ಚಹರ್- ಭುವಿ ಆಟದ ಬಗ್ಗೆ ಗಬ್ಬರ್ ಹೇಳಿದ್ದಿಷ್ಟು

Date:

ಭಾರತ ತಂಡದ ಮುಂದೆ ಇದ್ದದ್ದು 276 ರನ್‌ಗಳ ಗುರಿ. ಆದರೆ 36 ಓವರ್‌ಗಳ ವೇಳೆಗೆ ಭಾರತ 193 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಸ್ಪೆಶಲಿಸ್ಟ್ ಬ್ಯಾಟ್ಸ್‌ಮನ್‌ಗಳೆಲ್ಲರೂ ಪೆವಿಲಿಯನ್ ಸೇರಿಯಾಗಿತ್ತು. ಗೆಲುವಿನ ಕನಸು ಕಾಣುವುದು ಅಸಾಧ್ಯವಾಗಿತ್ತು. ಆದರೆ ಬಳಿಕ ಯಾರೂ ಊಹಿಸದ ಫಲಿತಾಂಶ ಬಂದಿತ್ತು. ದೀಪಕ್ ಚಾಹರ್ ಗೆಲುವಿನ ಹೀರೋ ಆಗಿ ಮಿಂಚಿದರು. ಉಪ ನಾಯಕ ಭುವನೇಶ್ವರ್ ಕುಮಾರ್ ಮತ್ತೊಂದು ತುದಿಯಲ್ಲಿ ನಿಂತು ಜವಾಬ್ಧಾರಿಯುತ ಜೊತೆಯಾಟವನ್ನು ನೀಡಿದರು. ಭಾರತ 3 ವಿಕೆಟ್‌ಗಳ ಗೆಲುವು ಸಾಧಿಸಿ ಸರಣಿಯನ್ನು ವಶಕ್ಕೆ ಪಡೆದಿತ್ತು.

ಈ ರೋಮಾಂಚನಕಾರಿ ಗೆಲುವಿನ ನಂತರ ಭಾರತ ತಂಡದ ನಾಯಕ ಶಿಖರ್ ಧವನ್ ಪ್ರತಿಕ್ರಿಯಿಸಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ದೀಪಕ್ ಚಹರ್ ಹಾಗೂ ಭುವನೇಶ್ವರ್ ಜೊತೆಯಾಟವನ್ನು ‘ಪ್ರಚಂಡ ಪ್ರದರ್ಶನ’ ಎಂದು ಬಣ್ಣಿಸಿದ್ದಾರೆ. ಪಂದ್ಯದ ಮುಕ್ತಾಯದ ನಂತರ ಮಾತನಾಡಿದ ಧವನ್ “ಚಹರ್ ಮತ್ತು ಭುವಿ ಪ್ರದರ್ಶನ ಅದ್ಭುತವಾಗಿತ್ತು” ಎಂದಿದ್ದಾರೆ.
“ಚಹರ್ ನೆಟ್‌ನಲ್ಲಿ ಬ್ಯಾಟಿಂಗ್ ಮೇಲೆಯೂ ಸಾಕಷ್ಟು ಕಠಿಣ ಪರಿಶ್ರಮವನ್ನು ಪಡುತ್ತಿದ್ದರು ಎಂಬುದು ನಮಗೆ ಗೊತ್ತಿದೆ. ಆತನ ಸಂದರ್ಭಕ್ಕೆ ತಕ್ಕ ಮನಸ್ಥಿತಿ ಹಾಗೂ ಲೆಗ್‌ಸ್ಪಿನ್ನರ್‌ ದಾಳಿಗೆ ನೀಡಿದ ಪ್ರತ್ಯುತ್ತರ ಅದ್ಭುತವಾಗಿತ್ತು. ಅಂತಿಕ ನಾಲ್ಕು ಓವರ್‌ಗಳಲ್ಲಿ ಅವರು ಲೆಗ್ ಸ್ಪಿನ್ನರ್ ಮೇಲೆ ಹೆಚ್ಚಿನ ದಾಳಿ ನಡೆಸಲು ಮುಂದಾಗಿರಲಿಲ್ಲ. ಯಾಕೆಂದರೆ ಬೌಲರ್ ಆ ಸಂದರ್ಭದಲ್ಲಿ ಸಾಕಷ್ಟು ಮಾರಕವಾಗಿ ಪರಿಣಮಿಸಿದ್ದರು.
“ನನ್ನ ಪ್ರಕಾರ ಇಂದು ಕಳೆದ ಪಂದ್ಯಕ್ಕೆ ಹೋಲಿಸಿದರೆ ಪಿಚ್ ಉತ್ತಮವಾಗಿತ್ತು. ನಾವು ಅವರನ್ನು ಉತ್ತಮ ಮೊತ್ತಕ್ಕೆ ಕಟ್ಟಿಹಾಕಿದ್ದೆವು. ಬೌಲರ್‌ಗಳು ಲೈನ್‌ ಮತ್ತು ಲೆಂತ್‌ನಲ್ಲಿ ನಿಜಕ್ಕೂ ಉತ್ತಮವಾದ ನಿಯಂತ್ರಣವನ್ನು ಸಾಧಿಸಿದ್ದರು.

ನಾವು ಈ ಮೊತ್ತವನ್ನು ಬೆನ್ನಟ್ಟುವ ವಿಶ್ವಾಸವನ್ನು ಹೊಂದಿದ್ದೆವು. ಆದರೆ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡ ಕಾರಣ ಹಿನ್ನೆಡೆ ಅನುಭವಿಸಿದೆವು ಎಂದಿದ್ದಾರೆ ಶಿಖರ್ ಧವನ್
“ಯುವ ಆಟಗಾರರಗೆ ಇದು ನಿಜಕ್ಕೂ ಉತ್ತಮ ಪಾಠವಾಗಿದೆ. ಯಾಕೆಂದರೆ ಎಲ್ಲಾ ದಿನವೂ ಒಂದೇ ರಿತಿಯಾಗಿರುವುದಿಲ್ಲ. ಇಂತಾ ಪರಿಸ್ಥಿತಿಗಳನ್ನು ಹೇಗೆ ಎದುರಿಸಬೇಕು ಹೇಗೆ ಹೊಸ ರಣತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಅರ್ಥ ಮಾಡಿಕೊಳ್ಳುತ್ತಾರೆ. ಪ್ರತಿ ಪಂದ್ಯದಲ್ಲಿಯೂ ನಾವು ಗೆಲುವು ಸಾಧಿಸಿದರೈ ಅಥವಾ ಸೋಲು ಕಂಡರೂ ಅದೊಂದು ಪಾಠವಾಗಿರುತ್ತದೆ. ನಾವು ಮತ್ತಷ್ಟು ಉತ್ತಮವಾಗುವತ್ತ ಮುನ್ನಡೆಯುತ್ತೇವೆ” ಎಂದು ನಾಯಕ ಶಿಖರ್ ಧವನ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ನಾಯಕ ಧವನ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದ ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್ ಹಾಗೂ ಕೃನಾಲ್ ಪಾಂಡ್ಯ ಪ್ರದರ್ಶನದ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...