ಬ್ರೆಕ್ಸಿಟ್ ಮತದಾನದ ಫಲಿತಾಂಶ ಹೊರಬಿದ್ದಿದ್ದು ಐರೋಪ್ಯ ಒಕ್ಕೂಟಗಳಿಂದ ಬ್ರಿಟನ್ ಹೊರಕ್ಕೆ ನಡೆದಿದೆ. ಗುರುವಾರ ನಡೆದ ಮತದಾನದ ಫಲಿತಾಂಶ ಹೊರಬಿದ್ದಿದ್ದು ಬ್ರಿಟನ್ ಐರೋಪ್ಯ ಒಕ್ಕೂಟಗಳೊಂದಿಗಿನ ಸಂಬಂಧ ಕಳೆದುಕೊಂಡಿದೆ. ಐರೋಪ್ಯ ಒಕ್ಕೂಟದದಿಂದ ಬ್ರಿಟನ್‌ನ ಜನತೆ ಹೊರಬರಲು ಆಪೇಕ್ಷಿಸಿದ್ದಾರೆ
ಈ ಚಾರಿತ್ರಿಕ ಜನಮತಗಣನೆಯಲ್ಲಿ ಐರೋಪ್ಯ ಒಕ್ಕೂಟದಲ್ಲೇ ಉಳಿಯುವುದರ ಪರವಾಗಿ ಮತದಾನ ಮಾಡುವಂತೆ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ದೇಶದ ನಾಗರಿಕರಲ್ಲಿ ಮನವಿ ಮಾಡಿದ್ದರು. ಆದ್ರೆ, ಮತದಾನದ ಫಲಿತಾಂಶದ ಪ್ರಕಾರ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಹೋಗಬೇಕೆಂದು ಶೇ 52 ಪ್ರತಿಶತ ವೋಟ್ ಮಾಡಿದ್ದಾರೆ. ಒಕ್ಕೂಟದಲ್ಲಿರಬೇಕು ಎಂದು ಶೇ.48 ರಷ್ಟು ಜನರು ಮತ ಚಲಾವಣೆ ಮಾಡಿದ್ದಾರೆ. ಇದರಿಂದ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬಿದ್ದಿದೆ.
43 ವರ್ಷಗಳ ನಂತರ ಬ್ರಿಟನ್ ಅಧಿಕೃತವಾಗಿ ಒಕ್ಕೂಟದಿಂದ ಹೊರಹೋಗಲಿರುವ ಪ್ರಥಮ ದೇಶವಾಗಿದೆ. ಒಕ್ಕೂಟ ಸ್ಥಾಪನೆಯಾದಾಗಿನಿಂದ ಈ ವರೆಗೂ ಯಾವುದೇ ರಾಷ್ಟ್ರ ಒಕ್ಕೂಟದಿಂದ ಹೊರನಡೆದಿರಲಿಲ್ಲ.
ಇನ್ನು ಈ ಫಲಿತಾಂಶದ ಕುರಿತಂತೆ ಪ್ರತಿಕ್ರಿಯಿಸಿರುವ ಬ್ರೆಕ್ಸಿಟ್ ಪರ ಬಣ ಇದನ್ನು ಸ್ವಾತಂತ್ರ್ಯ ದಿನ ಎಂದು ಬಣ್ಣಿಸಿದೆ. ಬ್ರೆಕ್ಸಿಟ್ ವಿರೋಧಿ ಅಭಿಯಾನ ನಡೆಸಿದ್ದ ಪ್ರಧಾನಿ ಕೆಮರಾನ್ ಪರ ಬಣ ಫಲಿತಾಂಶವನ್ನು ದೊಡ್ಡ ದುರಂತ ಎಂದು ಟೀಕಿಸಿದೆ.
ಯುರೋಪಿಯನ್ ಒಕ್ಕೂಟದಿಂದ ಹೊರಹೋಗುವ ಪರವಾಗಿ ಬ್ರಿಟನ್ ಜನತೆ ಮತ ಚಲಾಯಿಸಿದ್ದಾರೆ. ಅವರ ಬಯಕೆಯನ್ನು ಗೌರವಿಸುವುದಾಗಿ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕ್ಯಾಮರೂನ್ ಅಕ್ಟೋಬರ್ ನಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕ್ಯಾಮರೂನ್ ಭಾವುಕರಾಗಿ ಘೋಷಿಸಿದ್ದಾರೆ.
ಬ್ರೆಕ್ಸಿಟ್ ಜನಮತದಲ್ಲಿ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಸೂಚನೆ ಸಿಕ್ಕಿದ್ದರಿಂದ ಎಲ್ಲಾ ರೂಪಾಯಿ ಎದುರು ಡಾಲರ್ ಮೌಲ್ಯ ಗಗನಕ್ಕೇರಿದೆ. ಡಾಲರ್ ಬೆಲೆ 68 ರೂಪಾಯಿ ಆಗಿದೆ. ವ್ಯವಹಾರ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರ ಸುಮಾರು ನಾಲ್ಕು ಲಕ್ಷ ಕೋಟಿ ಸಂಪತ್ತು ನಷ್ಟವಾಗಿದೆ. ಮಾರುಕಟ್ಟೆಯ ಭಾರೀ ಏರಿಳಿತದ ಚಂಚಲತೆಯನ್ನು ನಿವಾರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಡಾಲರ್ ನ್ನು 67.95 ಪೈಸೆಗೆ ಮಾರಾಟ ಮಾಡಿದೆ. ಇದೇ ವೇಳೆ, ಇಂಗ್ಲೆಂಡ್ ಪೌಂಡ್ ಕಳೆದ 31 ವರ್ಷಗಳಲ್ಲಿ ಅತ್ಯಂತ ಕುಸಿತ ಕಂಡುಬಂದಿದೆ
- ಶ್ರೀ
POPULAR STORIES :
ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?
ಆಟೋ ಚಾಲಕರ ಸಾರಥ್ಯದಲ್ಲಿ …..Shankar Nag
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?
ಅರೆರೆ!ಇದೇನಿದು! ವಾಟ್ಸ್ ಆ್ಯಪ್‍ಗೆ ಇತಿಶ್ರೀ ಹಾಡೋ ಕಾಲ ಬಂತೇ????
ಶುರುವಾಯ್ತು ಮತ್ತೆ ಕನ್ನಡಿಗರ ಪರ್ವ..! ಭಾರತ ಕ್ರಿಕೆಟ್‍ನಲ್ಲಿ ಮತ್ತೆ ಹಳೆ ಹುಲಿಗಳು ಘರ್ಜಿಸುತ್ತಿವೆ..!
ಭಾರತೀಯ ಕ್ರಿಕೆಟ್ ದಿಗ್ಗಜರ ಎಜುಕೇಷನಲ್ ಕ್ವಾಲಿಫಿಕೇಷನ್‍ನ ಡೀಟೇಲ್ಸ್..!
ಮನೆ ಖರೀದಿಗೆ ಲೋನ್ ಬೇಕೇ????ಎಚ್ಚರ!!!!
ಅಪಘಾತ ಆಗಿದ್ದು 2009ರಲ್ಲಿ, 50,18,979 ರೂಪಾಯಿ ಸಿಕ್ಕಿದ್ದು 2016ರಲ್ಲಿ!