ಭಾರತೀಯ ಮಾರುಕಟ್ಟೆಯಲ್ಲಿ ಆಗಸ್ಟ್ ತಿಂಗಳ ಮೊದಲ ವಾರವಿಡೀ ಚಿನ್ನದ ವಹಿವಾಟು ನಿರಂತರ ಕುಸಿತ ಕಂಡಿದ್ದು, ಆಗಸ್ಟ್ 7ರ ಶನಿವಾರ ಕೂಡ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಹಬ್ಬದ ಸಮಯ ಹತ್ತಿರ ಬರುತ್ತಿದ್ದು, ಚಿನ್ನ ಖರೀದಿಸಲು ಗ್ರಾಹಕರಿಗೆ ಇದು ಉತ್ತಮ ಅವಕಾಶವೂ ಆಗಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಶನಿವಾರ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಬೆಳ್ಳಿ ಬೆಲೆ ಕೂಡ ಸತತ ಇಳಿಕೆಯಾಗಿದೆ.
ಶನಿವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 07ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 750 ರೂ ಇಳಿಕೆಯಾಗಿ 46,000 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 820 ರೂ ಇಳಿಕೆಯಾಗಿ 50,180 ರೂ ಆಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 07: 43,850 ರೂ (750 ರೂ ಇಳಿಕೆ) 47,840 ರೂ (820 ರೂ ಇಳಿಕೆ)
ಆಗಸ್ಟ್ 06: 44,600 ರೂ (200 ರೂ ಇಳಿಕೆ) 48,660 ರೂ (220 ರೂ ಇಳಿಕೆ)
ಆಗಸ್ಟ್ 05: 44,800 ರೂ (100 ರೂ ಇಳಿಕೆ) 48,880 ರೂ (100 ರೂ ಇಳಿಕೆ)
ಆಗಸ್ಟ್ 04: 44,900 ರೂ (-) 48,980 ರೂ (-)
ಆಗಸ್ಟ್ 03: 44,900 ರೂ (90 ರೂ ಇಳಿಕೆ) 48,980 ರೂ (110 ರೂ ಇಳಿಕೆ)
ಆಗಸ್ಟ್ 02: 44,990 ರೂ (-) 49,090 ರೂ (-)
ಬೆಳ್ಳಿ: 1 ಕೆ.ಜಿಗೆ 65,000 ರೂಪಾಯಿ (1600 ರೂ ಇಳಿಕೆ