್ ಮಾಡಲು ಡಿಕೆ ರವಿ ಅವರ ಮನೆಯವರ ಅನುಮತಿ ಬೇಕು, ಅದನ್ನೆಲ್ಲ ತಗೊಂಡು ಬಿಡಿ ಅಂತ ಹೇಳಿದರು. ಈ ರೀತಿ ಅನೌನ್ಸ್ ಆಗುವ ಸಿನಿಮಾಗಳು ಆಗಲ್ಲ, ಹೀಗಾಗಿ ನೀವು ತಾಂತ್ರಿಕವಾಗಿ ಎಲ್ಲ ಕೆಲಸ ಮಾಡಿಕೊಳ್ಳಿ. ನನಗೆ ಪಾತ್ರ ಮಾಡಲು ಖುಷಿಯಿದೆ. ತುಂಬ ಕನಸಿಟ್ಟುಕೊಂಡು ಈ ಸ್ಕ್ರಿಪ್ಟ್ ಬರೆದಿದ್ದೇನೆ ಎಂದಿದ್ದಾರೆ, ನನಗೆ ಒಂದು ಲೈನ್ ಕಥೆ ಹೇಳಿದ್ದಾರೆ. ಡಿಕೆ ರವಿ ಅವರು ನನಗೆ ಆತ್ಮೀಯರು. ಅವರ ಜೊತೆ ತುಂಬ ಸಲ ಮಾತನಾಡಿದ್ದೇನೆ. ಆಮೇಲೆ ಮೂರು ಕಂಡೀಶನ್ ಹಾಕಿದ್ದೇನೆ.
ಡಿಕೆ ರವಿ ಸಾಯುವ ಮುನ್ನ ಯಾರದ್ದೋ ಮೊಬೈಲ್‌ಗೆ ಕಳಿಸಿದ್ದ ಮೆಸೇಜ್‌ಗಳನ್ನು ತೋರಿಸುತ್ತೀರಾ ಎಂದು ಕೇಳಿದೆ. ನಾವು ಡಿಕೆ ರವಿ ನೇಣು ಹಾಕಿಕೊಳ್ಳುವ ದೃಶ್ಯ ತೋರಿಸೋದಿಲ್ಲ. ಅವರ ಮನಸ್ಥಿತಿಯನ್ನು ರಿವರ್ಸ್ ಆಗಿ ತೆಗೆದುಕೊಂಡು ಕಥೆ ಮಾಡಿರುವೆ. ಇನ್ನು ಸಿಬಿಐ ವರದಿ ಕುರಿತು ನಾನು ಸ್ಕ್ರಿಪ್ಟ್ ಕೆಲಸ ಮಾಡಿದ್ದೆ, ಅದನ್ನು ಕಳಿಸಿದ್ದೇನೆ. ಆದರೆ ಡಿಕೆ ರವಿ ಕಥೆಗೆ ಇದು ಸಂಬಂಧಪಟ್ಟಿರುತ್ತದೆ ಎಂದು ಹೇಳಿದ್ದಾರೆ.
ನಿರ್ಮಾಪಕ ನಂದೀಶ್ ಅವರು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಒಂದು ಪ್ರೇಮ ಪ್ರಕರಣ ಬರತ್ತೆ, ಅದು ಇಲ್ಲಿ ಇರತ್ತಾ? ಅಂತ ಕೇಳಿದೆ, ಅದಕ್ಕೋಸ್ಕರ ನಾವು ಸಿನಿಮಾ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ನನಗೆ ಬೇರೆಯವರಿಗೆ ಬೇಜಾರಾಗತ್ತೋ ಇಲ್ಲವೋ ಗೊತ್ತಿಲ್ಲ. ಒಂದು ಕಲಾಕೃತಿ ಎಂದಾಗ ಒಬ್ಬರಿಗೆ ಬೇಸರ ಆಗೇ ಆಗುತ್ತದೆ. ಈ ಟೀಮ್ ಸಿನಿಮಾ, ವೆಬ್ ಸಿರೀಸ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ನಾನು ಸಿಬಿಐ ವರದಿ ನೋಡಿದ್ದೇನೆ, ಡಿಕೆ ರವಿ ಅವರನ್ನು ನೋಡಿದ್ದೇನೆ.
ಒಂದು ಹಳ್ಳಿಯಿಂದ ಬಂದ ಹುಡುಗ ಡಿಸಿಯಾಗಿ ಕರ್ನಾಟಕ ರಾಜ್ಯದಲ್ಲಿ ಸಿಂಗಂನಂತೆ ಇರುವ ಎಲ್ಲರಿಗೂ ಗಾಡ್ ಫಾದರ್ ತರ ಮಾದರಿ ಆಗಿದ್ದವರು ಡಿಕೆ ರವಿ. ಏನು ಸತ್ಯ ಇದೆ ಅಂತ ಸಮಾಜಕ್ಕೆ ಹೇಳಿಬಿಡ್ತೀನಿ ಅಂತ ಡಿಕೆ ರವಿ ಬಗ್ಗೆ ಧೈರ್ಯದಿಂದ ಸಿನಿಮಾ ಸರಿಯಾಗಿ ಮಾಡುತ್ತೀನಿ ಎಂದು ಸಿನಿಮಾ ತಂಡ ಹೇಳಿದರೆ ನಾನು ಸಿನಿಮಾ ಮಾಡೋಕೆ ರೆಡಿಯಿದ್ದೇನೆ.
ಡಿಕೆ ರವಿ ಅವರ ವಿಷಯದಲ್ಲಿ ಜನರಿಗೆ ಕೆಲವೊಂದಿಷ್ಟು ಅನುಮಾನಗಳಿವೆ. ಡಿಸಿ ಕರಗ ಇಟ್ಟುಕೊಂಡು ಕುಣಿತಾರೆ, ಮದುವೆಯಾಗಿದೆ, ಎಲ್ಲ ಹೌದು. ಡಿಕೆ ರವಿ ಜೀವನದಲ್ಲಿ ಅತಿ ಮುಖ್ಯವಾದ ಘಟನೆಗಳು ನಡೆದಿವೆ. ಬಂಗಾರಪೇಟೆ ಭಾಗದಲ್ಲಿ ಡಿಕೆ ರವಿ ವಿರುದ್ಧ ಹತ್ಯೆಯ ಒಂದು ಸಂಚು ಆಗತ್ತೆ, ಯಾಕೆ? ಅವರು ರೆಸಾರ್ಟ್ ಯಾಕೆ ಖಾಲಿ ಮಾಡಿಸ್ತಾರೆ? ಗಾಲ್ಫ್ ಕ್ಲಬ್ ಹಿಂದೆ ಯಾಕೆ ಬೀಳ್ತಾರೆ? ಕೋಲಾರಕ್ಕೆ ವರ್ಗಾವಣೆ? ಡಿಕೆ ರವಿ ರೈಡ್ ಮಾಡುವ 13 ಮಲ್ಟಿ ನ್ಯಾಶನಲ್ ಕಂಪನಿಗಳು ಯಾವುವು? ಡಿಕೆ ರವಿ ಪ್ರೀತಿ ಮಾಡುತ್ತಿದ್ದ ಮಹಿಳಾ ಡಿಸಿ ಯಾರು? ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ಸಿಕ್ಕಿದ್ದು ಪ್ರೀತಿ ವಿಫಲವಾಗಿದ್ದಕ್ಕಾ? ಕುಟುಂಬದಲ್ಲಿದ್ದ ಸಮಸ್ಯೆಗಳಾ? ಭ್ರಷ್ಟರು ನೀಡಿದ ಹಿಂಸೆಯಾ? ಇನ್ನು ಡಿಕೆ ರವಿ ಅವರು ಸಾಯುವ ದಿನ 13 ಕಂಪೆನಿಗಳ ಮೇಲೆ ರೈಡ್ ಮಾಡಬೇಕಾಗಿತ್ತು.