ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

Date:

“ಡಾಕ್ಟರೇ ನೀವು ನಮ್ಮ ಪಾಲಿನ ದೇವ್ರು..”! ಅನ್ನೋದು ಕಾಮನ್ ಡೈಲಾಗ್. ಪ್ರತಿಯೊಬ್ಬ ರೋಗಿಯೂ, ಆತನ ಕುಟುಂಬವೂ ತಮ್ಮ ವೈಧ್ಯರನ್ನು ದೇವರಿಗೆ ಹೋಲಿಸಿ ಮಾತನಾಡುವುದನ್ನು ನಾವು ಸಾಮಾನ್ಯವಾಗಿ ಕೇಳ್ತಾನೆ ಇರ್ತೀವಿ..! ಕೆಲವೊಮ್ಮೆ ಎಲ್ಲೂ ಗುಣವಾಗದ ಕಾಯಿಲೆಯನ್ನು ಗುಣಪಡಿಸಿದ ಡಾಕ್ಟರ್ ರೋಗಿಗಳ ಪಾಲಿಗೆ ದೇವರಾಗುವುದು ಸರ್ವೇ ಸಾಮಾನ್ಯ..! ಆದ್ರೆ ಡಾಕ್ಟರ್ ಮಿರಾಕಲ್, ಪವಾಡ ಮಾಡಿ “ದೇವತಾ ಡಾಕ್ಟರ್” ಆಗೋದು ತೀರಾ ಅಪರೂಪ..! ಮಿರಾಕಲ್ ಮಾಡಿ ದೇವರಾದ ಡಾಕ್ಟರ್ ಒಬ್ಬರು ಅಮೇರಿಕಾದ ವಾಷಿಂಗ್ಟನ್ನಲ್ಲಿದ್ದಾರೆ..! ಅವರೇ ನಮ್ಮ ಇಂಡಿಯಾ ಮೂಲದ ಡಾಕ್ಟರ್ ಅನಂತ ಮೂರ್ತಿ..! ಅವರು ಮಾಡಿದ ಪವಾಡ ಅದ್ಭುತ, ಅತ್ಯಾದ್ಭುತ..ಅದನ್ನು ನೀವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ..! ಹಾಗಾದ್ರೆ ಆ ಡಾಕ್ಟರ್ ಮಾಡಿದ ಮಿರಾಕಲ್ ಏನೂ ಎಂಬುದನ್ನು ನೀವು ತಿಳಿಲೇ ಬೇಕಲ್ವಾ..? ಸರಿ, ಅದನ್ನೂ ಹೇಳ್ತೀವಿ…!
ಡಾಕ್ಟರ್ ಅನಂತ ಮೂರ್ತಿ ವಾಷಿಂಗ್ಟನ್ ನ “ಅಕ್ರೋನ್ ಚಿಲ್ಡ್ರನ್ಸ್ ಹಾಸ್ಪೆಟಲ್ ನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ನಿರ್ದೇಶಕರು..! ಇವರೀಗ 8 ವರ್ಷದ “ಎಲಿಜಾ ಬೆಲ್” ಎಂಬ ಬಾಲಕ ಮತ್ತು ಆತನ ಕುಟುಂಬದವರ ಆರಾಧ್ಯ ದೇವರಾಗಿ ಬಿಟ್ಟಿದ್ದಾರೆ..! ಎಲಿಜಾ ಬೆಲ್ Bilateral astresia microtia  ಎಂಬ ಸಮಸ್ಯೆಯಿಂದ ವ್ಯತೆ ಪಡ್ತಾ ಇರ್ತಾನೆ..! Bilateral astresia microtia  ಇಂದಾಗಿ ಈತನ ಕಿವಿಗಳು ಹೊರಭಾಗದಲ್ಲಿ ಬೆಳವಣಿಗೆ ಹೊಂದಿರಲ್ಲ…! ಮಧ್ಯ ಮತ್ತು ಒಳ ಕಿವಿಗೆ ಅಡ್ಡಲಾಗಿ ಹೊರಕಿವಿ ಮುಚ್ಚಿರುತ್ತೆ..! ಇದರಿಂದಾಗಿ ಇವನಿಗೆ ಸರಿಯಾಗಿ ಏನೇನೂ ಕೇಳ್ತಾ ಇರಲ್ಲ..! ಒಂದೇ ಒಂದು ಸಲ ಆ ಪುಟ್ಟ ಬಾಲಕನ ಸಮಸ್ಯೆಯನ್ನು ಕಲ್ಪಿಸಿಕೊಳ್ಳಿ..? ಪಾಪ, ಆ ಸಮಸ್ಯೆಯಿಂದ ತುಂಬಾನೇ ತೊಂದ್ರೆ ಅನುಭವಿಸ್ತಾ ಇದ್ದ ಆ ಬಾಲಕ..! ಆಗಾಲೇ ಡಾಕ್ಟರ್ ಅನಂತ ಮೂರ್ತಿಯವರನ್ನು ಭೇಟಿ ಮಾಡಲಾಗುತ್ತೆ..! ಇವರು 5 ಸುತ್ತಿನ ಸರ್ಜರಿ ಮೂಲಕ ಈತನಿಗೂ ನಾರ್ಮಲ್ ಕಿವಿ ಕರುಣಿಸುವಲ್ಲಿ ಯಶಸ್ವಿಯಾಗ್ತಾರೆ..! ಎಲಿಜಾ ಬೆಲ್ ನಿಗೆ ಮೊಟ್ಟಮೊದಲ ಸರ್ಜರಿ ಮಾಡುವಾಗ ನಾಲ್ಕು ವರ್ಷ ವಯಸ್ಸು..! ಆರಂಭದಲ್ಲಿ ಕೃತಕ ಕಿವಿ ಮೂಲಕ ಕೇಳುವ ಭಾಗ್ಯ ಈತನಿಗೆ ಲಭ್ಯವಾಗುತ್ತೇ ಈಗ ಸಂಪೂರ್ಣ ಐದನೇ ಸರ್ಜರಿ ಕೂಡ ಯಶಸ್ವಿಯಾಗಿ ಮುಗಿಸಿರುವ ಡಾಕ್ಟರ್ ಅನಂತ ಮೂರ್ತಿ ಪುಟ್ಟ ಬಾಲಕ ಎಲ್ಲರಂತೇ ಕಿವಿಯನ್ನು ಹೊಂದಿ, ಅದೇ ಕಿವಿಯಿಂದ ಕೇಳುವಂತೆಯೂ ಮಾಡಿದ್ದಾರೆ..!
ಕಣ್ಣಿಲ್ಲದವನಿಗೆ ಕಣ್ಣು ಅಳವಡಿಸಿದ್ದು, ಕಾಲಿಲ್ಲದವನಿಗೆ ಕೃತಕಕಾಲು ಜೋಡಿಸಿದ್ದು ಕೇಳಿದ್ದೇವೆ..! ಅಷ್ಟೇ ಏಕೆ ಹೃದಯವನ್ನೂ ಅಳವಡಿಸುವ ಸಂಗತಿಗಳನ್ನು ಕೆಳಿದ್ದೇವೆ..! ಆದ್ರೆ ಕಿವಿ ಇಲ್ಲದವನಿಗೆ ಕೃತಕ ಕಿವಿ, ಕೇಳುವ ಮಿಶನ್ ಜೋಡಿಸಿರುವುದೂ ನಮಗೆ ಗೊತ್ತೇ ಇದೆ..! ಆದ್ರೆ ಕಿವಿ ಇಲ್ಲದವನಿಗೆ ಸ್ವಾಭಾವಿಕ ಕಿವಿಯನ್ನೇ ಕರುಣಿಸಿರುವುದು ಮಿರಾಕಲ್ ಅಲ್ವೇನ್ರೀ..?

  • ಶಶಿಧರ ಡಿ ಎಸ್ ದೋಣಿಹಕ್ಲು

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...