ಸ್ಪುಟ್ನಿಕ್ V ಕೊರೊನಾ ಲಸಿಕೆಯ ಒಂದೇ ಒಂದು ಡೋಸ್‌ನಿಂದ ಪ್ರಬಲ ಪ್ರತಿಕಾಯ ಸೃಷ್ಟಿಯಾಗುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಸೆಲ್ ರಿಪೋರ್ಟ್ಸ್‌ನಲ್ಲಿ ಮಂಗಳವಾರ ಅಧ್ಯಯನ ವರದಿಯೊಂದು ಪ್ರಕಟವಾಗಿದ್ದು, ಅರ್ಜೆಂಟೀನಾದಲ್ಲಿ 289 ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿದ ಪ್ರಯೋಗಗಳ ವಿವರಗಳನ್ನು ನೀಡಲಾಗಿದೆ.
ಆಸ್ಟ್ರಾಜೆನೆಕಾ, ಮಾಡೆರ್ನಾ, ಫೈಜರ್ ಲಸಿಕೆಗಳನ್ನೂ ಅಧ್ಯಯನಕ್ಕೆ ಅಳವಡಿಸಲಾಗಿತ್ತು, ಎರಡು ಡೋಸ್ ಬದಲಿಗೆ ಒಂದು ಡೋಸ್ ಲಸಿಕೆ ಹಾಕಿದರೆ ದೇಹಕ್ಕೆ ಬೇಕಾದ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯ ಸೃಷ್ಟಿಯಾಗುತ್ತದೆ ಎಂಬುದು ತಿಳಿದುಬಂದಿದೆ.
ಹೀಗಾಗಿ ಈಗಾಗಲೇ ಕೋವಿಡ್ ಸೋಂಕಿಗೆ ಒಳಗಾದವರಿಗೆ ಒಂದೇ ಡೋಸ್ ಲಸಿಕೆ ನೀಡುವ ಮೂಲಕ ಪ್ರತಿಕಾಯ ಸೃಷ್ಟಿಸುವಲ್ಲಿ ಯಾವ ಲಸಿಕೆ ಪರಿಣಾಮಕಾರಿ ಎಂಬ ನಿರ್ದಿಷ್ಟ ಅಧ್ಯಯನ ಕೈಗೊಂಡಾಗ ಸ್ಪುಟ್ನಿಕ್ ಲಸಿಕೆಗೆ ಈ ಅಗ್ರ ಶ್ರೇಯಾಂಕ ದೊರೆತಿದೆ.
ಪ್ರಮುಖವಾಗಿ ಲಸಿಕೆ ಕೊರತೆಯ ಈ ಸನ್ನಿವೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಲಸಿಕೆ ಸಿಗುವಂತಾಗಬೇಕು, ಹೀಗಾಗಿ ಒಂದೇ ಡೋಸ್ ಲಸಿಕೆಯಲ್ಲೇ ಪ್ರತಿಕಾಯ ಬೆಳೆಯುತ್ತದೆಯೇ ಎಂಬುದನ್ನು ಗಮನಿಸುವುದು ಅಧ್ಯಯನದ ಭಾಗವಾಗಿತ್ತು.
ಸೀರಂ ಇನ್‌ಸ್ಟಿಟ್ಯೂಟ್ ರಷ್ಯಾದ ಸ್ಪುಟ್ನಿಕ್ V ಕೊರೊನಾ ಲಸಿಕೆಯನ್ನು ಸೆಪ್ಟೆಂಬರ್‌ನಿಂದ ಉತ್ಪಾದಿಸಲಿದೆ ಎಂದು ರಷ್ಯಾದ ಮೇಕರ್ ಮಾಹಿತಿ ನೀಡಿದೆ. ಪುಣೆಯಲ್ಲಿ ಲಸಿಕೆ ಉತ್ಪಾದನೆ ಶುರುವಾಗಲಿದೆ, ರಷ್ಯಾದ ಆರ್‌ಡಿಐಎಫ್ ನೀಡಿರುವ ಮಾಹಿತಿ ಪ್ರಕಾರ ಪ್ರತಿ ವರ್ಷ ಭಾರತದಲ್ಲಿ 300 ಮಿಲಿಯನ್ ಕೊರೊನಾ ಲಸಿಕೆ ಉತ್ಪಾದಿಸಲಿದೆ ಎಂದಿದೆ.