ವಾಟ್ಸ್ ಆ್ಯಪ್ ಇಂದು ಪ್ರತಿಯೊಬ್ಬನ ಜೀವನದಲ್ಲಿ ಬೆರೆತು ಹೋಗಿದೆ,ಅಲ್ವೇನು? ಹಾಗಿದ್ರೆ ನಿಮಗೆಲ್ಲಾ ಒಂದು ಸಣ್ಣ ಕೆಟ್ಟ ಸುದ್ದಿ ಹೇಳ್ತೀವಿ ನೋಡಿ. ನಿಮ್ಮೆಲ್ಲರ ಅಚ್ಚುಮೆಚ್ಚಿನ ಈ ವಾಟ್ಸ್ ಆ್ಯಪ್‍ನ್ನು ಅತೀ ಶೀಘ್ರದಲ್ಲಿ ನಿಷೇಧಿಸುತ್ತಿದ್ದಾರಂತೆ!
ಹೌದು! ಇದು ನಿಜ! ಸುಪ್ರೀಂಕೋರ್ಟ್ ಇದರ ಸಂಬಂಧವಾಗಿ ಇದೇ ಬುಧವಾರ ಜೂನ್ 29 ರಂದು ಪ್ರಕರಣದ ವಿಚಾರಣೆಗೆ ಕರೆ ನೀಡಿದೆ.
ಹರ್ಯಾಣ ಮೂಲದ ಆರ್.ಟಿ.ಐ ಕಾರ್ಯಕರ್ತ ಸುಧೀರ್ ಯಾದವ್ ಈ ಪ್ರಕರಣವನ್ನು ದಾಖಲಿಸಿದವರು.
ಇವರು ಹೇಳೋ ಪ್ರಕಾರ ಈ ತರದ ಸಂದೇಶ ರವಾನೆಯಾಗುವ ಆಪ್ಲಿಕೇಷನ್ಸ್ ನಿಂದ ಭಯೋತ್ಪಾದನಾ ಚಟುವಟಿಕೆಗಳು ನಡೆಯಲು ದಾರಿ ಮಾಡಿಕೊಟ್ಟಂತಾಗುತ್ತಿದೆ, ಅದಲ್ಲದೆ ಇವುಗಳಿಂದ ರವಾನೆಯಾಗುವ ಸಂದೇಶದಲ್ಲಿ ಗುಪ್ತ ವಾದ ಕೋಡೆಡ್ ಸಂದೇಶವನ್ನು ರವಾನಿಸಲು ಹೆಚ್ಚಿನ ಸಾಧ್ಯತೆಗಳಿರುತ್ತವೆ,ಮತ್ತು ಈ ಕೋಡೆಡ್ ಸಂದೇಶಗಳನ್ನು ತಡೆಯುವುದು ನಿಜಕ್ಕೂ ಅಸಾಧ್ಯ. ಭಯೋತ್ಪಾದನೆಯ ಈ ಸುಳಿವನ್ನು ಇಂಟೆಲಿಜೆನ್ಸ್ ನಿಂದ ಪತ್ತೆ ಹಚ್ಚಲಾಗಿದೆ
ಸೂಪರ್ ಕಂಪ್ಯೂಟರ್ ನಿಂದಲೂ ಇದರ ಅರ್ಥವನ್ನು ಭೇದಿಸುವುದಾಗಲೀ ಅಥವಾ ತಡೆಗಟ್ಟುವುದಾಗಲೀ ಮಾಡುವುದು ಅಸಾಧ್ಯ. ಸಣ್ಣ 256-bit ಕೋಡೆಡ್ ಸಂದೇಶವನ್ನು ಭೇದಿಸಲು ಇನ್ನೂ ಸುಮಾರು ವರ್ಷಗಳೇ ತಗಲಬಹುದು ಎನ್ನಲಾಗುತ್ತದೆ.
ವಾಟ್ಸ್ ಆ್ಯಪ್, ವೈಬರ್, ಟೆಲಿಗ್ರಾಂ, ಹೈಕ್ ಮತ್ತು ಸಿಗ್ನಲ್ ಗಳು ದೇಶದ ಭದ್ರತೆಗೆ ಅಪಾಯವೊಡ್ಡುವುದು ಮತ್ತು ಸಂಪೂರ್ಣವಾಗಿ ಇದು ನಿಷೇಧಿಸಲ್ಪಡಲೇಬೇಕು ಎಂದು ದೂರಿನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.
ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ತಂಡವು ಜೂನ್ 29 ರಂದು ಹೆಚ್ಚಿನ ವಿಚಾರಣೆ ನಡೆಸುವುದು.
POPULAR STORIES :
ಶುರುವಾಯ್ತು ಮತ್ತೆ ಕನ್ನಡಿಗರ ಪರ್ವ..! ಭಾರತ ಕ್ರಿಕೆಟ್‍ನಲ್ಲಿ ಮತ್ತೆ ಹಳೆ ಹುಲಿಗಳು ಘರ್ಜಿಸುತ್ತಿವೆ..!
ಭಾರತೀಯ ಕ್ರಿಕೆಟ್ ದಿಗ್ಗಜರ ಎಜುಕೇಷನಲ್ ಕ್ವಾಲಿಫಿಕೇಷನ್‍ನ ಡೀಟೇಲ್ಸ್..!
ಮನೆ ಖರೀದಿಗೆ ಲೋನ್ ಬೇಕೇ????ಎಚ್ಚರ!!!!
ಅಪಘಾತ ಆಗಿದ್ದು 2009ರಲ್ಲಿ, 50,18,979 ರೂಪಾಯಿ ಸಿಕ್ಕಿದ್ದು 2016ರಲ್ಲಿ!
ಹುಡುಗಿಯರಿಗೂ ಅಂಟಿತೇ ರ‍್ಯಾಗಿಂಗ್ ರೋಗ..?? ಹೆಣ್ಣಿಗೆ ಹೆಣ್ಣೇ ಶತ್ರುವಾದಳೇ.?
ಕಬಾಲಿಗೆ ಕನ್ನಡದಲ್ಲಿ ಟಾಂಗ್ ಕೊಡುವ ಸಿನಿಮಾ ಯಾವುದು.?
ಕಾರ್ಮಿಕ ನಿದ್ರೆ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಹೊಡೆದ ಅವಿವೇಕಿ ಅಧಿಕಾರಿ..!
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!