ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲಿ ಅತಿ ಹೆಚ್ಚು ಸುದ್ದಿ ಗೀಡಾಗಿರುವ ವ್ಯಕ್ತಿ ಎಂದರೆ ಅದು ದಿವ್ಯ ಉರುಡುಗ. ಇತ್ತೀಚೆಗಷ್ಟೇ ತನ್ನ ಹಳೆಯ ಬಾಯ್ ಫ್ರೆಂಡ್ ಜತೆ ಇರುವ ಚಿತ್ರಗಳು ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡಿದ್ದವು. ಸದ್ಯ ಮನೆಯಲ್ಲಿ ತನ್ನ ಪ್ರತಿಸ್ಪರ್ಧಿಯಾಗಿರುವ ಅರವಿಂದ್ ಜತೆ ಸಲುಗೆಯಿಂದ ಇರುವ ದಿವ್ಯ ಉರುಡುಗ ಬಿಗ್ ಬಾಸ್ ಮನೆಯ ಪ್ರೇಮಪಕ್ಷಿಗಳು ಎಂದೇ ಸುದ್ದಿಯಾಗಿದ್ದಾರೆ.
ಇದೆಲ್ಲದರ ನಡುವೆ ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯಲ್ಲಿ ವರ್ಣದ ಬಗ್ಗೆ ಚರ್ಚೆಗಳು ನಡೆದವು. ಈ ಸಂದರ್ಭದಲ್ಲಿ ಕಪ್ಪು ವರ್ಣದ ಸಮಸ್ಯೆಯನ್ನು ಎದುರಿಸಿದ್ದ ಸಂದರ್ಭಗಳ ಕುರಿತಾಗಿ ದಿವ್ಯ ಉರುಡುಗ ಮಾತನಾಡಿದರು. ಚಿಕ್ಕ ವಯಸ್ಸಿನಿಂದಲೇ ತನಗೆ ತಾನು ಕಪ್ಪು ಎಂಬ ಮನೋಭಾವ ಹುಟ್ಟುವಂತೆ ತನ್ನ ಸುತ್ತಮುತ್ತಲಿನ ಸಂಬಂಧಿಕರೇ ಮಾಡಿದ್ದರು ಎಂಬ ವಿಷಯವನ್ನು ದಿವ್ಯ ಉರುಡುಗ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದರು.
ಚಿಕ್ಕ ವಯಸ್ಸಿನಿಂದಲೂ ಎಲ್ಲರೂ ನನ್ನನ್ನು ಕಪ್ಪು ಎಂಬಂತೆ ಬಿಂಬಿಸಿದರು ಹಾಗಾಗಿ ನನಗೂ ಆ ಬೇಸರ ಕಾಡುತ್ತಿತ್ತು ಆದರೆ ನಾನು ಬೆಳೆಯುತ್ತಾ ದೊಡ್ಡವಳಾದಂತೆ ಬುದ್ಧಿ ಬಂದಂತೆ ಕಪ್ಪು ಒಂದು ಬಣ್ಣವಷ್ಟೆ ಅದು ಕೆಟ್ಟದ್ದಲ್ಲ ಎಂಬುದನ್ನು ಅರಿತೆ, ನಂತರ ನಾನೂ ಕೂಡ ಸುಂದರವಾಗಿದ್ದೇನೆ ಎಂದು ತಿಳಿಯುತ್ತ ಬದುಕುವುದನ್ನು ಕಲಿತೆ ಎಂದು ದಿವ್ಯಾ ಉರುಡುಗ ಹೇಳಿಕೊಂಡಿದ್ದಾರೆ.