ಹಿರಿಯ ನಟಿ ನೀನಾ ಗುಪ್ತಾರ ಆತ್ಮಕತೆ ‘ಸಚ್ ಬೋಲು ತೋ’ ಪುಸ್ತಕ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಪುಸ್ತಕದಲ್ಲಿ ತಾವು ಎದುರಿಸಿದ ಸನ್ನಿವೇಶಗಳು, ಹಲವು ದೊಡ್ಡವರ ಸಣ್ಣತನಗಳು, ಮದುವೆ ಆಗದೆ ತಾಯಾಗಿದ್ದು, ಆಗ ಅನುಭವಿಸಿದ ಕಷ್ಟಗಳು ಎಲ್ಲವನ್ನೂ ದಾಖಲಿಸಿದ್ದಾರೆ.
ಮದುವೆ ಆಗದೆ ವೆಸ್ಟ್ ಇಂಡೀಸ್ ಕ್ರಿಕೆಟರ್ ವಿವಿಯನ್ ರಿಚರ್ಡ್ಸ್ ಮಗಳಿಗೆ ತಾಯಿಯಾದ ಬಗ್ಗೆ ವಿವರವಾಗಿ ಪುಸ್ತಕದಲ್ಲಿ ಬರೆದಿದ್ದಾರೆ ನೀನಾ ಗುಪ್ತ. ಅದು ಮಾತ್ರವೇ ಅಲ್ಲದೆ ಸಿನಿಮಾರಂಗಕ್ಕೆ ಸಂಬಂಧಿಸಿದಂತೆ ಕೆಲವು ಮುಖ್ಯ ನಿರ್ದೇಶಕರಿಗೆ ಸಂಬಂಧ ಪಟ್ಟಂತೆಯೂ ಹಲವು ಘಟನೆಗಳನ್ನು ಬರೆದಿದ್ದಾರೆ. ಬಾಲಿವುಡ್‌ನಲ್ಲಿ ತಾವೆದುರಿಸಿದ ಒಳ್ಳೆಯ, ಕೆಟ್ಟ ಘಟನೆಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ ನೀನಾ.
ಖ್ಯಾತ ನಿರ್ದೇಶಕ ಡೇವಿಡ್ ಧವನ್ ಸೆಟ್‌ನಲ್ಲಿಯೇ ತಮ್ಮನ್ನು ಕೆಟ್ಟದಾಗಿ ಬೈದಿದ್ದ ಘಟನೆಯನ್ನು ನೀನಾ ಗುಪ್ತ ನೆನಪು ಮಾಡಿಕೊಂಡಿದ್ದಾರೆ.
ಈನ ಮೀನಾ ಡೀಕ’ ಸಿನಿಮಾದಲ್ಲಿ ನೀನಾ ಗುಪ್ತಾಗೆ ಭಿಕ್ಷುಕಿಯ ಪಾತ್ರ. ನೀನಾ ಗುಪ್ತಾ ನಿರ್ದೇಶಕ ಡೇವಿಡ್ ಧವನ್ ಬಳಿ ಹೋಗಿ ‘ನನ್ನ ಪಾತ್ರಕ್ಕೆ ಸಂಭಾಷಣೆ ಇಲ್ಲ ಯಾವುದಾದರು ಸಂಭಾಷಣೆ ಕೊಡಿ’ ಎಂದು ಕೇಳಿದ್ದಾರೆ. ಇಷ್ಟಕ್ಕೆ ಸಿಟ್ಟಾದ ಡೇವಿಡ್ ಧವನ್ ಎಲ್ಲರೆದರು ನೀನಾರನ್ನು ಚೆನ್ನಾಗಿ ಬೈದಿದ್ದರು. ಅಳಲು ಪ್ರಾರಂಭಿಸಿದ ನೀನಾರನ್ನು ಸಮಾಧಾನ ಮಾಡಿದ್ದು ಆ ಸಿನಿಮಾದ ನಾಯಕಿ ಆಗಿದ್ದ ಜೂಹಿ ಚಾವ್ಲಾ.
ಮತ್ತೊಂದು ಘಟನೆ ಸಂಜಯ್ ದತ್ ನಟಿಸಿರುವ ‘ಖಳನಾಯಕ್’ ಸಿನಿಮಾದ ಜನಪ್ರಿಯ ‘ಚೋಲಿ ಕೆ ಪೀಚೆ ಕ್ಯಾಹೇ’ ಹಾಡಿಗೆ ಸಂಬಂಧಿಸಿದ್ದು. ಆ ಹಾಡಿನಲ್ಲಿ ಮಾಧುರಿ ದೀಕ್ಷಿತ್ ಜೊತೆಗೆ ನೀನಾ ಗುಪ್ತ ಸಹ ಇದ್ದಾರೆ. ಹಾಡಿನಲ್ಲಿ ಗುಜರಾತಿ ವೇಷ ಭೂಷಣ ಹಾಕಿಕೊಂಡು ನಟಿಯರು ನರ್ತಿಸಿದ್ದಾರೆ.
ಮೇಲಂಗಿಗೆ ಏನಾದರೂ ತುರುಕಿ ಎಂದು ಕಿರುಚಿದ್ದ ಸುಭಾಷ್ ಘಾಯ್
ನೀನಾ ಗುಪ್ತ ಸಹ ಗುಜರಾತಿ ಉಡುಪು ಧರಿಸಿ ಸೆಟ್‌ನಲ್ಲಿದ್ದರಂತೆ. ಅಲ್ಲಿಗೆ ಬಂದ ನಿರ್ದೇಶಕ ಸುಭಾಷ್ ಘಾಯ್ ನೀನಾರನ್ನು ನೋಡಿದ ಕೂಡಲೇ ಆಕೆಯ ಮೇಲಂಗಿಯ ಒಳಕ್ಕೆ ಯಾವುದಾದರೂ ಬಟ್ಟೆ ತುರುಕಿ ಎಂದರಂತೆ. ಸ್ತನಗಳು ದೊಡ್ಡದಾಗಿ ಕಾಣಬೇಕೆಂಬುದು ಸುಭಾಷ್ ಘಾಯ್ ಬಯಕೆಯಾಗಿತ್ತು. ಅದರಂತೆ ಪ್ರಸಾದನ ಕಲಾವಿದರು ನೀನಾರ ಮೇಲಂಗಿಯ ಒಳಕ್ಕೆ ಪ್ಯಾಡ್‌ಗಳನ್ನು ತುರುಕಿ ಸ್ತನ ದೊಡ್ಡದಾಗಿ ಕಾಣುವಂತೆ ಮಾಡಿದ ಬಳಿಕ ಚಿತ್ರೀಕರಣ ಆರಂಭವಾಯಿತಂತೆ
1980ರ ಸಮಯದಲ್ಲಿ ವೆಸ್ಟ್ ಇಂಡೀಸ್‌ನ ಖ್ಯಾತ ಕ್ರಿಕೆಟರ್ ವಿವಿಯನ್ ರಿಚರ್ಡ್ಸ್ ಜೊತೆ ಪ್ರೇಮದಲ್ಲಿದ್ದ ನೀನಾ ಗುಪ್ತಾ, ರಿಚರ್ಡ್ಸ್ ಮಗಳಿಗೆ ತಾಯಿಯಾದರು. ಒಬ್ಬರೇ ಮಗಳು ಮಸಾಬಾ ಅನ್ನು ಬೆಳೆಸಿದರು. ನಂತರ 2008 ರಲ್ಲಿ ವಿವೇಕ್ ಮೆಹ್ರಾ ಎಂಬುವರನ್ನು ಸರಳ ಸಮಾರಂಭದಲ್ಲಿ ಮದುವೆಯಾದರು.
‘ಸಚ್ ಕಹೂ ತೋ’ ಪುಸ್ತಕದಲ್ಲಿ ಹಲವು ವಿಷಯ ಬಹಿರಂಗಗೊಳಿಸಿದ್ದಾರೆ
‘ಸಚ್ ಕಹೂ ತೋ’ ಪುಸ್ತಕದಲ್ಲಿ ತಮ್ಮ ಜೀವನದ ಹಲವಾರು ವಿಷಯಗಳನ್ನು ನೀನಾ ಗುಪ್ತಾ ಹೊರಹಾಕಿದ್ದಾರೆ. ತಾವು ಗರ್ಭಿಣಿ ಆಗಿದ್ದಾಗಲೂ ನಟ ಸತೀಶ್ ಕೌಶಿಕ್ ಮದುವೆ ಆಗಲು ಮುಂದೆ ಬಂದಿದ್ದು. ವಿವಿಯನ್ ರಿಚರ್ಡ್ಸ್ ಸಹ ಮದುವೆ ಆಗುತ್ತೇನೆಂದು ಹೇಳಿದಾಗ ತಾವು ಬೇಡ ಎನ್ನಲು ಕಾರಣ ಹಲವು ವಿಷಯಗಳನ್ನು ನೀನಾ ಗುಪ್ತ ಆತ್ಮಕತೆಯನ್ನು ಬರೆದಿದ್ದಾರೆ.