ಸಂಪುಟ ಪುನರಚನೆಯ ಜೇನುಗೂಡಿಗೆ ಕೈ ಹಾಕಿರೋ ಸಿದ್ದರಾಮಯ್ಯ ಗೆ ದೊಡ್ಡ ಸವಾಲುಗಳೇ ಎದುರಾಗುತ್ತಿವೆ. ಅದ್ರಲ್ಲೂ ಸಚಿವ ಸಂಪುಟದಿಂದ ವಸತಿ ಸಚಿವ ಅಂಬರೀಷ್‌ಗೆ ಕೊಕ್ ನೀಡೋ ಸುದ್ದಿ ಹಬ್ಬುತ್ತಿದ್ದಂತೆ ಅಂಬಿ ಫುಲ್ ಗರಂ ಆಗಿದ್ದಾರೆ. ಮಾತ್ರವಲ್ಲ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಅಹ್ಮದ್ ಪಟೇಲ್ ಹಾಗೂ ಖರ್ಗೆಯೊಂದಿಗೆ ಮಾತುಕತೆ ನಡೆಸಿದ್ದಾರೆ.
ಸಂಪುಟ ಪುನಾರಚನೆ ಪಟ್ಟಿ ಸಿದ್ಧಪಡಿಸಿಕೊಂಡು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದರೂ ಅವರಿಗೆ ಸಂಕಷ್ಟ ಮಾತ್ರ ತಪ್ಪಿಲ್ಲ. ಶ್ರೀನಿವಾಸ ಪ್ರಸಾದ್ ಸಂಪುಟದಿಂದ ಕೈಬಿಟ್ಟರೆ ನೆಟ್ಟಗಿರಲ್ಲ ಎಂದು ಬಹಿರಂಗವಾಗಿ ಗುಡುಗಿದ್ದ ಬೆನ್ನಲ್ಲೇ ಅಂಬರೀಷ್ ಸಿನಿಮೀಯ ಸ್ಟೈಲ್‌ನಲ್ಲಿ ರೆಬೆಲ್ ಆಗಿದ್ದಾರೆ. ಸೋನಿಯಾಗಾಂಧಿ ಆಪ್ತ ಬಳಗದ ಅಹ್ಮದ್ ಪಟೇಲ್ ಹಾಗೂ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರೆ ಮಾಡಿ ಅವಲತ್ತುಕೊಂಡಿದ್ದಾರೆ.
ಒಂದು ವೇಳೆ ಸೋನಿಯಾ ಮೇಡಂ, ಸಿದ್ದು ಸಿದ್ಧಪಡಿಸಿದ ಪಟ್ಟಿಗೆ ಓಕೆ ಎಂದರೆ ಅಂಬಿಗೆ ಕೊಕ್ ಕಟ್ಟಿಟ್ಟ ಬುತ್ತಿ. ಅಂಬಿ ಅನಾರೋಗ್ಯ ವಿಚಾರ ಮುಂದಿಟ್ಟು, ಮುಂದಿನ ಚುನಾವಣೆ ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸಿದಲ್ಲಿ ಮೇಡಂ ಪಟ್ಟಿಗೆ ಒಪ್ಪಿಗೆ ಸೂಚಿಸುವುದರಲ್ಲಿ ಅನುಮಾನವಿಲ್ಲ. ಇದನ್ನ ಮನಗಂಡಿರೋ ಸಚಿವ ಅಂಬರೀಷ್, ಸಿಎಂಗೆ ಕರೆ ಮಾಡಿ ನಾನು ಸಚಿವ ಸ್ಥಾನವನ್ನ ತ್ಯಜಿಸಲು ಸಿದ್ಧನಿದ್ದೇನೆ ಅದ್ರೆ ಇದಕ್ಕೆ ಕೆಲವು ಷರತ್ತುಗಳಿವೆ ಎಂದಿದ್ದಾರೆ.
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟದಿಂದ ಹೊರನಡೆಯಲು ವಸತಿ ಸಚಿವ ಅಂಬರೀಷ್ ಕೊನೆಗೂ ಷರತ್ತಿನ ಮೇರೆಗೆ ಒಪ್ಪಿಗೆ ನೀಡಿದ್ದಾರೆ. ಸಂಪುಟದಿಂದ ತಮ್ಮನ್ನು ಕೈಬಿಡುವುದೇ ಆದಲ್ಲಿ ನನ್ನ ಪತ್ನಿ ಸುಮಲತಾ ಅವರನ್ನು ವಿಧಾನ ಪರಿಷತ್ ಸದಸ್ಯೆಯನ್ನಾಗಿ ಮಾಡಬೇಕು ಎನ್ನುವ ಷರತ್ತನ್ನು ಸಿಎಂ ಮುಂದಿಟ್ಟಿದ್ದಾರೆ. ಸಿನಿಮಾ ರಂಗದಿಂದ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲು ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ.
ಆದರೆ ಈ ಬಗ್ಗೆ ಸಿಎಂ ಯಾವುದೇ ಭರವಸೆ ನೀಡಿಲ್ಲವೆಂದು ತಿಳಿದು ಬಂದಿದೆ. ಸಿಎಂ ವಿರುದ್ಧ ರೆಬೆಲ್ ಆಗಿರುವ ಅಂಬರೀಷ್ ಅವರನ್ನು ಸಚಿವರಾಗಿ ಮುಂದುವರೆಸುತ್ತಾರೋ ಅಥವಾ ಸುಮಲತಾ ಅವರನ್ನು ಎಂಎಲ್‌ಸಿ ಮಾಡುತ್ತಾರೋ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಒಟ್ಟಾರೆ ಸಚಿವ ಸಂಪುಟ ಪುನರಚನೆ ಕಸರತ್ತು ಸಿದ್ದರಾಮಯ್ಯ ಪಾಲಿಗೆ ಬಿಸಿ ತುಪ್ಪವಾಗಿದೆ.
- ಶ್ರೀ
POPULAR STORIES :
ಸಿಂಹದೊಂದಿಗೆ ಪೋಸ್ ಕೊಟ್ಟ ಜಡೇಜಾ ದಂಪತಿಗೆ ಸಂಕಷ್ಟ..!
7ವರ್ಷದ ಹಿಂದೆ ಆ್ಯಕ್ಸಿಡೆಂಟ್, 3ವರ್ಷದ ಹಿಂದೆ ಹುತಾತ್ಮ, ಈಗ? ಸಿನಿಮಾ ಸ್ಟೋರಿ ಅಲ್ಲ, ಯೋಧನ ರಿಯಲ್‍ಸ್ಟೋರಿ..!
ರಾಹುಲ್ ದ್ರಾವಿಡ್ ಕೊನೆ ಏಕದಿನ ಆಟವನ್ನು ನೋಡಿಲ್ವಾ? ಇಲ್ಲಿದೆ ದ್ರಾವಿಡ್ ಕೊನೆ ಪಂದ್ಯದ ಅದ್ಭುತ ಆಟ
ಮೂಢನಂಬಿಕೆ ಆಚರಣೆ ಕಾಯಿದೆ ಜಾರಿಗೆ ಬರುವುದೇ..?
ಸ್ನೇಹ ಸಂಪತ್ತು… ಫ್ರೆಂಡ್ಶಿಪ್ ಅಂದ್ರೆ ಅದೆಂಥಾ ತ್ಯಾಗ..!
ಪರೀಕ್ಷೆಯಲ್ಲಿ ಏನೂ ಬರೀದೇನೆ 100/100 ಅಂಕ..! 12ನೇ ತರಗತಿಯ ವಿದ್ಯಾರ್ಥಿ ಮಾಡಿದ ಖತರ್ನಾಕ್ ಐಡಿಯಾ ಏನು ಗೊತ್ತಾ..?
ಚೀನಾದಲ್ಲಿ ಬೆತ್ತಲೆ ಚಿತ್ರ ಕೊಟ್ರೆ ಲೋನ್ ಕೊಡ್ತಾರೆ..! ಮಹಿಳೆಯರ ನಗ್ನ ಚಿತ್ರವೇ ಲೋನ್‍ಗೆ ಶೂರಿಟಿ…!
ಬೊಕ್ಕುತಲೆ ಕಸಿ, ವಿಗ್ ಜೋಡಣೆ ಚಟುವಟಿಕಿಗೆ ಬ್ರೇಕ್ : ಯು.ಟಿ ಖಾದರ್
ಜ್ಯೇಷ್ಟಮಧುವೆಂಬ ಶ್ರೇಷ್ಟ ಔಷಧಿ | ಅಸಿಡಿಟಿ, ಹೊಟ್ಟೆ ಉರಿ ಅಥವಾ ಜಠರದ ಹುಣ್ಣಿನಲ್ಲಿ ಇದು ಶಮನಕಾರಿ