ಶಿವಮೊಗ್ಗ ಮೂಲದ ಪಾದ್ರಿಯೊಬ್ಬರು ತಾಲಿಬಾನ್ ಉಗ್ರ ಸಂಘಟನೆ ವಶದಲ್ಲಿರುವ ಅಫ್ಘಾನಿಸ್ಥಾನದಲ್ಲಿ ಸಿಕ್ಕಿಬಿದ್ದಿದ್ದಾರೆ. ರಕ್ಷಣೆಯ ನಿರೀಕ್ಷೆಯಲ್ಲಿಯಲ್ಲಿ ಅವರು ಇದ್ದು, ಕುಟುಂಬದವರು, ಕ್ರೈಸ್ತ ಸಮುದಾಯ ಈಗ ಆತಂಕದಲ್ಲಿದೆ.

ತೀರ್ಥಹಳ್ಳಿ ತಾಲೂಕಿನ ದೊಡ್ಡಮನೆ ಕೇರಿ ವಾಸಿಯಾಗಿರುವ ಫಾದರ್ ರಾಬರ್ಟ್ ಅಫ್ಘಾನಿಸ್ಥಾನದಲ್ಲಿದ್ದಾರೆ. ಧರ್ಮ ಪ್ರಚಾರದ ಉದ್ದೇಶದಿಂದ ಅವರು ಅಫ್ಘಾನಿಸ್ಥಾನದ ಬಾಮಿಯಾನ್ ಎಂಬಲ್ಲಿ ಚರ್ಚ್‌ನಲ್ಲಿದ್ದು, ಸೇವೆ ಸಲ್ಲಿಸುತ್ತಿದ್ದರು. ಈಗ ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶದಲ್ಲಿದೆ. ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ ತವರು ಕ್ಷೇತ್ರದ ಫಾದರ್ ರಾಬರ್ಟ್ ಬಾಮಿಯಾನ್ ಪ್ರಾಂತ್ಯದಲ್ಲೇ ಸಿಕ್ಕಿಬಿದ್ದಿದ್ದಾರೆ. ವಿಶ್ವಸಂಸ್ಥೆಯ ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆ.

ಫಾದರ್ ರಾಬರ್ಟ್ ಸುರಕ್ಷತೆ ಕುರಿತು ಮಂಗಳೂರು ಮೂಲದ ಫಾದರ್ ಜೆರೋಮ್ ಸಿಕ್ವೇರಾ ಭಾರತದಲ್ಲಿರುವ ತಮ್ಮ ಸಹವರ್ತಿಗಳಿಗೆ ಈ-ಮೇಲ್ ಮಾಡಿದ್ದಾರೆ. ಫಾದರ್ ಜೆರೋಮ್ ಸಿಕ್ವೇರಾ ಅಫ್ಘಾನಿಸ್ಥಾನದ ಕಾಬುಲ್‌ನಲ್ಲಿ ಧರ್ಮ ಸೇವೆಯಲ್ಲಿದ್ದಾರೆ. ತಮ್ಮ ಈ ಮೇಲ್‌ನಲ್ಲಿ ತೀರ್ಥಹಳ್ಳಿ ಮೂಲದ ಫಾದರ್ ರಾಬರ್ಟ್ ಕುರಿತು ಪ್ರಸ್ತಾಪಿಸಿದ್ದಾರೆ.