ಚೆನ್ನೈ ಹಾಗೂ ಬೆಂಗಳೂರು ಮಹಾನಗರಗಳ ನಡುವೆ ತ್ವರಿತ ಸಂಪರ್ಕ ಒದಗಿಸುವ ಶತಾಬ್ದಿ ಎಕ್ಸ್ ಪ್ರೆಸ್ ರೈಲು ಮತ್ತೆ ಸಂಚಾರ ಆರಂಭಿಸುವ ಸುದ್ದಿ ಬಂದಿದೆ. ಜುಲೈ 21ರಿಂದ ಈ ಪ್ರೀಮಿಯಂ ರೈಲು ಸಂಚಾರ ಪುನರ್ ಆರಂಭವಾಗುವ ಮಾಹಿತಿ ಸಿಕ್ಕಿದೆ.
ಕೋವಿಡ್ 19 2ನೇ ಅಲೆ ನಡುವೆ ಸಂಚಾರ ಆರಂಭಿಸಿದ್ದ ಶತಾಬ್ದಿ ಎಕ್ಸ್ ಪ್ರೆಸ್ ಹೆಚ್ಚಿನ ಪ್ರಯಾಣಿಕರನ್ನು ಹೊಂದಿರದ ಕಾರಣದಿಂದ ಏಪ್ರಿಲ್ 28ರ ನಂತರ ಸಂಚಾರ ಸ್ಥಗಿತಗೊಳಿಸಿತ್ತು.
ನೈಋತ್ಯ ರೈಲ್ವೆ ಪ್ರಕಟಣೆಯಂತೆ ಕ್ರಾಂತಿವೀರ ಸಂಗೊಳ್ಳೀ ರಾಯಣ್ಣ(ಕೆಎಸ್ಆರ್) ಬೆಂಗಳೂರು ನಿಲ್ದಾಣದಿಂದ ಚೆನ್ನೈ ಎಂಜಿಆರ್ ಸೆಂಟ್ರಲ್ ನಡುವಿನ 02028/02027 ಸಂಖ್ಯೆಯ ಶತಾಬ್ದಿ ರೈಲ್ವೆ ಜುಲೈ 21ರಿಂದ ಸಂಚಾರ ಆರಂಭಿಸಲಿದೆ.