ಅಂದು ನಾನು ಕಂಡಿದ್ದ ಅರವಿಂದ್ ಹೀಗಿರಲಿಲ್ಲ ಅಂದಿದ್ದೇಕೆ ಸುದೀಪ್?

Date:

ಬಿಗ್‍ಬಾಸ್ ಮನೆಯಲ್ಲಿ ವಾರಪೂರ್ತಿಯಾಗಿ ನಡೆದ ಟಾಸ್ಕ್, ಜಗಳ ಕುರಿತಾಗಿ ಸುದೀಪ್ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಸುದೀಪ್ ಕೆಲವು ಸ್ಪರ್ಧಿಗಳ ಕಿವಿ ಹಿಂಡಿದ್ದಾರೆ.
ಅರವಿಂದ್ ಹಾಗೂ ಪ್ರಶಾಂತ್ ನಡುವೆ ಆದ ಜಗಳದ ವಿಚಾರವನ್ನು ಸುದೀಪ್ ಪ್ರಸ್ತಾಪ ಮಾಡಿದರು. ಈ ವೇಳೆ ಹೇಳೋಕೆ ಏನಾದ್ರೂ ಇದೆಯಾ ಎಂದು ಅರವಿಂದ್‍ಗೆ ಸುದೀಪ್ ಕೇಳಿದರು. ಇದಕ್ಕೆ ಉತ್ತರಿಸಿದ ಅರವಿಂದ್, ನಾನು ಪ್ರೊವೋಕ್ ಮಾಡಿದೆ ಎಂದು ನನಗೆ ಅನ್ನಿಸಿತು. ಅಷ್ಟೆಲ್ಲ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಫೀಲ್ ಆಯಿತು ಎಂದರು ಅರವಿಂದ್ ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ.

ಹಿಂದಿನ ರಾತ್ರಿ ದಿವ್ಯಾ ಉರುಡುಗ ಬಳಿ ಹೋಗಿ ನಾನು ಕ್ಷಮೆ ಕೇಳಿದ್ದೆ. ಅವಾಗಲೇ ಚಾಪ್ಟರ್ ಕ್ಲೋಸ್ ಆಗಿತ್ತು. ಕ್ಷಮಿಸಿ ಎಂದು ಅವರ ಬಳಿ ಹೇಳಿದ್ದೆ. ಕ್ಯಾಪ್ಟನ್ಸಿ ಮುಗಿದಾಗ ದಿವ್ಯಾಗೆ ನಾನು ಗುಡ್ ಜಾಬ್ ಎಂದೆ. ಆದಾಗ್ಯೂ ಅರವಿಂದ್ ಪ್ರೊವೋಕ್ ಮಾಡಿದ್ರು ಎಂದು ಪ್ರಶಾಂತ್ ಬೇಸರ ಹೊರ ಹಾಕಿದರು.
ನಿಮಗೆ ಸಾರಿ ಕೇಳಬೇಕು ಎಂದು ಅನಿಸಿಲ್ಲವೇ ಎಂದು ಪ್ರಶಾಂತ್ ಅವರನ್ನು ಸುದೀಪ್ ಕೇಳಿದರು. ನಾನು ಅಷ್ಟಾಗಿ ಟೆಂಪರ್ ಕಳೆದುಕೊಳ್ಳುವುದಿಲ್ಲ. ಆದರೆ ಆದಿನ ನಾನು ನಿಜಕ್ಕೂ ನಿಯಂತ್ರಣ ಕಳೆದುಕೊಂಡಿದ್ದೆ. ಇದಕ್ಕೆ ಕ್ಷಮೆ ಕೂಡ ಕೇಳಿದೆ ಎಂದು ಪ್ರಶಾಂತ್ ಹೇಳಿದರು.enu
ದಿವ್ಯಾ ಅವರ ಕ್ಯಾಪ್ಟನ್ಸಿ ಮುಗಿಯಿತ್ತು ಎಂದು ಬಿಗ್‍ಬಾಸ್ ಹೇಳಿದಾಗ ಪ್ರಶಾಂತ್ ಅವರು ದಿವ್ಯಾ ಅವರ ಕ್ಯಾಪ್ಟನ್ಸಿ ಕುರಿತಾಗಿ ಹೊಗಳುತ್ತಾರೆ. ಆದರೆ ನೀವು ಇದನ್ನೆಲ್ಲ ನಂಬಬೇಡ, ಮುಂದೆ ಒಂದು ಹಿಂದೆ ಒಂದು ತರ ಪ್ರಶಾಂತ್ ಅವರು ಎಂದು ಹೇಳುತ್ತೀರಾ. ಆದರೆ ಅರವಿಂದ್ ಅವರೆ ದಿವ್ಯಾ ಅವರ ಬಳಿ ಪ್ರಾಶಾಂತ್ ಅವರು ದಿವ್ಯಾ ಅವರ ಬಳಿ ಕ್ಷಮೆ ಕೇಳಿ ಸರಿಯಾಗಿತ್ತು. ಆದರೆ ನೀವು ಮತ್ತೆ ಜಗಳವನ್ನು ಪ್ರಾರಂಭ ಮಾಡಿದ್ದೀರಿ ಎಂದು ಅರವಿಂದ್‍ಗೆ ಸುದೀಪ್ ಪ್ರಶ್ನಿಸಿದ್ದಾರೆ.
ನೀವು ಕ್ಷಮೆ ಕೇಳಿದ್ರಾ ಎಂಬ ಸುದೀಪ್ ಪ್ರಶ್ನೆಗೆ ಉತ್ತರಿಸಿದ ಅರವಿಂದ್, ಸಾರಿ ಕೇಳಿಲ್ಲ ಎಂದರು. ನಿಮ್ಮ ಮೇಲೆ ಏನು ಪ್ರಭಾವ ಬೀರಿತು ದಿವ್ಯಾ ಮತ್ತು ಪ್ರಶಾಂತ್ ನಡುವೆ ಒಪ್ಪಂದ ಇತ್ತು. ಆದರೆ ನೀವು ಅದನ್ನು ಉಲ್ಲಂಘಿಸಿದ್ದೀರಿ. ನೇರವಾಗಿ ಮಾತನಾಡಿ, ಸ್ವಂತ ಬುದ್ಧಿ ಇಲ್ಲವಾ ಎಂದು ನೀವೇ ಕೇಳ್ತಿರಿ. ಈಗ ನೀವು ಅದನ್ನೇ ಮಾಡಿದ್ದೀರಿ. ಇದು ನಿಮ್ಮ ವ್ಯಕ್ತಿತ್ವಕ್ಕೆ ಸರಿ ಕಾಣುತ್ತಿದೆಯೇ? 72 ದಿನಗಳ ಹಿಂದೆ ನೋಡಿದ ಕೆಪಿ ಹೀಗೆ ಇರಲಿಲ್ಲ. ಈಗ ಯಾಕೆ ಹೀಗಾದ್ರಿ? ಎಂದು ಸುದೀಪ್ ಪ್ರಶ್ನಿಸಿದರು. ಈ ವೇಳೆ ನಾನು ಪ್ರಭಾವಕ್ಕೆ ಒಳಗಾಗಿದ್ದು ಹೌದು ಎಂದು ಅರವಿಂದ್ ಒಪ್ಪಿಕೊಂಡರು.


ಎದರು ಮಾತನಾಡು ಎಂದು ಹೇಳುತ್ತಿರಾ ಪ್ರತಿಯೊಬ್ಬರು ಆದರೆ ನೀವು ಎಲ್ಲರೂ ಹಿಂದೆ ಇಂದ ಮಾತನಾಡುತ್ತೀರಾ. ನನಗೆ ಗೊತ್ತು. ಒಳ್ಳೆಯದ್ದು, ಕೆಟ್ಟದ್ದು ಎಲ್ಲವನ್ನೂ ಮಾತನಾಡುತ್ತಿರ. ಯಾಕೆಂದ್ರೆ ನಿಮಗೆಬೇರೆ ವಿಷಯವಿಲ್ಲ. ಮಾತನಾಡಿ ಆದರೆ ಮಾತನಾಡುವುದೇ ಇಲ್ಲ ಎಂದು ಹೇಳಬೇಡಿ. ಜಗಳ ಮಾಡುವುದು ಮುಖ್ಯವಲ್ಲ. ಆದರೆ ಇದರ ಅವಶ್ಯಕತೆ ಇದೆಯಾ ಎಂದು ಯೋಚಿಸಿ ಎಂದು ಸುದೀಪ್ ಹೇಳಿದ್ದಾರೆ. ಆಗ ಅರವಿಂದ್, ಪ್ರಶಾಂತ್, ಚಕ್ರವರ್ತಿ ಸುದೀಪ್ ಅವರ ಬಳಿ ಕೈ ಮುಗಿದು ಕ್ಷಮೆ ಕೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...