68 ನೇ ವಯಸ್ಸಿನ ತಾತ 10ನೇ ತರಗತಿಯ ವಿದ್ಯಾರ್ಥಿ..!!

Date:

ಈ ಭೂಮಿಯಲ್ಲಿ ಸಾವಿಗಿಂತ ಕ್ರೂರ ಬೇರೇನೂ ಇಲ್ಲ.ಅದೂ ಒಬ್ಬರನ್ನು ಕಳಕೊಂಡಾಗ,ಅದ್ರಲ್ಲೂ ತೀರ ಸನಿಹದಲ್ಲಿದ್ದವರನ್ನು ಕಳಕೊಂಡಾಗ ಆಗೋ ನೋವು ಸಹಿಸಲಸಾಧ್ಯ.ಈ ನೋವಿನಿಂದ ಹೊರಬರಲು,ಒಬ್ಬಂಟಿತನವನ್ನ ನೀಗಲು ನಾವು ನಮ್ಮದೇ ಹಾದಿನ ಆರಿಸ್ಕೊಳ್ತೀವಿ.ಇದೇ ತರದಲ್ಲಿ ಇಲ್ಲೊಬ್ಬ 68 ವಯಸ್ಸಿನ ತಾತ ತನ್ನ ಹಾದಿನ ಹುಡ್ಕೊಂಡ್ಬಿಟ್ತಿದ್ದಾರೆ.ಈತ ನೇಪಾಳದಲ್ಲಿ ವಾಸವಾಗಿರೋ ದುರ್ಗಾ ಕಮಿ.

ದುರ್ಗಾ ಕಮಿ ತನ್ನ ಹೆಂಡತಿಯನ್ನು ಕಳಕೊಂಡ್ ಬಿಟ್ಟ ನತದೃಷ್ಟ.ಎಲ್ಲರಂತೆ ಹೆಂಡತಿಯ ಬಗ್ಗೆ ಕೊರಗುತ್ತಾ ಕೂರದೆ,ಖಿನ್ನತೆ ಹಾಗೂ ಒಂಟಿತನಕ್ಕೊಳಗಾಗದೆ ದಿಟ್ಟ ಹೆಜ್ಜೆ ಇಡುವತ್ತ ಮುಂದಾದರು.

ಶುಭ್ರ ಸಮವಸ್ತ್ರ ಧರಿಸಿ ಕಾಲಿಗೆ ಸೋಕ್ಸ್ ತೊಟ್ಟು,ಕೈಯಲ್ಲಿ ವಾಕಿಂಗ್ ಸ್ಟಿಕ್ ಹಿಡಿದು ಹೊರಡುವಲ್ಲಿಂದ ಅವರ ದಿನಚರಿ ಆರಂಭ.ಶಾಲಾ ಚಟುವಟಿಕೆಗಳಲ್ಲದೆ,ಅವರು ವಾಲಿ ಬಾಲ್ ಮೊದಲಾದ ಇತರ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುತ್ತಾರೆ.“ನನ್ನ ದುಖಃ ಮರೆಯಲು ನಾನು ಶಾಲೆಗೆ ಹೋಗುತ್ತೇನೆ” ಎಂದು ಕಮಿ ಹೇಳುತ್ತಾರೆ.ಸ್ಕೂಲ್ ಟೀಚರ್ ಆಗಬೇಕೆಂದು ಆಶಿಸಿದ್ದ ಕಮಿಗೆ ಬಡತನದ ಕಾರಣದಿಂದ ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಲಾಗಲಿಲ್ಲವಂತೆ.

ಕಮಿಯು ೧೦ ನೇ ತರಗತಿಯ ಮಕ್ಕಳ ಜೊತೆ ಶಾಲೆಯಲ್ಲಿ ಓದುತ್ತಿದ್ದು ಎಲ್ಲರೊಡನೆ ಸೌಹಾರ್ದತೆಯಿಂದಿದ್ದಾರೆ.ಕಮಿಯ ಸಹಪಾಠಿ 14 ನೇ ವಯಸ್ಸಿನ ಸಾಗರ್ ಹೇಳೋ ಪ್ರಕಾರ ಕಮಿ ಒಬ್ಬ ಒಳ್ಳೆಯ ಮನುಷ್ಯ,ಮೊದ ಮೊದಲು ಯಾಕಪ್ಪಾ ಈ ತಾತ ನಮ್ಜೊತೆ ಸ್ಕೂಲ್ಗೆ ಬರ್ತಿದ್ದಾರೆ ಅಂತ ಅನ್ಸ್ತಿತ್ತು ಆದ್ರೆ ಕ್ರಮೇಣ ಅವ್ರು ನಂಗೆಲ್ಲಾ ತುಂಬಾ ಇಷ್ಟವಾದ್ರು.ಓದಿನಲ್ಲಿ ಸ್ವಲ್ಪ ಹಿಂದೆ ಅದ್ರೂ ಎಲ್ರೂ ಅವರಿಗೆ ಸಹಾಯ ಮಾಡುತ್ತೀವಿ ಅಂತಾನೆ.10 ನೇ ತರಗತಿ ಪಾಸ್ ಆದ್ರೆ ಕಮಿ ತಾತ ತನ್ನ ಉದ್ದನೆಯ ದಾಢಿ ಯನ್ನು ಬೋಳಿಸುತ್ತೇನೆಂದು ನನ್ನ ಬಳಿ ಪ್ರಮಾಣ ಮಾಡಿದ್ದಾರೆ ಎಂದೂ ಅವನು ಹೇಳಿದ್ದಾನೆ

ಈ ತರಹದ ಕಥೆಗಳನ್ನು ನೋಡಿದಾಗ ನಮಗೆ ನಮ್ಮ ಜೀವನದ ಕಷ್ಟಗಳೆಲ್ಲ ತೀರ ಕ್ಷುಲ್ಲಕ ಎಂದೆನಿಸುತ್ತದೆ.ನಿಜಕ್ಕೂ ನೋವು ಹಾಗೂ ಒಂಟಿತನದಿಂದ ಹೊರಬರಲು ಈ ತಾತ ಹುಡ್ಕಿರೋ ಹಾದಿ ಮಾತ್ರ ಶ್ಲಾಘನೀಯವಾದದ್ದು ಹಾಗೂ ಇಂದಿನ ಜನತೆಗೆ ಒಳ್ಳೆ ಸ್ಪೂರ್ಥಿ ನೀಡುವಂತಾಗಿದೆ.ತಾತ ನೀವು 10 ನೇ ತರಗತಿಯನ್ನು ಬೇಗನೆ ಪಾಸ್ ಮಾಡುವಂತಾಗಲಿ ಎಂದು ಹಾರೈಸ್ತೀವಿ.

 

  • ಸ್ವರ್ಣಲತ ಭಟ್

POPULAR  STORIES :

ಮಹಿಳೆ ಮೇಲೆ ಅತ್ಯಾಚಾರ..! ಭಾರತೀಯ ಆಟಗಾರ ಅರೆಸ್ಟ್ ಯಾರು ಆ ರೇಪಿಸ್ಟ್ ಕ್ರಿಕೆಟರ್…?

ಅಷ್ಟಕ್ಕೂ ರಜನಿ ಹೀಗೇಕೆ ಮಾಡಿದ್ಲು? ಪ್ರೀತಿಸಿದ ಹುಡುಗ ಮತ್ತು ಅಪ್ಪ, ಅಮ್ಮ, ಅಣ್ಣ.!

`ರೋಬೋಫೀಲಿಯಾ’ ಇದು `ಫ್ಯೂಚರ್ ಆಫ್ ಸೆಕ್ಸ್’

ನಿಮ್ಮ ರೂಂಮೇಟ್ ನ ಗೊರಕೆ ತಪ್ಪಿಸಬೇಕೇ?? ಇಲ್ಲಿದೆ ಉಪಾಯ…

ದರ್ಭೆಯನ್ನುಪವಿತ್ರವಾಗಿ ಶುಭ ಹಾಗೂ ಅಶುಭ ‍‍ಸಂದರ್ಭಗಳಲ್ಲಿ ನಮ್ಮಬಲಕೈ ಬೆರಳಲ್ಲಿ ಯಾಕೆ ಧರಿಸುತ್ತೇವೆ????

ಗೀತಾ ಟಂಡನ್ ಖತರ್ನಾಕ್ ಸ್ಟಂಟ್ ಮಹಿಳೆಯ ಕಥೆ..!

ಮಿನಿಸ್ಟರ್ ಗಿರಿ ಬಿಟ್ಟುಕೊಡ್ತಾರಂತೆ ಅಂಬಿ… ಆದ್ರೆ ಕಂಡೀಷನ್ಸ್ ಅಪ್ಲೈ…!!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...