ಬಿಗ್ ಬಾಸ್ ಕನ್ನಡ ಸೀಸನ್ 8 ಮುಗಿಯುವ ಹಂತ ತಲುಪಿದ್ದು ಕೊನೆಯದಾಗಿ 5ಸ್ಪರ್ಧಿಗಳು ಫಿನಾಲೆ ವಾರದಲ್ಲಿ ಉಳಿದುಕೊಂಡಿದ್ದಾರೆ. ಫಿನಾಲೆ ವಾರಕ್ಕೂ ಮುನ್ನ ನಡೆದ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಬಿಗ್ ಬಾಸ್ ಸ್ಪರ್ಧಿ ದಿವ್ಯ ಸುರೇಶ್ ಹೊರಬಿದ್ದಿದ್ದಾರೆ.
ಫಿನಾಲೆ ತಲುಪಿ ಬಿಗ್ ಬಾಸ್ ಟ್ರೋಫಿ ಗೆಲ್ಲುವ ಕನಸನ್ನು ಹೊತ್ತಿದ್ದ ದಿವ್ಯ ಸುರೇಶ್ ಕೊನೆ ಹಂತದಲ್ಲಿ ಫಿನಾಲೆ ಪ್ರವೇಶಿಸುವ ಅವಕಾಶವನ್ನು ಕೂಡ ಪಡೆದುಕೊಳ್ಳಲಾಗದೆ ಮನೆಯಿಂದ ಹೊರಬಿದ್ದಿದ್ದಾರೆ. ಈ ಸಂದರ್ಭದಲ್ಲಿ ದಿವ್ಯ ಸುರೇಶ್ ಮನೆಯಿಂದ ಹೊರ ಹೋಗುವಾಗ ತಮ್ಮ ಪ್ರತಿಸ್ಪರ್ಧಿ ಕಲಿಕೆ ಯಾರಿಗೂ ಸಹ ಮುಖವನ್ನೂ ತೋರಿಸದೆ ಹೊರನಡೆದಿದ್ದಾರಂತೆ.
ಹೌದು ಎಲಿಮಿನೇಟ್ ಆಗ್ತಾ ಇದ್ದಂತೆ ಮನೆಯ ಇತರ ಸ್ಪರ್ಧಿಗಳ ಜೊತೆ ಮಾತನ್ನೂ ಆಡದೆ ಮನೆಯಿಂದ ದಿವ್ಯಾ ಸುರೇಶ್ ಹೊರ ಬಂದಿದ್ದಾರಂತೆ. ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದಾಗ ನಾನು ಶುರು ಮಾಡಿದ ಯಾವ ಕೆಲಸವೂ ಸಹ ಪೂರ್ಣವಾಗುವುದಿಲ್ಲ, ನಾನು ಯಾವುದರಲ್ಲೂ ಜಯ ಸಾಧಿಸಿಲ್ಲ ಎಂದು ದಿವ್ಯಾ ಸುರೇಶ್ ಅಳಲು ತೋಡಿಕೊಂಡಿದ್ದರು. ಆದರೆ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೊನೆಯ ಹಂತದವರೆಗೂ ಬಂದಿದ್ದು ಜಯಾ ಸಾಧಿಸಲಿದ್ದೇನೆ ಎಂಬ ನಂಬಿಕೆ ದಿವ್ಯಾ ಸುರೇಶ್ ಅವರಲ್ಲಿತ್ತು. ಆದರೆ ಅದು ಕೂಡ ಈಗ ಕೈತಪ್ಪಿರುವುದೇ ದಿವ್ಯಾ ಸುರೇಶ್ ಈ ರೀತಿ ನಡೆದುಕೊಳ್ಳುವುದಕ್ಕೆ ಕಾರಣ ಎನ್ನಲಾಗುತ್ತಿದೆ..