ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಕೆಎಲ್ ರಾಹುಲ್ ತನ್ನ ಬದುಕಿನ ಅತೀ ನೆಚ್ಚಿನ ಕ್ಷಣ ಯಾವುದೆಂದು ಹೇಳಿಕೊಂಡಿದ್ದಾರೆ. ತಾನು ಟೆಸ್ಟ್ ಕ್ಯಾಪ್ ಪಡೆದುಕೊಂಡಿದ್ದು ತನ್ನ ಬದುಕಿನ ಅತೀ ಇಷ್ಟದ ಕ್ಷಣ ಎಂದು ರಾಹುಲ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಒಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಇದರಲ್ಲಿ, ‘ಬದುಕಿನ ನೆಚ್ಚಿನ ಕ್ಷಣ’ ಎಂದು ಬರೆದುಕೊಂಡಿದ್ದಾರೆ. ಸದ್ಯ ರಾಹುಲ್ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತೀಯ ತಂಡದ ಜೊತೆಗಿದ್ದಾರೆ. ಆಗಸ್ಟ್ 4ರಿಂದ ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.

2014 ರಲ್ಲಿ ಆಸೀಸ್ ವಿರುದ್ಧ ಪಂದ್ಯದೊಂದಿಗೆ ಪದಾರ್ಪಣೆ ಮಾಡಿದ್ದರು.
36 ಟೆಸ್ಟ್ ಪಂದ್ಯಗಳನ್ನಾಡಿರುವ ರಾಹುಲ್ 2006 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕ, 11 ಅರ್ಧ ಶತಕಗಳು ಸೇರಿವೆ. ಇನ್ನು 38 ಏಕದಿನ ಪಂದ್ಯಗಳಲ್ಲಿ 1509 ರನ್, 48 ಟಿ20ಐ ಪಂದ್ಯಗಳಲ್ಲಿ 1557 ರನ್, 88 ಐಪಿಎಲ್ ಪಂದ್ಯಗಳಲ್ಲಿ 2978 ರನ್ ದಾಖಲೆ ರಾಹುಲ್ ಹೆಸರಿನಲ್ಲಿದೆ.