ವಿದೇಶದಲ್ಲಿ ಕೆಲಸ ಪಡೆಯುವ ಆಸೆಗೆ ಬಿದ್ದು ಮೋಸ ಹೋಗಬೇಡಿ. ಅಂಗೈಯಲ್ಲಿ ಆಕಾಶ ತೋರಿಸಿ ನಾಮ ಹಾಕುವ ಬೋಗಸ್ ಕಂಪನಿಗಳು ಮೋಸ ಮಾಡಲೆಂದೇ ಹುಟ್ಟಿಕೊಂಡಿವೆ. ವಿದೇಶದಲ್ಲಿ ಕೆಲಸ ಕೊಡಿಸುವ ಆಸೆ ಹುಟ್ಟಿಸಿ ನಿರುದ್ಯೋಗಿಗಳಿಂದ ಲಕ್ಷಾಂತರ ಹಣ ಪಡೆದು ಮೋಸ ಮಾಡಿದ್ದ ಕಂಪನಿಯೊಂದರ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಕೆನಡಾದ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಕೊಡಿಸುವ ಆಸೆ ತೋರಿಸಿ ವಿಆರ್‌ಆರ್ ವೆಂಚರ್ಸ್ ಪ್ರೆ. ಲಿಮಿಟೆಡ್ ನೂರಾರು ನಿರುದ್ಯೋಗಿ ಯುವಕರಿಂದ ಲಕ್ಷಾಂತರ ಹಣ ಪಡೆದು ಮೋಸ ಮಾಡಿದೆ. ಹಣ ಕಳೆದುಕೊಂಡು ಬೀದಿಗೆ ಬಿದ್ದಿರುವ ಯುವಕರು ಕಂಪನಿ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಕಂಪನಿ ಮುಖ್ಯಸ್ಥರಿಗಾಗಿ ಶೋಧ ನಡೆಸುತ್ತಿದ್ದಾರೆ.
ಕೆನಡಾದ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ವಿಆರ್ಆರ್ ವೆಂಚರ್ಸ್ ಜಾಹೀರಾತು ನೀಡಿತ್ತು. ಇದನ್ನು ನಂಬಿ ನೂರಾರು ಯುವಕರು ಸಂದರ್ಶನಕ್ಕೆ ಬಂದಿದ್ದರು.
ಕೆನಡಾದ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕಿರುವ ಬಗ್ಗೆ ನಕಲಿ ಲೆಟರ್ ಹೆಡ್ ಗಳಲ್ಲಿ ನೇಮಕಾತಿ ಆದೇಶ ವಿಆರ್‌ಆರ್ ವೆಂಚರ್ಸ್ ನೀಡಿರುವುದು ನಕಲಿ ನೇಮಕಾತಿ ಪತ್ರಗಳು ಎಂಬುದು ಗೊತ್ತಾಗಿದೆ. ಆ ಬಳಿಕ ಕಂಪನಿಯ ಕಚೇರಿಗೆ ಹೋಗಿ ಹಣ ವಾಪಸು ನೀಡುವಂತೆ ಕೇಳಿದ್ದಾರೆ. ಇದಕ್ಕೆ ಯಾವುದೇ ಉತ್ತರ ನಿಡದೇ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ಯುವಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ದೇಶ- ವಿದೇಶದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಹುಟ್ಟಿಕೊಂಡಿರುವ ಅನೇಕ ಕನ್ಸಲ್ಟೆನ್ಸಿ ಏಜೆನ್ಸಿಗಳು ಜನರಿಂದ ನೋಂದಣಿ ಶುಲ್ಕ, ನೇಮಕಾತಿ ಶುಲ್ಕ ಹೆಸರಿನಲ್ಲಿ ವಸೂಲಿ ಮಾಡುವ ಜಾಲ ಬೆಂಗಳೂರಿನಲ್ಲಿ ಮೊದಿನಿಂದಲೂ ನಡೆದುಕೊಂಡು ಬರೆತ್ತಿದೆ. ಇದೀಗ ವಿದೇಶದಲ್ಲಿ ಕೆಲಸ ಕೊಡಿಸುವ ಆಸೆ ಹುಟ್ಟಿಸಿ ಅಮಾಯಕ ಯುವಕರಿಗೆ ಕೆಲಸದ ಆಮಿಷ ತೋರಿಸಿ ಪ್ರತಿಷ್ಠಿತ ಕಂಪನಿಗಳ ಸೋಗಿನಲ್ಲಿ ಬೀದಿಗೆ ತಳ್ಳುತ್ತಿವೆ.