ಅಭ್ಯಾಸ ಪಂದ್ಯಕ್ಕೆ ಕೊಹ್ಲಿ ಟೀಮ್ ಹೇಗೆದೆ?

0
37

ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿದ್ದು, ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ. ಜೊತೆಗೆ ಭಾರತ ತಂಡದ ಸಹಾಯಕ ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಂಡಿದ್ದು, ಅವರ ಸಂಪರ್ಕಕ್ಕೆ ಬಂದ ಕೆಲ ಆಟಗಾರರನ್ನು ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಈ ಕಠಿಣ ಸಂದರ್ಭದಲ್ಲೂ ಜುಲೈ 20ರಂದು ಆರಂಭವಾಗಲಿರುವ ಕೌಂಟಿ ಸೆಲೆಕ್ಟ್‌ ಇಲೆವೆನ್‌ ವಿರುದ್ಧದ ಮೂರು ದಿನಗಳ ಮೊದಲ ಪ್ರಥಮದರ್ಜೆ ಅಭ್ಯಾಸ ಪಂದ್ಯ ಸಲುವಾಗಿ ವಿರಾಟ್‌ ಕೊಹ್ಲಿ ಸಾರಥ್ಯದ ಭಾರತ ತಂಡ ಶುಕ್ರವಾರ ಡುರ್ಹ್ಯಾಮ್‌ನಲ್ಲಿ ತಾಲೀಮು ಶುರು ಮಾಡಿದೆ. ಭಾರತ ಮತ್ತು ಇಂಗ್ಲೆಂಡ್‌ ನಡುವಣ 5 ಪಂದ್ಯಗಳ ಟೆಸ್ಟ್‌ ಸರಣಿ ಆಗಸ್ಟ್‌ 4ರಂದು ನಾಟಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿದೆ.


ಭಾರತ ತಂಡಕ್ಕೆ ಎರಡು ಅಭ್ಯಾಸ ಪಂದ್ಯ ನೀಡುವ ಸಲುವಾಗಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಕೌಂಟಿ ಕ್ರಿಕೆಟ್‌ ಅಖಾಡದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರನ್ನು ಒಗ್ಗೂಡಿಸಿ ಕೌಂಟಿ ಸೆಲೆಕ್ಟ್‌ ಇಲೆವೆನ್ ರಚನೆ ಮಾಡಿದೆ. ಇದಕ್ಕೆ 14 ಸದಸ್ಯರ ಬಲಿಷ್ಠ ತಂಡವನ್ನು ಇಸಿಬಿ ಗುರುವಾರ ಪ್ರಕಟ ಮಾಡಿತ್ತು.
ಈ ತಂಡಕ್ಕೆ ಆಯ್ಕೆಯಾಗಿರುವ ಎಲ್ಲಾ ಆಟಗಾರರು ಕೊರೊನಾ ವೈರಸ್‌ ಪರೀಕ್ಷೆಗೆ ಒಳಪಡಲಿದ್ದು, ನೆಗೇಟೀವ್‌ ಫಲಿತಾಂಶ ಬಂದ ಬಳಿಕ ಪಂದ್ಯಕ್ಕಾಗಿ ನಿರ್ಮಿಸಲಾಗಿರುವ ಬಯೋ ಬಬಲ್‌ ಒಳಗೆ ಪ್ರವೇಶ ಮಾಡಲಿದ್ದಾರೆ. ಮುಚ್ಚಿದ ರಿವರ್ಸ್‌ ಸೈಡ್‌ ಕ್ರೀಡಾಂಗಣದಲ್ಲಿ ಈ ಅಭ್ಯಾಸ ಪಂದ್ಯ ಜರುಗಲಿದೆ.
ಟೀಮ್ ಇಂಡಿಯಾದ ಯುವ ಓಪನರ್‌ ಶುಭಮನ್‌ ಗಿಲ್‌ ಗಾಯಗೊಂಡು ಇಂಗ್ಲೆಂಡ್‌ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ರೋಹಿತ್ ಶರ್ಮಾ ಜೊತೆಗೆ ಇನಿಂಗ್ಸ್‌ ಆರಂಭಿಸುವ ಸಮರ್ಥ ಆಟಗಾರನ ಖಾತ್ರಿ ಪಡಿಸಿಕೊಳ್ಳಲು ಭಾರತ ತಂಡಕ್ಕೆ ಈ ಎರಡು ಅಭ್ಯಾಸ ಪಂದ್ಯಗಳು ಅತ್ಯಂತ ಮಹತ್ವದ್ದಾಗಿದೆ.
ಇನ್ನು ಚೊಚ್ಚಲ ಆವೃತ್ತಿಯ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು ಸೋತಿರುವ ಭಾರತ ತಂಡ, ಎರಡನೇ ಆವೃತ್ತಿಯ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಲು ಇಂಗ್ಲೆಂಡ್‌ ಎದುರಿನ 5 ಟೆಸ್ಟ್‌ಗಳ ಸರಣಿಯಲ್ಲಿ ಗೆಲ್ಲಬೇಕಿದೆ.
ವಿಲ್‌ ರೋಡ್ಸ್‌ (ವಾರ್ವಿಕ್‌ಶೈರ್‌/ ನಾಯಕ), ರೆಹಾನ್ ಅಹ್ಮದ್ (ಲೈಸ್ಟರ್‌ಶೈರ್‌), ಟಾಮ್‌ ಆಸ್ಪಿನ್‌ವೆಲ್‌ (ಲ್ಯಾಂಕಶೈರ್‌), ಈತನ್‌ ಬಾಂಬರ್‌ (ಮಿಡ್ಲ್‌ಸೆಕ್ಸ್‌), ಜೇಮ್ಸ್‌ ಬ್ರಾಕೇ (ಗ್ಲೌಸ್ಟರ್‌ಶೈರ್‌), ಜಾಕ್‌ ಕ್ರಾಸನ್ (ಸಸೆಕ್ಸ್‌), ಝ್ಯಾಕ್‌ ಚಾಪೆಲ್‌ (ನಾಟಿಂಗ್‌ಹ್ಯಾಮ್‌ಸೈರ್‌), ಹಸೀಬ್‌ ಹಮೀದ್‌ (ನಾಟಿಂಗ್‌ಹ್ಯಾಮ್‌ಶೈರ್‌), ಲಿಂಡನ್‌ ಜೇಮ್ಸ್‌ (ನಾಟಿಂಗ್‌ಹ್ಯಾಮ್‌ಶೈರ್‌), ಜಾಕ್‌ ಲಿಬಿ (ವೊಸ್ಟರ್‌ಶೈರ್‌), ಕ್ರೇಗ್‌ ಮೈಲ್ಸ್‌ (ವಾರ್ವಿಕ್‌ಶೈರ್‌), ಲಿಯಾಮ್‌ ಪ್ಯಾಟರ್ಸನ್‌-ವೈಟ್‌ (ನಾಟಿಂಗ್‌ಹ್ಯಾಮ್‌ಶೈರ್‌), ಜೇಮ್ಸ್‌ ರೀವ್‌ (ಸಮರ್ಸೆಟ್‌), ರಾಬ್‌ ಯಾಟೆಸ್‌ (ವಾರ್ವಿಕ್‌ಶೈರ್‌).
ಅಭ್ಯಾಸ ಪಂದ್ಯಕ್ಕೆ ಟೀಮ್ ಇಂಡಿಯಾ ಸಂಭಾವ್ಯ ಇಲೆವೆನ್ ಹೀಗಿದೆ
1. ರೋಹಿತ್‌ ಶರ್ಮಾ (ಓಪನರ್‌)
2. ಮಯಾಂಕ್ (ಓಪನರ್‌)
3. ಚೇತೇಶ್ವರ್ ಪೂಜಾರ (ಬ್ಯಾಟ್ಸ್‌ಮನ್)
4. ವಿರಾಟ್ ಕೊಹ್ಲಿ (ಬ್ಯಾಟ್ಸ್‌ಮನ್)
5. ಅಜಿಂಕ್ಯ ರಹಾನೆ (ಬ್ಯಾಟ್ಸ್‌ಮನ್)
6. ರಿಷಭ್ ಪಂತ್‌ (ವಿಕೆಟ್‌ಕೀಪರ್/ಬ್ಯಾಟ್ಸ್‌ಮನ್)
7. ಆರ್‌ ಅಶ್ವಿನ್‌ (ಆಫ್‌ ಸ್ಪಿನ್ನರ್‌)
8. ಮೊಹಮ್ಮದ್‌ ಸಿರಾಜ್/ಶಾರ್ದುಲ್‌ ಠಾಕೂರ್ (ಬಲಗೈ ವೇಗಿ)
9. ಜಸ್‌ಪ್ರೀತ್‌ ಬುಮ್ರಾ (ಬಲಗೈ ವೇಗಿ)
10. ಇಶಾಂತ್‌ ಶರ್ಮಾ (ಬಲಗೈ ವೇಗಿ)
11. ಮೊಹಮ್ಮದ್‌ ಶಮಿ (ಬಲಗೈ ವೇಗಿ)

LEAVE A REPLY

Please enter your comment!
Please enter your name here