120 ದಿನಗಳ ಕಾಲ ನಡೆದ ಬಿಗ್ ಬಾಸ್ ಕನ್ನಡ ಎಂಟನೇ ಸೀಸನ್‌ಗೆ ಭಾನುವಾರ ತೆರೆಬಿದ್ದಿದೆ. ಭಾನುವಾರ ನಡೆದ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಮಂಜು ಪಾವಗಡ ವಿಜೇತರಾಗಿ ಹೊರ ಹೊಮ್ಮುವುದರ ಮೂಲಕ ತಮ್ಮ ಪ್ರತಿಸ್ಪರ್ಧಿ ಅರವಿಂದ್ ಕೆ ಪಿ ಗೆ ಸೋಲುಣಿಸಿದ್ದಾರೆ.
ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಂಜು ಪಾವಗಡ ಮತ್ತು ಅರವಿಂದ್ ಕೆ ಪಿ ಇಬ್ಬರು ಸಹ ಪ್ರಮುಖ ಸ್ಪರ್ಧಿಗಳಾಗಿದ್ದರು. ಗ್ರ್ಯಾಂಡ್ ಫಿನಾಲೆ ಕೊನೆಯ ಹಂತಕ್ಕೆ ತಲುಪಿದ್ದ ಈ ಇಬ್ಬರ ನಡುವೆ ದೊಡ್ಡ ಮಟ್ಟದ ಪೈಪೋಟಿ ನಡೆದಿದೆ. ಇಬ್ಬರಿಗೂ ಲಕ್ಷಾಂತರ ಜನ ಮತ ಗಳನ್ನು ಹಾಕಿದ್ದು ಕೊನೆಯಲ್ಲಿ ಮಂಜು ಪಾವಗಡ ಅರವಿಂದ್ ಕೆ ಪಿ ಗಿಂತ 2 ಲಕ್ಷ ಮತಗಳ ಮುನ್ನಡೆಯನ್ನು ಸಾಧಿಸುವುದರ ಮೂಲಕ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡಿದ್ದಾರೆ.
ಅರವಿಂದ್ ಕೆ ಪಿ ಒಟ್ಟು 43 ಲಕ್ಷ ಮತಗಳನ್ನು ಪಡೆದುಕೊಂಡರೆ, ಮಂಜು ಪಾವಗಡ 45 ಲಕ್ಷ ಮತಗಳನ್ನು ಪಡೆದುಕೊಂಡು ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಸದ್ಯ ಇಬ್ಬರೂ ಪಡೆದುಕೊಂಡಿರುವ ಈ ಮತಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದ್ದು ಮಂಜು ಪಾವಗಡ ಅರವಿಂದ್ ಕೆ ಪಿ ಗಿಂತ 2ಲಕ್ಷ ಹೆಚ್ಚಿನ ಮತಗಳನ್ನು ಪಡೆದುಕೊಳ್ಳಲು ಕಾರಣ ಶಿವರಾಜ್ ಕುಮಾರ್ ಎನ್ನುತ್ತಿದ್ದಾರೆ.
ಹೌದು ಬಿಗ್ ಬಾಸ್ ಕೊನೆಯ ವಾರದಲ್ಲಿ ಮಂಜು ಪಾವಗಡ ಬಿಗ್ ಬಾಸ್ ಮನೆಯಿಂದ ಶಿವಣ್ಣ ಅವರಿಗೆ ಬೇಡಿಕೆಯೊಂದನ್ನು ಇಟ್ಟಿದ್ದರು. ನಾನು ಶಿವಣ್ಣ ಅವರ ಅಪ್ಪಟ ಅಭಿಮಾನಿ ದಯವಿಟ್ಟು ಶಿವರಾಜ್ ಕುಮಾರ್ ಅವರಿಂದ ನನಗೆ ಆಲ್ ದ ಬೆಸ್ಟ್ ಹೇಳಿಸಿ ಎಂದು ಮನವಿ ಮಾಡಿಕೊಂಡಿದ್ದರು. ಮಂಜು ಪಾವಗಡ ಮನವಿಗೆ ಸ್ಪಂದಿಸಿದ ಶಿವಣ್ಣ ಬಿಗ್ ಬಾಸ್ ಗೆದ್ದು ಬಾ ಮಂಜು ಎದ್ದು ಆಲ್ ದಿ ಬೆಸ್ಟ್ ಹೇಳಿ ವಿಡಿಯೋವೊಂದನ್ನು ಮಂಜು ಪಾವಗಡಕ್ಕೆ ಕಳುಹಿಸಿಕೊಟ್ಟಿದ್ದರು. ಹೀಗೆ ಶಿವಣ್ಣ ಮಂಜು ಪಾವಗಡಗೆ ಸಪೋರ್ಟ್ ಮಾಡಿದ ಕಾರಣದಿಂದಲೇ ಅವರ ಅಭಿಮಾನಿಗಳು ಕೂಡ ಶಿವಣ್ಣನ ಅಭಿಮಾನಿ ಗೆಲ್ಲಬೇಕು ಎಂದು ಮತಗಳನ್ನು ಹಾಕಿದ್ದರಿಂದಲೇ ಮಂಜು ಬಿಗ್ ಬಾಸ್ ಕಾರ್ಯಕ್ರಮವನ್ನು ಗೆದ್ದರು ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ..