ಹರಾರೆ ಸ್ಟೇಡಿಯಂನಲ್ಲಿ ಶುಕ್ರವಾರ (ಜುಲೈ 16) ನಡೆದ ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಐದು ವಿಕೆಟ್ ವಿಚಾರದಲ್ಲಿ ಶಕೀಬ್ ವಿಶೇಷ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಧಾಕಾ ಪ್ರೀಮಿಯರ್ ಲೀಗ್‌ನಲ್ಲಿ ಎಲ್ಲೆ ಮೀರಿದ ವರ್ತನೆ ತೋರಿ ಸುದ್ದಿಯಾಗಿದ್ದ ಶಕೀಬ್ ಅಲ್ ಹಸನ್, ಶುಕ್ರವಾರದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದರು. 9.5 ಓವರ್ ಎಸೆದಿದ್ದ ಶಕೀಬ್, 30 ರನ್ ನೀಡಿ 5 ವಿಕೆಟ್ ಮುರಿದಿದ್ದಾರೆ. ಅಲ್ಲದೆ 19 ರನ್ ಕೊಡುಗೆಯೂ ನೀಡಿದ್ದಾರೆ.
ಜಿಂಬಾಬ್ವೆ ವಿರುದ್ಧ ಏಕದಿನದಲ್ಲಿ ಐದು ವಿಕೆಟ್ ದಾಖಲೆಯೊಂದಿಗೆ ಶಕೀಬ್ ಏಕದಿನದಲ್ಲಿ ಒಟ್ಟಾರೆ ಮೂರು ಬಾರಿ ಐದು ವಿಕೆಟ್ ದಾಖಲೆ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ ಬಾಂಗ್ಲಾದೇಶ ಪರ ಅತೀ ಹೆಚ್ಚು ವಿಕೆಟ್ ಪಡೆದವರಲ್ಲಿ ಶಕೀಬ್ ಅವರು ಮಾಜಿ ನಾಯಕ ಮಶ್ರಾಫೆ ಮೊರ್ತಾಝಾ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ್ದಾರೆ.
ಮೊರ್ತಾಝಾ ಏಕದಿನದಲ್ಲಿ 269 ವಿಕೆಟ್ ದಾಖಲೆ ಮಾಡಿದ್ದರೆ, ಶಕೀಬ್ ಈಗ 274 ವಿಕೆಟ್ ಪಡೆದಿದ್ದಾರೆ.
ಶಕೀಬ್ ಈಗಾಗಲೇ ಬಾಂಗ್ಲಾದೇಶದಲ್ಲಿ ಉಳಿದೆರಡು ಮಾದರಿಗಳಲ್ಲಿ ಅತ್ಯಧಿಕ ವಿಕೆಟ್ ಪಡೆದಿದ್ದಾರೆ. ಟೆಸ್ಟ್‌ನಲ್ಲಿ ಶಕೀಬ್ 58 ಪಂದ್ಯಗಳಲ್ಲಿ 215 ವಿಕೆಟ್‌ಗಳು, ಟಿ20ಐನಲ್ಲಿ 76 ಪಂದ್ಯಗಳಲ್ಲಿ 92 ವಿಕೆಟ್ ನೊಂದಿಗೆ ಬಾಂಗ್ಲಾ ಪರ ಅತ್ಯಧಿಕ ವಿಕೆಟ್ ಪಡೆದವರಲ್ಲಿ ಮುಂಚೂಣಿಯಲ್ಲಿದ್ದಾರೆ. ಅಂದ್ಹಾಗೆ ಪಂದ್ಯದಲ್ಲಿ ಬಾಂಗ್ಲಾ ಭರ್ಜರಿ 155 ರನ್ ಜಯ ಗಳಿಸಿದೆ.