ರೈಲು ಬೋಗಿಯಲ್ಲಿ ಮಗುವಿಗೆ ಜನ್ಮನೀಡಿದ ಬೆಂಗಳೂರು ಮಹಿಳೆ !

Date:

ಭುವನೇಶ್ವರ (ಒಡಿಶಾ): ಹೌರಾ-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರು, ರೈಲು ಬೋಗಿಯಲ್ಲೇ ಮಗುವಿಗೆ ಜನ್ಮ ನೀಡಿದ್ಧಾರೆ.
ಬೆಂಗಳೂರು ಮೂಲದ 27 ವರ್ಷ ವಯಸ್ಸಿನ ಮಹಿಳೆ ಆಯೆಶಾಗೆ, ಚಲಿಸುವ ರೈಲಿನಲ್ಲೇ ಪ್ರಸವ ವೇದನೆ ಆರಂಭವಾಗಿತ್ತು. ಆ ಸಂದರ್ಭದಲ್ಲಿ ರೈಲು ಒಡಿಶಾದ ರಾಜಧಾನಿ ಭುವನೇಶ್ವರದ ರೈಲು ನಿಲ್ದಾಣದ ಸಮೀಪದಲ್ಲಿ ಇತ್ತು.
ರೈಲ್ವೆ ಇಲಾಖೆ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸರು ಸೂಕ್ತ ಸಮಯಕ್ಕೆ ಸ್ಪಂದಿಸಿದರು ಎಂದು ನವಜಾತ ಗಂಡು ಶಿಶುವಿನ ತಾಯಿ ಆಯೆಷಾ ಸಂತಸ ವ್ಯಕ್ತಪಡಿಸಿದ್ದಾರೆ. ತಾಯಿ-ಮಗುವಿನ ಆರೋಗ್ಯ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.


ಈ ಘಟನೆ ಕುರಿತು ಮಾಹಿತಿ ನೀಡಿರುವ ಭುವನೇಶ್ವರ ರೈಲು ನಿಲ್ದಾಣದ ನಿರ್ದೇಶಕ ಸಿ. ನಾಯಕ್, ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ‘ಮೇರಿ ಸಹೇಲಿ’ ಹಾಗೂ ರೈಲ್ವೆ ಆರೋಗ್ಯ ಪಡೆಯ ಸಹಾಯದೊಂದಿಗೆ ಮಹಿಳೆ ಮಗುವಿಗೆ ಜನ್ಮ ನೀಡಿದರು ಎಂದು ವಿವರಿಸಿದ್ದಾರೆ.
ನವಜಾತ ಶಿಶು ಹಾಗೂ ತಾಯಿಯನ್ನು ಮೊದಲಿಗೆ ವೈದ್ಯರು ತಪಾಸಣೆಗೆ ಒಳಪಡಿಸಿದರು. ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ದೃಢಪಟ್ಟ ಬಳಿಕವಷ್ಟೇ ಅವರಿಗೆ ಬೆಂಗಳೂರಿಗೆ ವಾಪಸ್ಸಾಗಲು ಟಿಕೆಟ್‌ ಮಾಡಿಕೊಟ್ಟೆವು ಎಂದು ನಾಯಕ್ ತಿಳಿಸಿದ್ದಾರೆ.

 

Share post:

Subscribe

spot_imgspot_img

Popular

More like this
Related

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು ಬೆಂಗಳೂರು: ವಾಲ್ಮೀಕಿ...

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ:...

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ ಚಿತ್ರದುರ್ಗ:...