ನಾಯಿ ಮಾಂಸ ಅಂದ ತಕ್ಷಣ ಕ್ಷಣ ವಿಚಲಿತರಾಗ್ಬಿಟ್ರೇನು?ಹೌದು!ಈ ತರನಾದ ಒಂದು ಹುಚ್ಚುಕೆಲಸ ಮಾಡೊ ಸಾಹಸ ಚೀನಿಯರದಲ್ಲದೇ ಇನ್ಯಾರಿಂದ ಸಾಧ್ಯ.ದಕ್ಷಿಣ ಚೈನಾದ ಪ್ರಾಂತ್ಯವಾದ ಯೂಲಿನ್ ಪ್ರತೀ ವರ್ಷವೂ ನಾಯಿ ತಿನ್ನುವ ಹಬ್ಬಕ್ಕೆ ಪ್ರಸಿದ್ದಿ ಪಡೆದಿರುವಂಥಾ ಒಂದು ಪ್ರದೇಶ. ಇಲ್ಲಿ ಕಳೆದ ಅನೇಕ ವರ್ಷದಿಂದೀಚೆಗೆ ಈ ತರದ ನಾಯಿ ಮಾಂಸದ ಮೇಳ ನಡೆಯುತ್ತಿದೆ. 10 ದಿನಗಳ ಸಂತೆ ಇದಾಗಿದ್ದು ಇಲ್ಲಿ ಸುಮಾರು 15 ಸಾವಿರದ ತನಕ ನಾಯಿಗಳ ಮಾರಾಟ ನಡೆಯುತ್ತದೆ. ಅಂದರೆ ಮೊದಲಿಗೆ ನಾಯಿ ಮಾರುವವರು ಕಸಾಯಿಗೆ ನಾಯಿಗಳನ್ನು ಮಾರಾಟ ಮಾಡುತ್ತಾರೆ ಆಮೇಲೆ ಈ ಕಸಾಯಿಗಳು ಆ ನಾಯಿಗಳನ್ನು ಸಾಯಿಸಿ ಅದರ ದ್ವಿಗುಣ ಬೆಲೆಗೆ ಮಾರುತ್ತಾರೆ. ನಿರ್ಜನ ಪ್ರದೇಶದಿಂದ, ಹಳ್ಳಿಗಳಿಂದ ಹಾಗೂ ಸಿಕ್ಕ ಸಿಕ್ಕ ಕಡೆಗಳಿಂದೆಲ್ಲೋ ಈ ನಾಯಿಗಳನ್ನು ಕದ್ದು ಕೊಂಡು ಬಂದು ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ ಸತ್ತು ಹೋದ ಹಾಗೂ ಕಾಯಿಲೆ ಪೀಡಿತ ನಾಯಿಗಳೂ ಸೇರಿರುತ್ತವೆ.
ಈ ಹಬ್ಬವನ್ನು ಸಂಪೂರ್ಣವಾಗಿ ತಡೆಗಟ್ಟಬೇಕೆಂದು ನ್ಯೂಯಾರ್ಕ್ ನ ಪ್ರಾಣಿ ಪರಸಂಘವು ಚೀನಾ ಸರಕಾರದ ಮೇಲೆ ಒತ್ತಡವನ್ನು ತರುತ್ತಿದೆ.ಕಳೆದೆರಡು ವರ್ಷದಿಂದೀಚೆಗೆ ಚೀನಾದ ಪ್ರಾಣಿದಯಾಪರಸಂಘದ ಕಾರ್ಯಕರ್ತರು ಇದನ್ನು ವಿರೊಧಿಸುತ್ತಿದ್ದು, ಚೀನೀ ಸರಕಾರದ ವಿರುದ್ದ ದೂರನ್ನು ದಾಖಲಿಸಲಾಗಿದೆ.ಇದಕ್ಕೆ ಪ್ರಪಂಚದೆಲ್ಲೆಡೆಯಿಂದ ಸರಿ ಸುಮಾರು 11 ಮಿಲಿಯನ್ ಜನರ ಸಹಕಾರವಿದೆ ಹಾಗೂ ಅವರ ಸಹಿ ಹಾಕಲಾಗಿದೆ.ಇದೊಂದು ಅಭೂತಪೂರ್ವ ಸಹಕಾರದ ದೂರು ಎಂದು ಹೇಳಲ್ಪಟ್ಟಿದೆ. ಚೈನಾದಲ್ಲಿ ಪ್ರಾಣಿ ಹತ್ಯೆ ವಿರೋಧಿಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿದ್ದು, ಕಾರಣ ಇಲ್ಲಿಯ ಪ್ರಜೆಗಳಲ್ಲಿ 60% ಮಂದಿ ನಾಯಿಯನ್ನು ಸಾಕುತ್ತಿದ್ದಾರೆ.2015ರ ಸಮೀಕ್ಷೆಯ ಪ್ರಕಾರ ಪ್ರತೀ 13 ಮಂದಿಯಲ್ಲಿ ಒಬ್ಬನು ನಾಯಿಯನ್ನು ಸಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ನಾಯಿ ತಿನ್ನೋ ಪ್ರಕ್ರಿಯೆ ಚೀನಾದ ಹಳೆಯ ನಾಗರೀಕತೆಯಲ್ಲಿ ಒಂದಾಗಿದೆ. ಸರಿ ಸುಮಾರು 400 ವರ್ಷಕ್ಕೂ ಮೇಲ್ಪಟ್ಟು ಈ ಕಾಳ ಸಂತೆ ವ್ಯವಹಾರವು ಇಲ್ಲಿ ನಡೆಯುತ್ತಿದೆ. ಈ ನಾಯಿ ಮಾಂಸವು ಬೇಸಗೆಯ ತಿಂಗಳಿನಲ್ಲಿ ದೇಹದೊಳಗೆ ಸೇರ್ಪಟ್ಟ ಉಷ್ಣಾಂಷವನ್ನು ಹೊರಹಾಕುತ್ತದೆ ಎಂದು ಅಲ್ಲಿಯ ಜನರ ನಂಬಿಕೆ. ಚೀನಾದ ಪ್ರಾಣಿ ದಯಾಪರ ಸಂಘದ ಕಾರ್ಯಕರ್ತರು ಇತ್ತೀಚೆಗೆ 2011 ರಲ್ಲಿ ಚೀನಾದ ಪೂರ್ವ ಪ್ರಾಂತ್ಯವಾದ ಝೆಜ್ಯಾಂಗ್ನಲ್ಲಿ ಈ ವ್ಯವಹಾರ ನಡೆಯುವುದನ್ನು ಸಂಪೂರ್ಣವಾಗಿ ತಡೆಗಟ್ಟಿದ್ದಾರೆ.
ಇಲ್ಲಿಯ ಸ್ಥಳೀಯರು ಇದರಲ್ಲಿ ಯಾವ ಸರಕಾರದ ಹಸ್ತಕ್ಷೇಪವನ್ನೂ ಸಹಿಸುತ್ತಿಲ್ಲ ಬದಲಾಗಿ ಇದು ನಮ್ಮ ಹಳೆಯ ಪರಂಪರೆ ಎನ್ನುತ್ತಾರೆ. ದೇಶದೆಲ್ಲೆಡೆಯ ಪ್ರಾಣಿಪರ ಸಂಘದ ಕಾರ್ಯಕರ್ತರು ಚೀನಟೌನ್ ನಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿ ನಾಯಿಗಳಿಗೆ ನೇರಳೆ ರಿಬ್ಬನ್ ಕಟ್ಟುವುದರ ಮೂಲಕ ಪ್ರಾಣಿಹತ್ಯೆ ನಿಷೇದದ ಸಂದೇಶವನ್ನು ಸಾರುತ್ತಿದ್ದಾರೆ.
- ಸ್ವರ್ಣಲತ ಭಟ್
POPULAR STORIES :
ಅಷ್ಟಕ್ಕೂ ರಜನಿ ಹೀಗೇಕೆ ಮಾಡಿದ್ಲು? ಪ್ರೀತಿಸಿದ ಹುಡುಗ ಮತ್ತು ಅಪ್ಪ, ಅಮ್ಮ, ಅಣ್ಣ.!
`ರೋಬೋಫೀಲಿಯಾ’ ಇದು `ಫ್ಯೂಚರ್ ಆಫ್ ಸೆಕ್ಸ್’
ನಿಮ್ಮ ರೂಂಮೇಟ್ ನ ಗೊರಕೆ ತಪ್ಪಿಸಬೇಕೇ?? ಇಲ್ಲಿದೆ ಉಪಾಯ…
ದರ್ಭೆಯನ್ನುಪವಿತ್ರವಾಗಿ ಶುಭ ಹಾಗೂ ಅಶುಭ ಸಂದರ್ಭಗಳಲ್ಲಿ ನಮ್ಮಬಲಕೈ ಬೆರಳಲ್ಲಿ ಯಾಕೆ ಧರಿಸುತ್ತೇವೆ????
ಗೀತಾ ಟಂಡನ್ ಖತರ್ನಾಕ್ ಸ್ಟಂಟ್ ಮಹಿಳೆಯ ಕಥೆ..!
ಮಿನಿಸ್ಟರ್ ಗಿರಿ ಬಿಟ್ಟುಕೊಡ್ತಾರಂತೆ ಅಂಬಿ… ಆದ್ರೆ ಕಂಡೀಷನ್ಸ್ ಅಪ್ಲೈ…!!
ಸಿಂಹದೊಂದಿಗೆ ಪೋಸ್ ಕೊಟ್ಟ ಜಡೇಜಾ ದಂಪತಿಗೆ ಸಂಕಷ್ಟ..!
7ವರ್ಷದ ಹಿಂದೆ ಆ್ಯಕ್ಸಿಡೆಂಟ್, 3ವರ್ಷದ ಹಿಂದೆ ಹುತಾತ್ಮ, ಈಗ? ಸಿನಿಮಾ ಸ್ಟೋರಿ ಅಲ್ಲ, ಯೋಧನ ರಿಯಲ್‍ಸ್ಟೋರಿ..!
ರಾಹುಲ್ ದ್ರಾವಿಡ್ ಕೊನೆ ಏಕದಿನ ಆಟವನ್ನು ನೋಡಿಲ್ವಾ? ಇಲ್ಲಿದೆ ದ್ರಾವಿಡ್ ಕೊನೆ ಪಂದ್ಯದ ಅದ್ಭುತ ಆಟ