ಜಿಗರ್ ಥಂಡಾ…. ಕಿಚ್ಚನ ಕನಸಿನ ಕೂಸು. ಗಾಂಧಿನಗರದ ಗಲ್ಲಿಗಳಲ್ಲಿ ಸುದ್ದಿ ಮಾಡ್ತಾನೇ ಬಂದ ಈ ಥಂಡಾ, ಈ ವಾರ ತೆರೆಗೆ ಅಪ್ಪಳಿಸ್ತಾ ಇದೆ. ಕಂಚಿನ ಕಂಠದ ಆರ್ಮುಗಂ ರವಿಶಂಕರ್ ಅಭಿನಯದ ೫೦ನೇ ಸಿನಿಮಾ ಈ ಜಿಗರ್ ಥಂಡಾ. ಖಡಕ್ ಲುಕ್ಕು, ಭಯಂಕರ್ ಕಿಕ್ಕು ಜೊತೆ ಚಿತ್ರದ ಪ್ರತಿಯೊಂದು ಸೀನ್‌ಗಳಲ್ಲಿ ಅಬ್ಬರಿಸಿ ಬೊಬ್ಬರಿದಿದ್ದಾರೆ ಈ ಡೈಲಾಗ್ ಡಾನ್.
ರಾಹುಲ್ ಈ ಚಿತ್ರದ ಇನ್ನೊಂದು ಜಿಗರ್. ಎರಡನೇ ಇನಿಂಗ್ಸ್ ನಲ್ಲಿ ಅದೃಷ್ಟ ಪರೀಕ್ಷೆಗೆ ರೆಡಿಯಾಗಿರುವ ಈ ಹುಡ್ಗನಿಗೆ, ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ. ಇನ್ನು ಸಂಯುಕ್ತಾ ಹೊರನಾಡು ಚಿತ್ರದ ನಾಯಕಿಯಾದ್ರೆ, ಚಿಕ್ಕಣ್ಣ ಚಿತ್ರದ ಇನ್ನೊಂದು ಹೈಲೆಟ್. ಲವ್ ಆಂಡ್ ಎಮೋಷನ್‌ಗಳ ಹೂರಣದ ಈ ಕಥೆಗೆ ಶಿವಗಣೇಶ್ ನಿರ್ದೇಶನವಿದೆ. ಅಭಿನಯ ಚಕ್ರವರ್ತಿ ಸುದೀಪ್ ಫೇವರೆಟ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಕಲರವ ಚಿತ್ರಕ್ಕಿದೆ.
ಇದು ಜಿಗರ್ ಥಂಡಾ ಕಥೆಯಾದ್ರೆ ಈ ವಾರ ಮತ್ತೊಂದು ಚಿತ್ರ ಲಕ್ಷ್ಮಣ ಕೂಡ ತೆರೆಗೆ ಬರ್ತಿದೆ. ಮಾಜಿ ಶಾಸಕ ಎಚ್.ಎಂ.ರೇವಣ್ಣ ಪುತ್ರ ಅನೂಪ್ ಅಭಿನಯದ ಸಿನಿಮಾ ಹಾಡುಗಳಿಂದ ಈಗಾಗ್ಲೆ ಒಂದಷ್ಟು ಸುದ್ದಿ ಮಾಡಿ ಚಿತ್ರದ ಬಗ್ಗೆ ನಿರೀಕ್ಷೆ ಮೂಡೋ ಹಾಗೆ ಮಾಡಿದೆ.
ಅನೂಪ್ ಮೊದಲ ಬಾರಿಗೆ ಬಿಳ್ಳಿತೆರೆಯಲ್ಲಿ ರಾರಾಜಿಸ್ತಾ ಇದ್ದು ಚಿತ್ರಕ್ಕೋಸ್ಕರ ಅಷ್ಟೇ ಕಷ್ಟಪಟ್ಟಿದ್ದಾರೆ. ಮೊದಲ ಚಿತ್ರದಲ್ಲೇ ಆಕ್ಷನ್ ಹೀರೋ ಪಟ್ಟ ಗಿಟ್ಟಿಸಿಕೊಂಡಿರುವ ಅನೂಪ್ ಮನಸಿನ ಅರಗಿಣಿಯಾಗಿಲ್ಲಿರೋದು ಮೇಘನಾ ರಾಜ್. ಚಿತ್ರಕ್ಕೆ ಆರ್.ಚಂದ್ರು ನಿರ್ದೇಶನವಿದೆ. ಖಾಕಿಧಾರಿಯಾಗಿ ಕ್ರೇಜಿಸ್ಟಾರ್ ಇಲ್ಲಿ ಖಡಕ್ ಅವತಾರದಲ್ಲಿ ಕಾಣಸಿಗಲಿದ್ದಾರೆ. ಇವ್ರದ್ದಿಲ್ಲಿ ಅನೂಪ್ ತಂದೆಯ ಪಾತ್ರ. ಅದೇನೆ ಇದ್ರೂ ಈ ವಾರ ಅಖಾಡಕ್ಕಿಳಿದು ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿರುವ ಜಿಗರ್ ಥಂಡಾ ಮತ್ತು ಲಕ್ಷ್ಮಣದಲ್ಲಿ ಪ್ರೇಕ್ಷಕರ ಜಿಗರ್ ಯಾವ ಚಿತ್ರಕ್ಕೆ ಬಡಿಯುತ್ತೆ.. ಲಕ್ ಯಾರ ಕೈ ಹಿಡಿಯುತ್ತೆ ಅನ್ನೋದು ಈ ವೀಕೆಂಡ್ ಹೊತ್ತಿಗೆ ಸ್ಪಷ್ಟವಾಗಲಿದೆ.
ಒಟ್ಟಾರೆ ಗಾಂಧಿನಗರದ ಚಿತ್ರಸಂತೆಯಲ್ಲಿ ಈ ವಾರ ಎರಡು ಚಿತ್ರಗಳು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ತಿವೆ. ಮಾಸ್ ಆಡಿಯನ್ಸ್ ಮನಸು ಕದಿಯೋಕೆ ಬರ‍್ತಿರುವ ಇವೆರಡು ಸಿನಿಮಾಗಳು ಈ ವರ್ಷದ ನಿರೀಕ್ಷೆಯ ಚಿತ್ರಗಳು ಕೂಡಾ ಹೌದು.. ಅದೃಷ್ಟದ ಆಟಕ್ಕೆ ಮುಂದಾಗಿರುವ ಇವೆರಡು ಚಿತ್ರಗಳಿಗೂ ಆಲ್ ದಿ ಬೆಸ್ಟ್.
- ಶ್ರೀ
POPULAR STORIES :
ಮನೆ ಖರೀದಿಗೆ ಲೋನ್ ಬೇಕೇ????ಎಚ್ಚರ!!!!
ಅಪಘಾತ ಆಗಿದ್ದು 2009ರಲ್ಲಿ, 50,18,979 ರೂಪಾಯಿ ಸಿಕ್ಕಿದ್ದು 2016ರಲ್ಲಿ!
ಹುಡುಗಿಯರಿಗೂ ಅಂಟಿತೇ ರ‍್ಯಾಗಿಂಗ್ ರೋಗ..?? ಹೆಣ್ಣಿಗೆ ಹೆಣ್ಣೇ ಶತ್ರುವಾದಳೇ.?
ಕಬಾಲಿಗೆ ಕನ್ನಡದಲ್ಲಿ ಟಾಂಗ್ ಕೊಡುವ ಸಿನಿಮಾ ಯಾವುದು.?
ಕಾರ್ಮಿಕ ನಿದ್ರೆ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಹೊಡೆದ ಅವಿವೇಕಿ ಅಧಿಕಾರಿ..!
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಅಡುಗೆ ಮನೆಯಲ್ಲಿ ಅಡಗಿಸಿಟ್ಟ ಔಷಧಿಗಳು..!!
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಎನ್ನುವ ವಿವರ ಇಲ್ಲಿದೆ
ನಿಮಗೂ ಸೆಲ್ಫೀ ಕ್ರೇಝ್ ಇದ್ಯಾ…? ಹಾಗಿದ್ರೆ ಎಚ್ಚರ
ಮಾತಿಲ್ಲದೆ ಮಾತನಾಡೋ ಪುಷ್ಪಕ ವಿಮಾನ..!