ವಿಚಿತ್ರ: ಮಾಂತ್ರಿಕನಿಂದ ಮಹಿಳೆ ಮೇಲೆ ಕನಸಿನಲ್ಲೇ ಅತ್ಯಾಚಾರ!

Date:

ರಾತ್ರಿ ಕನಸಿನಲ್ಲಿ ಮಾಂತ್ರಿಕನೊಬ್ಬ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಈ ಘಟನೆ ಬಿಹಾರದ ಔರಂಗಾಬಾದ್‌ನಲ್ಲಿ ನಡೆದಿದೆ, ದೂರಿನಲ್ಲಿ ಹೇಳಿರುವಂತೆ, ಅನಾರೋಗ್ಯದಿಂದ ಮಗನಿಗಾಗಿ ಮಹಿಳೆ ಪ್ರಶಾಂತ್ ಚತುರ್ವೇದಿ ಎಂಬ ಮಾಂತ್ರಿಕನ ಬಳಿಗೆ ಹೋಗಿದ್ದು, ಆತ ಕೆಲವು ಪೂಜೆಗಳನ್ನು ಮಾಡಿ ಕೆಲ ಮಂತ್ರಗಳನ್ನು ಉಪದೇಶಿಸಿದ್ದನಂತೆ. ಆದರೆ ಆಕೆಯ ಮಗ ಗುಣಮುಖನಾಗದೇ 15 ದಿನಗಳ ನಂತರ ಸಾವನ್ನಪ್ಪಿದ್ದಾನೆ.

ನಂತರ ಮಾಂತ್ರಿಕ ವಾಸಿಸುತ್ತಿದ್ದ ಕಾಳಿ ಬರಿ ದೇವಾಲಯಯಕ್ಕೆ ಹೋದ ಮಹಿಳೆ ತನ್ನ ಮಗ ಹೇಗೆ ಸತ್ತ ಎಂದು ಹೇಳುವಂತೆ ಆಕ್ರೋಶದಿಂದ ಕೇಳಿದ್ದಳಂತೆ.

ಆ ಸಂದರ್ಭದಲ್ಲಿ ಮಾಂತ್ರಿಕ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ, ಆದರೆ ಸತ್ತ ನನ್ನ ಮಗ ನನ್ನ ರಕ್ಷಣೆ ಮಾಡಿದ ಎಂದು ಹೇಳಿರುವ ಮಹಿಳೆ, ಅಂದಿನಿಂದ ಪ್ರತಿ ರಾತ್ರಿ ತನ್ನ ಕನಸಿನಲ್ಲಿ ಬರುವ ಮಾಂತ್ರಿಕ ಅತ್ಯಾಚಾರ ನಡೆಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.

ದೂರು ಪಡೆದ ಪೊಲೀಸರು ಪ್ರಶಾಂತ್ ಚತುರ್ವೇದಿಯನ್ನು ವಿಚಾರಣೆ ನಡೆಸಿದಾಗ ಆ ಮಹಿಳೆಯ ಪರಿಚಯವೇ ಇಲ್ಲ ಎಂದು ಹೇಳಿದ್ದಾನೆ. ಇನ್ನು ಆತನ ವಿರುದ್ಧ ಯಾವುದೇ ಸಾಕ್ಷಿ ಇಲ್ಲದ ಕಾರಣ ಪೊಲೀಸರು ಆತನನ್ನು ಬಿಟ್ಟು ಕಳುಹಿಸಿದ್ದಾರೆ.

ಆಗಿದ್ದೇನೆಂದರೆ ದೂರು ನೀಡಿರುವ ಮಹಿಳೆಯ ಪುತ್ರನಿಗೆ ತೀವ್ರ ಅನಾರೋಗ್ಯ ಕಾಡಿತ್ತು‌. ಈ ಬಗ್ಗೆ ಮಾಟಗಾರನನ್ನು ಸಂಪರ್ಕಿಸಲು ಯಾರೋ ನೀಡಿದ ಸಲಹೆ ಮೇರೆಗೆ ಮಹಿಳೆ ಪ್ರಶಾಂತ್ ಚತುರ್ವೇದಿ ಎಂಬ ಮಾಟಗಾರನನ್ನು ಸಂಪರ್ಕಿಸಿದ್ದಾಳೆ. ಆತ ಅನಾರೋಗ್ಯ ಪೀಡಿತ ಪುತ್ರನಿಗೆ ಕೆಲವು ಮಂತ್ರ ಜಪಿಸುವಂತೆ ಹೇಳಿದ್ದಾನೆ‌. ಆದ್ರೆ ಮುಂದೆ ಕೆಲ ದಿನಗಳಲ್ಲಿ ಆಕೆಯ ಪುತ್ರ ಸಾವನ್ನಪ್ಪಿದ್ದಾನೆ.

ಇದೇ ವಿಷಯ ಮಂತ್ರವಾದಿಗೆ ತಿಳಿಸಲು ಹೋದಾಗ ಆತ ಕಾಳಿಕಾ ದೇವಸ್ಥಾನಕ್ಕೆ ಬರಲು ಹೇಳಿದ್ದಾನೆ. ಅಲ್ಲಿ ಹೋದಾಗ ಆ ಮಾಟಗಾರ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾ‌ನೆ ಎನ್ನಲಾಗಿದೆ. ಇದರಿಂದ ಜರ್ಜರಿತಳಾದ ಮಹಿಳೆಯ ಕನಸಲ್ಲಿ ಅದೇ ದೃಶ್ಯ ಕಾಣುತ್ತಿದೆ. ಈ ಬಗ್ಗೆ ಮಹಿಳೆ ಪೊಲೀಸರ ಬಳಿ ಅವಲತ್ತುಕೊಂಡ ನಂತರ ವಿಚಾರಣೆ ನಡೆಸಿದ ಪೊಲೀಸರು ಮಾಟಗಾರನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಆದರೆ ಸಾಕ್ಷ್ಯಾಧಾರಗಳಿಲ್ಲದ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಆದರೆ ಈ ನಡುವೆ ಮಹಿಳೆಗೆ ಮತ್ತದೇ ಕನಸಿನ ಆತಂಕ ಕಡಿಮೆಯಾಗಿಲ್ಲ ಎನ್ನಲಾಗಿದೆ.

 

 

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...