ಬೆಂಗಳೂರಿನ ಆಟೊ ಡ್ರೈವರ್ಸ್ ವಿಭಿನ್ನವಾದ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸೂಮಾರು 400ಕ್ಕು ಹೆಚ್ಚುಆಟೋ ಡ್ರೈವರ್ಸ್ ಸೇರಿ ಸಿನ್ಮಾ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿದ್ದು 60 ಪರ್ಸೆಂಟ್ ಅಷ್ಟು ಶೂಟಿಂಗ್ ಮಾಡಿ ಮುಗಿಸಿದೆ ಚಿತ್ರತಂಡ.
ಸಾಮಾನ್ಯವಾಗಿ ಶ್ರುಕ್ರವಾರ ಬಂತೆಂದರೆ ಸಾಕು ಚಿತ್ರಮಂದಿರದಮುಂದೆ ಸಾಲು ಸಾಲು ಜನ ನಿಂತಿರ್ತಾರೆ. ಅದ್ರಲ್ಲಿ ಹೆಚ್ಚಾಗಿ ಆಟೋ ಡ್ರೈವರ್ಸೆ ಕಾಣ್ತಾರೆ. ಕಾದು ಕಾದು ಕ್ಯೂನಲ್ಲಿ ನಿಂತು ಟಿಕೆಟ್ ಪಡೆದು ಮುಗಿಬಿದ್ದು ಸಿನ್ಮಾ ನೋಡ್ತಿದ್ದ ಆಟೋ ಚಾಲಕರೆಲ್ಲ ಸೇರಿ ಸಿನ್ಮಾ ಮಾಡಿದ್ದಾರೆ.
ಸೂಮಾರು 400ರಕ್ಕು ಹೆಚ್ಚು ಆಟೋ ಚಾಲಕರು ಸೇರಿ ಬಂಡವಾಳ ಹಾಕಿ ಚಿತ್ರ ನಿರ್ಮಿಸಿದ್ದಾರೆ. ಆಟೋ ಚಾಲಕ ಸಂಘದ ಅಧ್ಯಕ್ಷ ಆಟೊ ನಾಗರಾಜ್ ನೇತೃತ್ವದಲ್ಲಿ ಉಳಿದೆಲ್ಲ ಚಾಲಕರು ಸಿನ್ಮಾಕ್ಕೆ ಬಂಡವಾಳ ಹಾಕಿದ್ದಾರೆ. ಚಾಲಕರು ಬೆವರಿಳಿಸಿ ದುಡಿಯುವ ಹಣದಲ್ಲಿ ಬಾನುವಾರದ ದುಡಿಮೆಯನ್ನು ಸಿನ್ಮಾಕ್ಕಾಗಿ ಇನ್ವೆಸ್ಟ್ ಮಾಡುತ್ತಿದ್ದಾರೆ.
ಅಂದಹಾಗೆ ಚಿತ್ರಕ್ಕೆ ಆರ್.ಜಿ.ವಿ ಅಂತ ಹೆಸರಿಟ್ಟಿದ್ದಾರೆ. ಹೀಗಂದ ಮಾತ್ರಕ್ಕೆ ಆರ್.ಜಿ ರಾಮ್ ಗೋಪಾಲ್ ವರ್ಮ ಕತೆ ಅಂತ ಅಂದ್ಕೊ ಬೇಡಿ ಆದ್ರೆ ಅವರ ಬಗ್ಗೆಯು ಈ ಚಿತ್ರದಲ್ಲಿ ಹೇಳಲಾಗಿದ್ಯಂತೆ. ಖ್ಯಾತ ನಿರ್ದೇಶಕ ಎಸ್,ವಿ ಬಾಬು ಮಗ ಎಸ್.ಶಾನ್ ನಿರ್ದೇಶನದ ಆರ್.ಜಿವಿ ಯಲ್ಲಿ ನಾಯಕನಟನಾಗಿ ಅರು ಗೌಡ ಅಭಿನಯಿಸಿದ್ದಾರೆ. ವಿಭಿನ್ನವಾದ ಚಿತ್ರದಲ್ಲಿ ಆಕ್ಟ್ ಮಾಡ್ತಿದ್ದೀನಿ ಅನ್ನೋದ್ರ ಜೊತೆಗೆ ಆಟೋ ಚಾಲಕರ ನಿರ್ಮಾಣದಲ್ಲಿ ಸಿನ್ಮಾ ಮಾಡ್ತಿದ್ದೀನಿ ಅನ್ನೋ ಕುಷಿಯಲ್ಲಿದ್ದಾರೆ ಅರು.
ಬರೋಬ್ಬರಿ 2ಕೋಟಿ ವ್ಯಚ್ಚದಲ್ಲಿ ಬರ್ತಿರೊ ಆರ್.ಜಿ.ವಿ ಶಂಕರ್ ನಾಗ್ ಹುಟ್ಟು ಹಬ್ಬಕ್ಕೆ ರಿಲೀಸ್ ಮಾಡೋ ಪ್ಲಾನ್ ಮಾಡಿದೆ ಚಿತ್ರತಂಡ..ಏನೆ ಇರ್ಲಿ ಆಟೋ ಚಾಲಕರ ಈ ಸಿನ್ಮಾ ಸೂಪರ್ ಹಿಟ್ ಆಗ್ಲಿ ಅನ್ನೋದೆ ನಮ್ಮ ಆಶಯ
- ಶ್ರೀ
POPULAR STORIES :
ಅರೆರೆ!ಇದೇನಿದು! ವಾಟ್ಸ್ ಆ್ಯಪ್‍ಗೆ ಇತಿಶ್ರೀ ಹಾಡೋ ಕಾಲ ಬಂತೇ????
ಶುರುವಾಯ್ತು ಮತ್ತೆ ಕನ್ನಡಿಗರ ಪರ್ವ..! ಭಾರತ ಕ್ರಿಕೆಟ್‍ನಲ್ಲಿ ಮತ್ತೆ ಹಳೆ ಹುಲಿಗಳು ಘರ್ಜಿಸುತ್ತಿವೆ..!
ಭಾರತೀಯ ಕ್ರಿಕೆಟ್ ದಿಗ್ಗಜರ ಎಜುಕೇಷನಲ್ ಕ್ವಾಲಿಫಿಕೇಷನ್‍ನ ಡೀಟೇಲ್ಸ್..!
ಮನೆ ಖರೀದಿಗೆ ಲೋನ್ ಬೇಕೇ????ಎಚ್ಚರ!!!!
ಅಪಘಾತ ಆಗಿದ್ದು 2009ರಲ್ಲಿ, 50,18,979 ರೂಪಾಯಿ ಸಿಕ್ಕಿದ್ದು 2016ರಲ್ಲಿ!
ಹುಡುಗಿಯರಿಗೂ ಅಂಟಿತೇ ರ‍್ಯಾಗಿಂಗ್ ರೋಗ..?? ಹೆಣ್ಣಿಗೆ ಹೆಣ್ಣೇ ಶತ್ರುವಾದಳೇ.?
ಕಬಾಲಿಗೆ ಕನ್ನಡದಲ್ಲಿ ಟಾಂಗ್ ಕೊಡುವ ಸಿನಿಮಾ ಯಾವುದು.?
ಕಾರ್ಮಿಕ ನಿದ್ರೆ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಹೊಡೆದ ಅವಿವೇಕಿ ಅಧಿಕಾರಿ..!
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!