ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ 5ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದು, ಮೊದಲನೇ ಪಂದ್ಯ ಬುಧವಾರದಿಂದ ಆರಂಭವಾಗಿದೆ. ಇಂಗ್ಲೆಂಡ್ ನ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡು ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ನೀರಸ ಪ್ರದರ್ಶನವನ್ನು ನೀಡಿತು.
ಇಂಗ್ಲೆಂಡ್ ಪರ ನಾಯಕ ಜೋ ರೂಟ್ ಅರ್ಧಶತಕ ಸಿಡಿಸಿದ್ದು ಬಿಟ್ಟರೆ ಬೇರೆ ಯಾವುದೇ ಆಟಗಾರ 30ರ ಗಡಿ ದಾಟಲಿಲ್ಲ. ಹೀಗಾಗಿ ಭಾರತದ ಬೌಲರ್ ಗಳ ದಾಳಿಗೆ ಮಂಕಾದ ಇಂಗ್ಲೆಂಡ್ 183 ರನ್ ಗಳಿಗೆ ಆಲೌಟಾಯಿತು. ಭಾರತ ತಂಡದ ಪರ ಜಸ್ಪ್ರೀತ್ ಬುಮ್ರಾ 4ವಿಕೆಟ್, ಮೊಹಮ್ಮದ್ ಶಮಿ 3ವಿಕೆಟ್, ಶಾರ್ದೂಲ್ ಠಾಕೂರ್ 2ವಿಕೆಟ್ ಮತ್ತು ಮೊಹಮ್ಮದ್ ಸಿರಾಜ್ 1ವಿಕೆಟ್ ಪಡೆದರು.