ಆತ ಆಡದಿದ್ದರೆ ನಾನೂ ಐಪಿಎಲ್ ಆಡಲ್ಲ ಎಂದ ಸುರೇಶ್ ರೈನಾ

Date:

ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಒಂದು ವೇಳೆ ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್‌(ಐಪಿಎಲ್‌)ನಲ್ಲಿ ಆಡದಿದ್ದರೆ ನಾನೂ ಮುಂದಿನ ಐಪಿಎಲ್ ಸೀಸನ್‌ನಲ್ಲಿ ಆಡಲಾರೆ ಎಂದು ಭಾರತದ ಮಾಜಿ ಆಲ್ ರೌಂಡರ್ ಸುರೇಶ್ ರೈನಾ ಹೇಳಿದ್ದಾರೆ.

ಎಂಎಸ್ ಧೋನಿ ನಾಯಕರಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸುರೇಶ್ ರೈನಾ ಕೂಡ ಆಡುತ್ತಿದ್ದಾರೆ. ಇಬ್ಬರೂ 2020ರಂದು ಅಚಾನಕ್ ಆಗಿ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರು. ಆ ಮೂಲಕ ಇಬ್ಬರ ಸ್ನೇಹ ಎಷ್ಟರ ಮಟ್ಟಿಗೆ ಗಾಢ ಅನ್ನೋದನ್ನು ಸಾರಿ ಹೇಳಿದ್ದರು.
“ಕ್ರಿಕೆಟ್‌ನಲ್ಲಿ ಮುಂದುವರೆಯಲು ಇನ್ನಲ್ಲಿನ್ನು ನಾಲ್ಕೈದು ವರ್ಷಗಳು ಉಳಿದಿವೆ. ಈ ವರ್ಷ ನಾವು ಐಪಿಎಲ್ ಆಡುತ್ತಿದ್ದೇವೆ. ಮುಂದಿನ ವರ್ಷ ಇನ್ನೆರಡು ತಂಡಗಳು ಸೇರ್ಪಡೆಯಾಗಬಹುದು. ಆದರೆ ನಾನು ಆಡುವಷ್ಟು ಕಾಲ ಚೆನ್ನೈ ಸೂಪರ್ ಕಿಂಗ್ಸ್‌ಗೆ ಮಾತ್ರ ಆಡ್ತೇನೆ. ಈ ವರ್ಷ ಚೆನ್ನಾಗಿ ಆಡ್ತೀವಿ ಅಂತ ನನಗನ್ನಿಸ್ತಿದೆ,” ಎಂದು ನ್ಯೂಸ್ 24 ಸ್ಪೋರ್ಟ್ಸ್‌ಗೆ ರೈನಾ ಹೇಳಿದ್ದಾರೆ.

“ಒಂದು ವೇಳೆ ಧೋನಿ ಭಾಯ್ ಮುಂದಿನ ಐಪಿಎಲ್‌ನಲ್ಲಿ ಆಡದಿದ್ದರೆ ನಾನೂ ಮುಂದಿನ ಸೀಸನ್‌ನಲ್ಲಿ ಆಡಲಾರೆ. ನಾವಿಬ್ಬರೂ 2008ರಿಂದಲೂ ಸಿಎಸ್‌ಕೆಗೆ ಆಡುತ್ತಿದ್ದೇವೆ. ಈ ವರ್ಷ ನಾವು ಐಪಿಎಲ್‌ನಲ್ಲಿ ಗೆದ್ದರೆ ಮುಂದಿನ ವರ್ಷವೂ ಆಡಲು ನಾನು ಧೋನಿಯನ್ನು ಮನವೊಲಿಸುತ್ತೇನೆ,” ಎಂದು ರೈನಾ ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ...

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ ಭಾರತ್ ಸ್ಕೌಟ್ಸ್...

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು:...

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…. ಬೆಂಗಳೂರು: ಅರವಿಂದ ವೆಂಕಟೇಶ ರೆಡ್ಡಿ...