ಪೊಲೀಸರು ಜನಸ್ನೇಹಿಯಾಗಿರಬೇಕು ಅನ್ನುವುದು ಎಲ್ಲರ ವಾದ. ಜನ ಕಷ್ಟ ಅಂತಾ ಬಂದಾಗ ಸ್ಪಂದಿಸಬೇಕು, ಸಮಸ್ಯೆಗಳನ್ನು ತಾಳ್ಮೆಯಿಂದ ಕೇಳಬೇಕು, ಭಾಷೆಯೂ ಹಿತ-ಮಿತವಾಗಿರಬೇಕು. ಇದು ಜನಸ್ನೇಹಿ ಪೊಲೀಸರ ಲಕ್ಷಣ ಅನ್ನುವುದು ಜನರ ಮಾತು.

ಮಂಗಳೂರು ನಗರ ಪೊಲೀಸರನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಜನರ ಮಾತೃ ಭಾಷೆಯನ್ನು, ಭಾಷೆ ಗೊತ್ತಿರದ ಪೊಲೀಸರಿಗೆ ಕಲಿಸುವ ಮೂಲಕ ಪೊಲೀಸರನ್ನು ಜನಸ್ನೇಹಿಯನ್ನಾಗಿಸಲು ಪ್ರಯತ್ನಿಸಿದ್ದಾರೆ.

ಪೊಲೀಸರು ಸದಾ ಜನರ ಜೊತೆ ಬೆರೆಯಬೇಕಾಗಿರುವುದರಿಂದ, ಜನರ ಬಳಸುವ ಭಾಷೆ ಪೊಲೀಸರಿಗೂ ತಿಳಿದಿದ್ದರೆ ಕರ್ತವ್ಯ ನಿರ್ವಹಿಸುವುದಕ್ಕೆ ಬಹಳ ಅನುಕೂಲವಾಗುತ್ತದೆ. ತನಿಖೆಯ ದೃಷ್ಟಿಯಿಂದಲೂ, ಜನರ ಸಮಸ್ಯೆಗಳಿಗೂ ಸ್ಪಂದಿಸುವ ದೃಷ್ಟಿಯಿಂದಲೂ ಪ್ರಾದೇಶಿಕ ಭಾಷೆಯ ಅರಿವಿದ್ದರೆ ಒಳ್ಳೆಯದು ಎಂಬುವುದನ್ನು ಕಮೀಷನರ್ ಎನ್. ಶಶಿಕುಮಾರ್ ಮನಗಂಡಿದ್ದಾರೆ.






