ಇತಿಹಾಸ ಮರುಕಳುಹಿಸಿದೆ..! ಭಾರತ ಕ್ರಿಕೆಟ್‍ನಲ್ಲಿ ಮತ್ತೆ ಹಳೆ ಹುಲಿಗಳ ಘರ್ಜನೆ ಶುರುವಾಗಿದೆ..! ಅದರಲ್ಲೂ ಕನ್ನಡಿಗರು ಗುರುವಾಗಿ ಭಾರತ ತಂಡವನ್ನು ಕಟ್ಟಲು ಮುಂದಾಗಿದ್ದಾರೆ..! ಈಗಾಗಲೇ ಒಬ್ಬ ಗುರು, ಗುರು ಎಂದರೆ ಯಾರೆಂದು ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ..! ಇನ್ನು ನೂತನ ಗುರು ತನ್ನ ಸಾಮಥ್ರ್ಯ ಸಾಭೀತು ಪಡಿಸಲು ಮುಂಬರವ ಸರಣಿಯನ್ನು ಎದುರು ನೋಡ್ತಾ ಇದ್ದಾರೆ.!
ಹೌದು, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿ.ವಿ ಎಸ್ ಲಕ್ಷ್ಮಣ್ ಮತ್ತು ಅನಿಲ್ ಕುಂಬ್ಳೆ ಸಮಾಕಾಲಿನ ಕ್ರಿಕೆಟಿಗರು. ಬಹುಕಾಲ ಒಟ್ಟಿಗೇ ಭಾರತ ಕ್ರಿಕೆಟ್‍ಗೆ ಜೊತೆ ಜೊತೆಯಲ್ಲಿ ಕೊಡುಗೆ ನೀಡಿದವರು. ಈಗ ಭಾರತೀಯ ಕ್ರಿಕೆಟ್‍ಗೆ ಹೊಸ ಭಾಷ್ಯ ಬರೆಯಲು ಹೊರಟಿರುವ ಕ್ರಿಕೆಟ್ ದಿಗ್ಗಜರು. ಒಂದೇ ತಂಡದಲ್ಲಿ ಆಡಿದ ಈ “ಪಂಚ ಪಾಂಡವರು’ ಭಾರತ ಕ್ರಿಕೆಟ್‍ಗೆ ಹೊಸ ಶಕ್ತಿಯಾಗಿದ್ದಾರೆ. ಬಿಸಿಸಿಐನ ಪ್ರಮುಖ ಹುದ್ದೆಗಳಲ್ಲಿ ವಿರಾಜಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ನಿನ್ನೆಯಷ್ಟೇ ಕನ್ನಡಿಗ ಅನಿಕುಂಬ್ಳೆ ಭಾರತ ಕ್ರಿಕೆಟ್‍ನ ಹಿರಿಯರ ತಂಡದ ಗುರುವಾಗಿ ಆಯ್ಕೆಯಾಗಿದ್ದು ಭಾರತ ಕ್ರಿಕೆಟ್ ಇನ್ನೂ ಉತ್ತುಂಗಕ್ಕೇರುವ ಭರವಸೆ ಮೂಡಿಸಿದೆ.
ರಾಹುಲ್ ದ್ರಾವಿಡ್ 19ರ ವಯೋಮಿತಿಯ ಕಿರಿಯರ ತಂಡದ ಕೋಚ್ ಆಗಿಯೇ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ್ದರಿಂದ ಭಾರತ ಹಿರಿಯರ ತಂಡದ ಕೋಚ್ ಹುದ್ದೆಗೆ ಸಣ್ಣ ಪೈಪೋಟಿ ಶುರುವಾಗಿತ್ತು..! ಒಂದು ವೇಳೆ ರಾಹುಲ್ ಮುಂದೆ ಬಂದಿದ್ದರೆ ಪೈಪೋಟಿಯೇ ಇರುತ್ತಿರಲಿಲ್ಲವೇನೋ? ಇಂದು ಕೋಚ್ ಆಗಿರುವ ಅನಿಲ್ ಕುಂಬ್ಳೆ ಕೂಡ ತನ್ನ ನೆಚ್ಚಿನ ಗೆಳಯ ಜಾಮಿ ಅಲಿಯಾಸ್ ರಾಹುಲ್ ಭಾರತ ತಂಡದ ಕೋಚ್ ಆಗಬೇಕೆಂದು ಆಸೆಪಟ್ಟಿದ್ದರು..!
ಅದೇನೇ ಇರಲಿ, ಖುಷಿಯ ವಿಚಾರ ಅಂದ್ರೆ ಕನ್ನಡಿಗರೇ ಗುರುವಿನ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದುದು ಕೊನೆಗೂ ಕನ್ನಡಿಗರೇ ಕೋಚ್ ಆಗಿರುವುದು ಹೆಮ್ಮೆಯ ವಿಚಾರ. ಸಮಕಾಲಿನ ಕ್ರಿಕೆಟರ್‍ಗಳಾದ ಸಚಿನ್, ಸೌರವ್, ಲಕ್ಷ್ಮಣ್ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿ ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ಅವರನ್ನು ಸಂದರ್ಶಿಸಿತ್ತು..! ಜೊತೆಯಾಗಿ ಆಡಿದ ಆಟಗಾರನ, ಗೆಳೆಯನ ಸಂದರ್ಶನ ಮಾಡಿದ್ದಲ್ಲದೇ ಇವರೇ ತಂಡದ ಟೀಚರ್ ಆಗಲು ಯೋಗ್ಯ ಎಂದು ಡಿಸೈಡ್ ಮಾಡಿಬಿಟ್ಟರು ಸಚಿನ್, ಸೌರವ್, ವಿವಿಎಸ್..!
ನೋಡಿ ಈಗ ಮೂವರು ಸಲಹಾ ಸಮಿತಿಯಲ್ಲಿದ್ದರೆ, ರಾಹುಲ್ ದ್ರಾವಿಡ್ ಜೂನಿಯರ್ ತಂಡದ ಕೋಚ್..! ಅನಿಲ್ ಕುಂಬ್ಳೆ ಸೀನಿಯರ್‍ಗೆ ಗುರು..! ಮತ್ತೆ ಭಾರತ ಕ್ರಿಕೆಟ್‍ಗೆ ದಾರಿ ತೋರುವವರಾಗಿರುವದು ಖುಷಿ.
ಕನ್ನಡಿಗರು ಇನ್ನೂ ಹೆಮ್ಮೆ ಪಡಬೇಕು, ಕನ್ನಡದ ಕ್ರಿಕೆಟ್ ಅಭಿಮಾನಿಗಳು ಹಬ್ಬದೂಟ ಮಾಡಬೇಕು. ಮತ್ತೆ ಭಾರತ ಕ್ರಿಕೆಟ್‍ನಲ್ಲಿ ಶುರುವಾಗಿದೆ ಕನ್ನಡಿಗರ ಯುಗ..! ಮೊದಲೇ ಹೇಳಿದಂತೆ ಅನಿಲ್ ಕುಂಬ್ಳೆ ಸೀನಿಯರ್‍ಗೆ ಟೀಚರ್ ಆಗಿ ಪಾಠ ಮಾಡಲಿದ್ದಾರೆ..! ಈಗಾಗಲೇ ಇನ್ನೊಬ್ಬ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ 19ರ ವಯೋಮಿತಿ ತಂಡ, ಭಾರತ ಎ ತಂಡದ ಗುರುವಾಗಿ ಯುವ ಆಟಗಾರರನ್ನು ಸಮರ್ಥವಾಗಿ ರೂಪಿಸುತ್ತಿದ್ದಾರೆ..! ತನ್ನಲ್ಲಿರುವ ಅಪಾರ ಅನುಭವವನ್ನು ಯುವ ಕ್ರಿಕೆಟಿಗರಿಗಾಗಿ ಅರ್ಪಿಸುತ್ತಿರುವ ದ್ರಾವಿಡ್ ಮಾರ್ಗದರ್ಶನದ ತಂಡ ಯಶಸ್ವಿಯಾಗಿದೆ..! ಇನ್ನೊಂದು ವಿಷಯ ಅಂದ್ರೆ ನಮ್ಮ ಕನ್ನಡಿಗ ವೆಂಕಟೇಶ್ ಪ್ರಸಾದ್ ಕಿರಿಯರ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ..! ಇದಲ್ಲಕ್ಕಿಂತ ಹೆಚ್ಚಾಗಿ ಕೆ.ಎಲ್ ರಾಹುಲ್ , ಮನಿಷ್ ಪಾಂಡೆ ಅಂತಹ ಯುವ ಕನ್ನಡಿಗರು ಭಾರತ ತಂಡದಲ್ಲಿ ಭಧ್ರವಾಗಿ ನೆಲೆಯೂರು ಸೂಚನೆ ರವಾನಿಸ್ತಾ ಇದ್ದಾರೆ..!ವಾರೇ ವ್ಹಾವ್.. ಇದಪ್ಪ ಕನ್ನಡಿಗರ ಅರ್ಹತೆ, ತಾಕತ್ತಂದ್ರೆ.
ಎನಿವೇ, ಕನ್ನಡದ ಕ್ರಿಕೆಟಿಗರು ಒಳ್ಳೊಳ್ಳೆ ಸ್ಥಾನದಲ್ಲಿದ್ದಾರೆ. ಇವರಿಂದ ಕನ್ನಡದ ಯುವ ಆಟಗಾರರಿಗೆ ಅವಕಾಶ ಹೆಚ್ಚು ಹೆಚ್ಚಾಗಿ ದೊರೆಯಲಿ.. ಹಿಂದೊಮ್ಮೆ ಒಂದೇ ತಂಡದಲ್ಲಿ ಆರೇಳು ಜನ ಕನ್ನಡಿಗರು ಇದ್ದರು..! ಆ ಇತಿಹಾಸ ಮತ್ತೆ ಮರುಕಳಿಸಿಲಿ ಎಂಬ ನಿರೀಕ್ಷೆ ಯೊಂದಿಗೆ..
- ರಘು ಭಟ್
POPULAR STORIES :
ಭಾರತೀಯ ಕ್ರಿಕೆಟ್ ದಿಗ್ಗಜರ ಎಜುಕೇಷನಲ್ ಕ್ವಾಲಿಫಿಕೇಷನ್‍ನ ಡೀಟೇಲ್ಸ್..!
ಮನೆ ಖರೀದಿಗೆ ಲೋನ್ ಬೇಕೇ????ಎಚ್ಚರ!!!!
ಅಪಘಾತ ಆಗಿದ್ದು 2009ರಲ್ಲಿ, 50,18,979 ರೂಪಾಯಿ ಸಿಕ್ಕಿದ್ದು 2016ರಲ್ಲಿ!
ಹುಡುಗಿಯರಿಗೂ ಅಂಟಿತೇ ರ‍್ಯಾಗಿಂಗ್ ರೋಗ..?? ಹೆಣ್ಣಿಗೆ ಹೆಣ್ಣೇ ಶತ್ರುವಾದಳೇ.?
ಕಬಾಲಿಗೆ ಕನ್ನಡದಲ್ಲಿ ಟಾಂಗ್ ಕೊಡುವ ಸಿನಿಮಾ ಯಾವುದು.?
ಕಾರ್ಮಿಕ ನಿದ್ರೆ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಹೊಡೆದ ಅವಿವೇಕಿ ಅಧಿಕಾರಿ..!
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!