ಧಾಕಾ ಪ್ರೀಮಿಯರ್ ಡಿವಿಶನ್ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಲೀಗ್‌ನಲ್ಲಿ ಬಾಂಗ್ಲಾದೇಶದ ಆಲ್ ರೌಂಡರ್ ಶಕೀಬ್ ಅಲ್ ಹಸನ್, ದುರ್ವರ್ತನೆಗಾಗಿ ಗಮನ ಸೆಳೆದಿದ್ದಾರೆ. ಮೈದಾನದಲ್ಲಿ ಶಕೀಬ್ ಆನ್ ಫೀಲ್ಡ್ ಅಂಪೈರ್ ತೀರ್ಪಿಗೆ ಸಿಟ್ಟಿಗೆದ್ದು ಎಲ್ಲೆ ಮೀರಿ ವರ್ತಿಸಿದ್ದಾರೆ.
https://twitter.com/Shah_151/status/1403325742335750149?s=19
ಶಕೀಬ್ ಅಲ್ ಹಸನ್ ಅವರ ಮಿತಿ ಮೀರಿದ ವರ್ತನೆ ಕಾಣಸಿಕ್ಕಿದ್ದು ಜೂನ್ 11ರ ಶ ಮಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ಮತ್ತು ಅಬಹನಿ ಲಿಮಿಟೆಡ್ ನಡುವಿನ ಪಂದ್ಯದಲ್ಲಿ. ಮಹಮ್ಮದನ್ ತಂಡದಲ್ಲಿದ್ದ ಶಕೀಬ್ ತನ್ನ ಬಾಂಗ್ಲಾದೇಶ ತಂಡದ ಸಹ ಆಟಗಾರ ಮುಸ್ತಫಿಝುರ್ ರಹೀಮ್ ವಿಕೆಟ್‌ಗಾಗಿ ಎಲ್‌ಬಿಡಬ್ಲ್ಯೂ ಅಪೀಲ್ ಮಾಡಿದರು. ಆಗ ಅಂಪೈರ್ ಔಟ್ ನೀಡಲಿಲ್ಲ.
ಅಂಪೈರ್ ತೀರ್ಪು ತನ್ನ ಪರವಾಗಿ ಬಾರದಿದ್ದರಿಂದ ಹತಾಶೆಗೊಂಡ ಶಕೀಬ್ ಸ್ಟಂಪ್ಟ್‌ಗೆ ಒದ್ದು ತನ್ನ ಸಿಟ್ಟನ್ನು ತೋರಿಕೊಂಡಿದ್ದಾರೆ. ಶಕೀಬ್ ವರ್ತನೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೇ ಪಂದ್ಯದಲ್ಲಿ ಶಕೀಬ್ ಇನ್ನೊಂದು ಸಾರಿ ಇದೇ ರೀತಿ ಎಲ್ಲೇ ಮೀರಿದ್ದು ಕಾಣಿಸಿದೆ.
This is plain and simple disgrace!! Shaikb what did you just do here.. #ShakibAlHasan pic.twitter.com/VadRo1PkNR
— Sawera Pasha (@sawerapasha) June 11, 2021
ಮತ್ತೊಂದು ಸಾರಿ ಇಂಥದ್ದೇ ರೀತಿಯ ಅಪೀಲ್‌ಗೆ ಶಕೀಬ್ ತನ್ನ ನಿಯಂತ್ರಣ ಮೀರಿ ಕೋಪ ತೋರಿಕೊಂಡಿದ್ದಾರೆ. ಅಂಪೈರ್ ಮುಂದೆಯೇ ಶಕೀಬ್ ಸ್ಟಂಪ್ಸ್ ಕಿತ್ತು ಎಸೆದಿರುವ ವಿಡಿಯೋ ಕೂಡ ಸೆರೆಯಾಗಿದೆ. ಈ ಪಂದ್ಯದಲ್ಲಿ ಮೊಹಮ್ಮದನ್ ತಂಡ 31 ರನ್ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಜಯ ಗಳಿಸಿದೆ.