ಯೋಗದಿಂದ ಆರೋಗ್ಯ, ಜಗತ್ತಿಗೇ ಬೇಕು ಯೋಗ, ಸರ್ವರಿಗೂ ಯೋಗ ಬೇಕು ಏಕೆ?

Date:

ಜಗತ್ತಿನಾದ್ಯಂತ ಇಂದು ಅಂತರಾಷ್ಟ್ರೀಯ ಯೋಗ ದಿನ ಆಚರಣೆಯಾಗುತ್ತಿದೆ. ದೇಹ ಹಾಗೂ ಮನಸ್ಸಿನ ಮೇಲೆ ಇದರ ಪ್ರಭಾವವನ್ನು ಅರಿತು ಎಲ್ಲರೂ ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಆರೋಗ್ಯವಂತರಾಗಿರಲು ಉತ್ಸುಕರಾಗಿದ್ದಾರೆ.
ಯೋಗ ಶಾಸ್ತ್ರವು ಮನುಕುಲಕ್ಕೆ ಭಾರತದ ಅತೀ ಶ್ರೇಷ್ಟವಾದ ಕೊಡುಗೆಯಾಗಿದೆ. ಯೋಗದ ಗುರಿ ಆರೋಗ್ಯದ ಸುಧಾರಣೆಯಿಂದ ಹಿಡಿದು ಮೋಕ್ಷ್ಗ ಸಾಧಿಸುವ ಉದ್ದೇಶದ ವರೆಗೆ ಬೇರೆ ಬೇರೆಯಾಗಿದೆ.
ಯೋಗೆ ಕದಡಿದ ಚಿಂತಾಕ್ರಾಂತ ಮನಸ್ಸಿಗೆ ಒಂದು ಶಾಂತಿಮಂತ್ರ, ರೋಗಿಗಳಿಗೆ ವರಧಾನ, ಅರೋಗ್ಯವಂತರಿಗೆ ದೇಹ ಮತ್ತು ಮನಸ್ಸನ್ನು ಸಧೃಡವಾಗಿಸುವ ಸಿದ್ದ ಉಪಾಯ. ಧ್ಯಾನದ ಮೂಲಕ ಪ್ರಜ್ನೆಯ ಉನ್ನತ ಹಂತಗಳನ್ನು ಅನುಭವಿಸುವುದರ ತಂತ್ರವನ್ನು ತಿಳಿಸುತ್ತದೆ. ಅಷ್ಟೇ ಅಲ್ಲದೆ ನೆನಪಿನ ಶಕ್ತಿ, ಬುದ್ದಿ ಶಕ್ತಿ ಹಾಗೂ ಕ್ರಿಯಾಶೀಲತೆ ವೃದ್ದಿಸುವ ವಿಶೇಷ ಗುಣಗಳಿಂದ ಇಂದು ಶಿಕ್ಷಣದ ಒಂದು ಭಾಗವಾಗಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ.
ಶಡ್ ದರ್ಶನಗಳಲ್ಲಿ ಒಂದಾದ ಪಾತಂಜಲ ಯೋಗ ದರ್ಶನದಲ್ಲಿ ಯೋಗ ಶಾಸ್ತ್ರದ ಕುರಿತಂತೆ ವಿಸ್ತೃತ ಮಾಹಿತಿಯನ್ನು ಮಹರ್ಷಿ ಪತಂಜಲಿ ವ್ಯಾಖ್ಯಾನಿಸಿದ್ದಾರೆ. ಯೋಗ ಪಂಥವು ಸಾಂಖ್ಯ ಮನಶಾಸ್ತ್ರ ಹಾಗೂ ಆಧ್ಯಾತ್ಮವನ್ನು ಸ್ವೀಕರಿಸುತ್ತದೆ. ಮನಸ್ಸನ್ನು ನಿಯಂತ್ರಿಸುವ ವ್ಯವಸ್ಥೆಯಾದ ಪತಂಜಲ ಯೋಗವನ್ನು ರಾಜಯೋಗ ಎಂದು ಕರೆಯಲಾಗುತ್ತದೆ. ಯಮ, ನಿಯಮ, ಯೋಗಾಸನ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗೂ ಸಮಾಧಿ ಯೋಗದ ಎಂಟು ಅಂಗಗಳು.
ಯೋಗ ದೈಹಿಕ ವ್ಯಾಯಾಮಕ್ಕೆ ಸೀಮಿತವಾದುದಲ್ಲ, ಬದಲಾಗಿ ಅದು ಪೂರ್ಣವಾದ ಜೀವನ ವಿಧಾನ. ಶರೀರ, ಮನಸ್ಸು, ಬುದ್ದಿ ಮತ್ತು ಆತ್ಮಗಳ ನಡುವೆ ಸಮನ್ವಯವನ್ನು ಸಾಧಿಸಲು ಉಪಯುಕ್ತವಾಗುತ್ತದೆ.
ವಿವಿಧ ಶಾರೀರಿಕ ಹಾಗೂ ಮಾನಸಿಕ ರೋಗಗಳಿಗೆ ಯೋಗ ಉತ್ತಮ ಚಿಕಿತ್ಸೆಯಾಗಿದೆ. ಮಾನಸಿಕ ಒತ್ತಡ, ಬದಲಾದ ಜೀವನ ಶೈಲಿಯಿಂದಾಗುವ ತೊಂದರೆಗಳಿಗೆ, ಉಬ್ಬಸ, ರಕ್ತದೊತ್ತಡ,ನಿದ್ರಾಹೀನತೆ, ಬೊಜ್ಜುತನ ಹಾಗೂ ಸಕ್ಕರೆ ರೋಗಗಳಿಗೆ ವಿವಿಧ ಚಿಕಿತ್ಸಾ ವಿಧಾನಗಳು ಉಲ್ಲೇಖಿತವಾಗಿದೆ. ಆದರೆ ವಯಸ್ಸು, ರೋಗದ ಅವಸ್ಥೆ, ದೇಹ ಶಕ್ತಿಗೆ ಅನುಗುಣವಾದ ಚಿಕೆತ್ಸೆಯನ್ನು ತಜ್ನವೈದ್ಯರಿಂದ ತಿಳಿದು ಅನುಸರಿಸುವುದು ಉತ್ತಮ.
ನಿತ್ಯ ಯೋಗಾಭ್ಯಾಸದಿಂದ ಹಲವು ಉಪಯೋಗಗಳಿದ್ದು, ಶರೀರದ ವಿವಿಧ ಕೋಶಗಳಿಗೆ ಉತ್ತಮ ಪ್ರಭಾವ ಬೀರುತ್ತದೆ.
ಯೋಗಾಭ್ಯಾಸದಲ್ಲಿ ನಿರತರಾದಂತೆ ಕೆಲವು ಲಕ್ಷಣಗಳು ಪ್ರಾಪ್ತಿಯಾಗುತ್ತದೆ.
ಪ್ರಥಮವಾಗಿ ದೇಹದಲ್ಲಿ ಲಘುತ್ವ, ಆರೋಗ್ಯ ವೃದ್ದಿ, ಶುಭ್ರ ಕಾಂತಿ, ಮಧುರ ಸ್ವರ, ದೇಹದಲ್ಲಿನ ಬೆವರು ಕಡಿಮೆಯಾಗುತ್ತದೆ.
1. ಮಾಂಸ ಖಂಡಗಳಲ್ಲಿನ ಒತ್ತಡವನ್ನು ಕದಿಮೆಗೊಳಿಸಿ ದೇಹದವನ್ನು ಹಗುರವಾಗಿಸುತ್ತದೆ
2. ಉಸಿರಾಟದ ವೇಗವನ್ನು ನಿಯಂತ್ರಿಸಿ ಪ್ರಾಣಕ್ಕೆ , ಶ್ವಾಸಕೋಶಕ್ಕೆ ಶಕ್ತಿಯನ್ನು ನೀಡುತ್ತದೆ.
3. ನಿಪುಣತೆ, ಕ್ರಿಯಾಶೀಲತೆ ಹಾಗೂ ಇಚ್ಚಾಶಕ್ತಿಯನ್ನು ಹೆಚ್ಚಿಸುತ್ತದೆ.
4. ಬುದ್ದಿಯನ್ನು ಚುರುಕುಗೊಳಿಸಿ, ಮನಸ್ಸನ್ನು ಶಾಂತಗೊಳಿಸುತ್ತದೆ
5. ಅಪ್ರತಿಯ ಮನಃ ಸಂತೋಷವನ್ನು ನೀಡಿ ಭಾವನಾತ್ಮಕ ಸಮತೋಲನವನ್ನು ಕಾಪಾಡುತ್ತದೆ.

  • ಡಾ. ಮಹೇಶ ಶರ್ಮಾ. ಎಂ
    9964022654

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...