ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರೀಕರಣ ಮುಗಿದಿದ್ದು ಚಿತ್ರ ಮಂದಿರಗಳು ತೆರೆದರೆ ಬಿಡುಗಡೆಯಾಗಲು ಕಾಯುತ್ತಿದೆ. ಹಾಗೂ ಕಿಚ್ಚ ಸುದೀಪ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಕೂಡ ಚಿತ್ರೀಕರಣವನ್ನು ಮುಗಿಸುವ ಹಂತದಲ್ಲಿದ್ದು ಈ ವರ್ಷವೇ ಚಿತ್ರಮಂದಿರಕ್ಕೆ ಲಗ್ಗೆ ಇಡಲು ಕಾಯುತ್ತಿದೆ.
ಹೀಗಿರುವಾಗ ಇಂದು ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹೊಸದೊಂದು ಅಪ್ಡೇಟ್ ಹಾಕಿದ್ದು ಎಲ್ಲರಲ್ಲಿಯೂ ಕುತೂಹಲವನ್ನು ಕೆರಳಿಸಿದೆ. ಹೊಂಬಾಳೆ ಫಿಲ್ಮ್ಸ್ ತನ್ನ ಹನ್ನೊಂದನೇ ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆಯನ್ನು ನಾಳೆ ಬೆಳಗ್ಗೆ 11:43ಕ್ಕೆ ಬಿಡುಗಡೆ ಮಾಡುವುದಾಗಿ ಪೋಸ್ಟರ್ ಒಂದನ್ನು ಇಂದು ಬಿಡುಗಡೆ ಮಾಡಿದೆ.
ಈ ಪೋಸ್ಟರ್ ನೋಡಿದ ಕೂಡಲೇ ಎಲ್ಲರ ಮನಸ್ಸಿನಲ್ಲಿಯೂ ಬರುವುದು ಈ ಚಿತ್ರದ ಹೀರೋ ಖಚಿತವಾಗಿಯೂ ಸುದೀಪ್ ಎಂಬುದು. ಏಕೆಂದರೆ ಈ ಪೋಸ್ಟರ್ ನಲ್ಲಿ ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೆ ಕಿಚ್ಚು ಎಂಬ ಪದವನ್ನು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿತ್ತು ಈ ಚಿತ್ರದಲ್ಲಿ ಖಚಿತವಾಗಿಯೂ ಸುದೀಪ್ ನಾಯಕನಾಗಿ ಅಭಿನಯಿಸಲಿದ್ದಾರೆ ಎಂಬುದು ಗಾಢವಾದ ಊಹೆಯಾಗಿದೆ.