ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ಯು ಕೊರೊನಾವೈರಸ್ ಸಂಕಷ್ಟದ ನಡುವೆಯೂ 2021-22ನೇ ಸಾಲಿನ ನೇಮಕಾತಿಯನ್ನು ಮುಂದುವರೆಸಿದೆ. ಈ ಕುರಿತಂತೆ ಯುಪಿಎಸ್‌ಸಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಪ್ರಿನ್ಸಿಪಾಲ್, ಉಪ ನಿರ್ದೇಶಕ ಹಾಗೂ ಸಹಾಯಕ ಹುದ್ದೆಗಳಿಗೆ ಆಯ್ಕೆಯಾಗ ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಸೆಪ್ಟೆಂಬರ್ 02, 2021ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: Union Public Service Commission (UPSC)
ಹುದ್ದೆ ಹೆಸರು: Assistant Keeper, Principal ಇನ್ನಿತರ ಹುದ್ದೆ
ಒಟ್ಟು ಹುದ್ದೆ: 155
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 02, 2021
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ.
ಐಎಂಎ ಹಾಗೂ ಅಧಿಕಾರಿಗಳ ತರಬೇತಿ ಅಕಾಡೆಮಿಯ ಹುದ್ದೆಗಳಿಗೆ ಪದವಿ ಪಡೆದಿರಬೇಕು.
ಭಾರತೀಯ ನೌಕಾಪಡೆ ಅಕಾಡೆಮಿಯ ಹುದ್ದೆಗಳಿಗೆಇಂಜಿನಿಯರಿಂಗ್ ಪದವಿ ಪಡೆದಿರಬೇಕು.
ವಾಯುಪಡೆ ಅಕಾಡೆಮಿ ಹುದ್ದೆಗಳಿಗೆ ಆಯ್ಕೆಯಾಗಬಯಸುವ ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿ ಪಡೆದಿರಬೇಕು ಹಾಗೂ 10+2ರಲ್ಲಿ ಭೌತಶಾಸ್ತ್ರ ಹಾಗೂ ಗಣಿತ ವಿಷಯ ವ್ಯಾಸಂಗ ಮಾಡಿರತಕ್ಕದ್ದು..
ವಯೋಮಿತಿ:
ಕನಿಷ್ಠ ವಯೋಮಿತಿ: 35 ವರ್ಷ
ಗರಿಷ್ಠ ವಯೋಮಿತಿ: 50 ವರ್ಷ
ಐಎಂಎ ಹಾಗೂ ಭಾರತೀಯ ನೌಕಾಪಡೆ ಅಕಾಡೆಮಿ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು 02/07/1998 ರಿಂದ 01/07/2003ರ ಅವಧಿಯಲ್ಲಿ ಜನಿಸಿದರು ಅರ್ಹತೆ ಹೊಂದಿರುತ್ತದೆ.
ವಾಯುಪಡೆ ಅಕಾಡೆಮಿ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು 02/07/1998 ರಿಂದ 01/07/2002ರ ಅವಧಿಯಲ್ಲಿ ಜನಿಸಿದರು ಅರ್ಹತೆ ಹೊಂದಿರುತ್ತದೆ.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್ ಸಿ, ಎಸ್ಟಿ, ಮಾಜಿ ಯೋಧ ಅಭ್ಯರ್ಥಿಗಳಿಗೆ 5 ವರ್ಷಗಳ ತನಕ ವಯೋಮಿತಿಯಲ್ಲಿ ವಿನಾಯಿತಿ ಇರುತ್ತದೆ.
ಅರ್ಜಿಶುಲ್ಕ:
ಸಾಮಾನ್ಯ/ಮೀಸಲಾತಿ ರಹಿತ ಅಭ್ಯರ್ಥಿಗಳಿಗೆ: 200 ರು
ಎಸ್ ಸಿ/ ಎಸ್ಟಿ/ ಮಾಜಿ ಯೋಧ/ ಮಹಿಳೆ: ಯಾವುದೇ ಶುಲ್ಕವಿಲ್ಲ.
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.
ವೇತನ ಆಯೋಗ: 7ನೇ ವೇತನ ಆಯೋಗದ ಪೇ ಮ್ಯಾಟ್ರಿಕ್ಸ್ ಅನ್ವಯ ಲೆವಲ್ 07ರಂತೆ ವೇತನ ಸಿಗಲಿದೆ.
ಪ್ರಮುಖ ದಿನಾಂಕ:
ಆನ್ ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 13/08/2021
ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 03/09/2021
ಯುಪಿಎಸ್‌ಸಿ ನೇಮಕಾತಿಗಾಗಿ ಅರ್ಜಿ ಸಲ್ಲಿಸುವುದು ಹೇಗೆ?
ಯುಪಿಎಸ್‌ಸಿ ಅಧಿಕೃತ ವೆಬ್ ತಾಣಕ್ಕೆ upsc.gov.in ಭೇಟಿ ನೀಡಿ.