ಕೋವಿಡ್ ಲಾಕ್‌ಡೌನ್‌ನಿಂದ ಸ್ಥಗಿತವಾಗಿದ್ದ ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರ ಪುನಾರಂಭವಾಗಿದೆ. ಶಿವಮೊಗ್ಗ ಜಿಲ್ಲೆಯಿಂದಲೂ ಹಲವಾರು ಬಸ್‌ಗಳು ವಿವಿಧ ಕಡೆಗೆ ಹೊರಟಿವೆ.
ಎರಡು ತಿಂಗಳು ಡಿಪೋದಲ್ಲಿದ್ದ ಬಸ್ಸುಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡಿ, ನಿಲ್ದಾಣಕ್ಕೆ ತರಲಾಗಿದೆ. ಪ್ರಯಾಣಿಕರ ಆದ್ಯತೆಗೆ ಅನುಗುಣವಾಗಿ ವಿವಿಧ ಮಾರ್ಗದಲ್ಲಿ ಬಸ್‌ಗಳ ಸಂಚಾರ ಆರಂಭಿಸಲಾಗಿದೆ.
ಕರ್ನಾಟಕ ಸರ್ಕಾರದ ಮಾರ್ಗಸೂಚಿಯಂತೆ ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಪ್ರತಿ ಸೀಟಿನಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ.
ಎಲ್ಲೆಲ್ಲಿಗೆ ಬಸ್ ಸಂಚಾರ; ಶಿವಮೊಗ್ಗದಿಂದ ಹಲವು ಮಾರ್ಗಗಳಿಗೆ ಬಸ್ ಸಂಚಾರ ಆರಂಭಿಸಲಾಗಿದೆ. ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ತುಮಕೂರು, ಶಿಕಾರಿಪುರ, ಸಾಗರ, ಹೊಸನಗರ, ಭದ್ರಾವತಿ, ತೀರ್ಥಹಳ್ಳಿ, ಸೊರಬ, ಹರಿಹರ, ಕಡೂರು, ತರೀಕೆರೆ, ಚನ್ನಗಿರಿಗೆ ಬಸ್ ಸಂಚಾರ ಆರಂಭವಾಗಿದೆ.
“ಸುಮಾರು 150 ಬಸ್‌ಗಳು ಸೋಮವಾರ ರಸ್ತೆಗಿಳಿದಿವೆ. ತಾಲೂಕು ಮತ್ತು ಆಯ್ದ ಜಿಲ್ಲಾ ಕೇಂದ್ರಗಳಿಗೆ ಬಸ್ ಸಂಚಾರ ಆರಂಭವಾಗಿದೆ. ಪ್ರಯಾಣಿಕರ ಆದ್ಯತೆ ಮೇರೆಗೆ ಗ್ರಾಮೀಣ ಭಾಗಕ್ಕೆ ಸಂಚಾರ ಕಲ್ಪಿಸಲಾಗುತ್ತದೆ” ಎಂದು ಶಿವಮೊಗ್ಗ ಕೆಎಸ್‌ಆರ್‌ಟಿಸಿ ವಿಭಾಗೀಯ ಡಿಸಿ ನವೀನ್ ಕುಮಾರ್ ತಿಳಿಸಿದ್ದಾರೆ.
ಬಣಗುಡುತ್ತಿದೆ ಖಾಸಗಿ ನಿಲ್ದಾಣ; ಸರ್ಕಾರಿ ಸಾರಿಗೆ ಬಸ್ ಸಂಚಾರ ಆರಂಭವಾಗಿದೆ. ಆದರೆ ಜಿಲ್ಲೆಯ ಜೀವನಾಡಿಯಾಗಿರುವ ಖಾಸಗಿ ಬಸ್ ಸಂಚಾರ ಶುರುವಾಗಿಲ್ಲ. ಹಾಗಾಗಿ ಖಾಸಗಿ ಬಸ್ ನಿಲ್ದಾಣ ಬಣಗುಡುತ್ತಿದೆ.
ಶಿವಮೊಗ್ಗದ ಸಿಟಿ ಬಸ್ಸುಗಳು ಕೂಡ ರಸ್ತೆಗಿಳಿಯಲು ಅವಕಾಶ ನೀಡಿಲ್ಲ. ಸದ್ಯ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭವಾಗಿರುವುದರಿಂದ ದೂರದ ಊರುಗಳಿಗೆ ತೆರಳುವವರು ನಿಟ್ಟುಸಿರು ಬಿಡುವಂತಾಗಿದೆ.