ಸರ್ಕಾರಿ ಸ್ವಾಮ್ಯದ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಂಸ್ಥೆ(ಮೆಸ್ಕಾಂ) 2021ನೇ ಸಾಲಿನ ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದೆ. ಎಲ್ಲಾ ಅರ್ಜಿಗಳನ್ನು ಮೆಸ್ಕಾಂನ ಅಧಿಕೃತ ವೆಬ್ ತಾಣದ ಮೂಲಕ ಆನ್ ಲೈನ್ ಮೂಲಕವೇ ಸಲ್ಲಿಸಬೇಕಾಗಿ ಕೋರಲಾಗಿದೆ.
ಪದವಿ ಹಾಗೂ ಡಿಪ್ಲೋಮಾ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದಾಗಿದ್ದು ವಿವರಗಳು ಮುಂದಿವೆ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಸೆಪ್ಟೆಂಬರ್ 09, 2021.
ಹುದ್ದೆಗಳ ವಿವರ:
ಸಂಸ್ಥೆ ಹೆಸರು: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಂಸ್ಥೆ(ಮೆಸ್ಕಾಂ)
ಹುದ್ದೆ ಹೆಸರು: ಅಪ್ರೆಂಟಿಸ್
ಒಟ್ಟು ಖಾಲಿ ಇರುವ ಹುದ್ದೆಗಳು: 200
ತರಬೇತಿ ಅವಧಿ: ಒಂದು ವರ್ಷ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 09, 2021.
ಹುದ್ದೆಗಳ ಹೆಸರು:
ಪದವಿ ಅಪ್ರೆಂಟಿಸ್:
ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್: 125
ಸ್ಟೈಪೆಂಡ್: 7,000 ರು
ಡಿಪ್ಲೋಮಾ ಅಪ್ರೆಂಟಿಸ್:
ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್: 75
ಸ್ಟೈಪೆಂಡ್: 5,000 ರು
ವಯೋಮಿತಿ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷ.
* ಪ್ರವರ್ಗ 2ಎ, 2ಬಿ, 3ಎ ಹಾಗೂ 3ಬಿ ಅರ್ಭ್ಯರ್ಥಿಗಳಿಗೆ 18 ರಿಂದ 38 ವರ್ಷ ವಯೋಮಿತಿ.
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ ವಯೋಮಿತಿ.
ವಿದ್ಯಾರ್ಹತೆ: ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಷಯಗಳಲ್ಲಿ ಮಾನ್ಯತೆ ಪಡೆದ ಯಾವುದಾದರೂ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ/ಪದವಿ ಪಡೆದಿರಬೇಕು.
ಪ್ರಮುಖ ದಿನಾಂಕ:
ಆನ್‌ಲೈನ್‌ನಲ್ಲಿ ಅರ್ಜಿ ಸಲಿಸಲು ಆರಂಭ ದಿನಾಂಕ: 19/08/2021.
ಆನ್‌ಲೈನ್‌ನಲ್ಲಿNATS ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 05/09/2021
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 09/09/2021
ಶಾರ್ಟ್ ಲಿಸ್ಟ್ ಆದವರ ಪಟ್ಟಿ: 14/09/2021.