ಮೊಬೈಲ್ ಡೇಟಾ ಲೋನ್ ಪಡೆಯಲು ಹೀಗೆ ಮಾಡಿ

Date:

ಮುಕೇಶ್ ಅಂಬಾನಿ ಅವರ ರಿಲಯನ್ಸ್ ಜಿಯೊ ಕಂಪನಿ ಇದೀಗ ತನ್ನ ಬಳಕೆದಾರರಿಗೆ ತಕ್ಷಣವೇ ರೀಚಾರ್ಜ್ ಮಾಡಿ ನಂತರ ಪಾವತಿ ಮಾಡಬಹುದಾದ ‘ಎಮರ್ಜೆನ್ಸಿ ಡೇಟಾ ಲೋನ್’ ಸೌಲಭ್ಯ ಪರಿಚಯಿಸುತ್ತಿದೆ.
ಡೇಟಾ ಟಾಪ್‌ಅಪ್‌ ಅನ್ನು ತಕ್ಷಣವೇ ಖರೀದಿಸುವ ಪರಿಸ್ಥಿತಿಯಲ್ಲಿ, ಬೇರೆ ಬೇರೆ ಕಾರಣಗಳಿಗಾಗಿ ಎಲ್ಲ ಬಳಕೆದಾರರೂ ಇರುವುದಿಲ್ಲ ಎಂಬುದು ಭಾರತದ ಕಿರಿಯ, ಆದರೆ ಅತಿದೊಡ್ಡ ಟೆಲಿಕಾಂ ಆಪರೇಟರ್‌ ಆಗಿರುವ ಜಿಯೊಗೆ ತಿಳಿದಿದೆ.


ಜಿಯೊದ ಬಳಕೆದಾರರು ತಮ್ಮ ಹೈಸ್ಪೀಡ್ ಡೇಟಾದ ಕೋಟಾ ಮುಗಿದು ಹೋದಾಗ, ತಕ್ಷಣವೇ ರಿಜಾರ್ಜ್ ಮಾಡಿಕೊಳ್ಳಲು ಸಾಧ್ಯವಾಗದಿರುವ ಪರಿಸ್ಥಿತಿಯಲ್ಲಿ ‘ಈಗಲೇ ರೀಚಾರ್ಜ್ ಮಾಡಿಕೊಳ್ಳಿ ಮತ್ತು ನಂತರ ಪಾವತಿಸಿ’ ಅನುಕೂಲತೆಯನ್ನು ತುರ್ತು ಡೇಟಾ ಸಾಲ ಸೌಲಭ್ಯ ಒದಗಿಸುತ್ತದೆ.
ಈ ಸೌಲಭ್ಯದಡಿಯಲ್ಲಿ, ಜಿಯೊ ತನ್ನ ಪ್ರೀಪೇಯ್ಡ್ ಬಳಕೆದಾರರಿಗೆ 1 ಜಿಬಿಯ (ಪ್ರತಿ ಪ್ಯಾಕ್‌ಗೆ ₹11 ಮೌಲ್ಯ) ಐದು ತುರ್ತು ಡೇಟಾವರೆಗಿನ ಸಾಲ ಪಡೆಯಲು ಅವಕಾಶ ನೀಡುತ್ತದೆ. ತುರ್ತು ಡೇಟಾ ಸೌಲಭ್ಯವನ್ನು ಮೈ ಜಿಯೊ ಆಪ್ (MyJio App) ಮೂಲಕ ಪಡೆದುಕೊಳ್ಳಬಹುದಾಗಿದೆ.
ಜಿಯೊ ಬಳಕೆದಾರರು ಈಗಾಗಲೇ ಉತ್ತಮ ನೆಟ್‌ವರ್ಕ್ ಸಂಪರ್ಕ ಮತ್ತು ಹೈ ಸ್ಪೀಡ್‌ಗಳನ್ನು ಅನುಭವಿಸಲು ಶುರುಮಾಡಿದ್ದಾರೆ. ಹಲವು ಬಳಕೆದಾರರು ದಿನದಲ್ಲಿ ಬಹುಬೇಗನೇ ತಮ್ಮ ಹೈ ಸ್ಪೀಡ್‌ ಡೇಟಾ ಕೋಟಾವನ್ನು ಬಳಸಿ ಮುಗಿಸಿಬಿಡುತ್ತಾರೆ. ಅವರು ದಿನದ ಉಳಿದ ಸಮಯದಲ್ಲಿ ಹೈ ಸ್ಪೀಡ್‌ ಡೇಟಾ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಎಲ್ಲ ಬಳಕೆದಾರರೂ ತಮ್ಮ ದೈನಂದಿನ ಕೋಟಾ ಖಾಲಿಯಾದ ತಕ್ಷಣವೇ ಹೊಸ ಡೇಟಾ ಟಾಪ್‌-ಅಪ್‌ ಖರೀದಿಸುವ ಪರಿಸ್ಥಿತಿಯಲ್ಲಿ ಇರುವುದಿಲ್ಲ ಎಂದು ಜಿಯೊ ಅರಿತಿದೆ. ಅವರಿಗಾಗಿಯೇ ಈ ಹೊಸ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ.
ಎಮರ್ಜೆನ್ಸಿ ಡೇಟಾ ಲೋನ್ ಸೌಲಭ್ಯ ಪಡೆಯುವುದು ಹೇಗೆ?


1) ಮೈ ಜಿಯೊ (Myjio) ಆಪ್ ಓಪನ್ ಮಾಡಿ. ಪುಟದ ಎಡತುದಿಯಲ್ಲಿರುವ ‘ಮೆನು’ಗೆ ಹೋಗಿ.
2) ಮೊಬೈಲ್‌ ಸರ್ವಿಸ್ ಅಡಿಯಲ್ಲಿರುವ ‘ಎಮರ್ಜೆನ್ಸಿ ಡೇಟಾ ಲೋನ್’ ಆಯ್ಕೆ ಮಾಡಿ.
3) ಎಮರ್ಜೆನ್ಸಿ ಡೇಟಾ ಲೋನ್ ಬ್ಯಾನರ್‌ ಮೇಲಿರುವ ‘ಪ್ರೊಸೀಡ್’ ಆಯ್ಕೆ ಕ್ಲಿಕ್ ಮಾಡಿ
4) ‘ಗೆಟ್ ಎಮರ್ಜೆನ್ಸಿ ಡೇಟಾ’ ಆಯ್ಕೆಯನ್ನು ಆಯ್ದುಕೊಳ್ಳಿ
5) ‘ಆಕ್ಟೀವ್ ನೌ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ,
6) ಎಮರ್ಜೆನ್ಸಿ ಡೇಟಾ ಲೋನ್‌ ಸೌಲಭ್ಯ ಆಕ್ಟಿವೇಟ್ ಆಗಿರುತ್ತದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...