ಗಮನಿಸಿ; ಮಾರುತಿ ಸುಜ಼ುಕಿ ಈಗ ಮತ್ತಷ್ಟು ದುಬಾರಿ

Date:

ಕೊರೊನಾವೈರಸ್‌ನಿಂದಾಗಿ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದ್ದ ದೇಶದ ಅಗ್ರಮಾನ್ಯ ಕಾರು ತಯಾರಕ ಮಾರುತಿ ಸುಜುಕಿ ಕಂಪನಿ (MSI) ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆದರೆ, ಆರ್ಥಿಕ ಬಿಕ್ಕಟ್ಟು ಮುಂದುವರೆದಿರುವುದರಿಂದ ಬೆಲೆ ಏರಿಕೆ ಮಾರ್ಗ ಹಿಡಿದಿದೆ.

2020-21 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನ ರಫ್ತು ಶೇ. 75ರಷ್ಟು ಇಳಿಕೆಯಾಗಿತ್ತು. ಜೊತೆಗೆ ಬಿಎಸ್ 6 ಮಾನ್ಯತೆ ಸಿಗದ ಹಿನ್ನೆಲೆಯಲ್ಲಿ ಡೀಸೆಲ್ ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟಿರಲಿಲ್ಲ. ಡೀಸೆಲ್ ಕಾರುಗಳನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸಲು ಕೂಡಾ ಮುಂದಾಗಿದೆ. ಜೊತೆಗೆ, ಮಾರುತಿ ಸುಜುಕಿಯ ಆಯ್ದ ವಾಹನಗಳ ಎಕ್ಸ್ ಷೋರೂಂ ಬೆಲೆ ಶೇ 1.9ರಷ್ಟು ಏರಿಕೆ ಮಾಡಲಾಗಿದೆ ಎಂದು ಷೇರುಪೇಟೆಗೆ ಸಂಸ್ಥೆ ತಿಳಿಸಿದೆ.

ಸೆಲೆರಿಯೊ ಹೊರತುಪಡಿಸಿ ಎಲ್ಲಾ ಮಾದರಿ ವಾಹನಗಳ ಬೆಲೆ ಏರಿಕೆ ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಈ ವರ್ಷದಲ್ಲಿ ಮೂರನೇ ಬಾರಿಗೆ ಮಾರುತಿ ಸುಜುಕಿ ಬೆಲೆ ಏರಿಕೆ ಮಾಡಿದೆ. ಈ ಮೊದಲೇ ತಿಳಿಸಿದಂತೆ, ಸೆ.6ರಿಂದ ಆಯ್ದ ವಾಹನಗಳ ಬೆಲೆ ಏರಿಕೆಯಾಗಿದೆ. ಇದಕ್ಕೂ ಮುನ್ನ ಜನವರಿ ತಿಂಗಳಲ್ಲಿ ಹಲವು ಮಾಡೆಲ್ ಮೇಲಿನ ಬೆಲೆ 34,000 ರುಪಾಯಿಯಷ್ಟು ಏರಿಕೆ ಮಾಡಲಾಗಿತ್ತು. ನಂತರ ಆಯ್ದ ವಾಹನಗಳ ಎಕ್ಸ್ ಶೋರೂಂ ಮೇಲಿನ ಬೆಲೆ ಶೇ 1.6ರಷ್ಟು ಹೆಚ್ಚಳ ಕಂಡಿತ್ತು.

ಬೆಲೆ ಏರಿಕೆ ಏಕೆ?: ಕಚ್ಚಾವಸ್ತು ಕೊರತೆ, ಸೆಮಿಕಂಡೆಕ್ಟರ್ ಚಿಪ್, ಬಿಡಿ ಭಾಗಗಳ ಕೊರತೆ, ಉತ್ಪದನಾ ವೆಚ್ಚ ಹೆಚ್ಚಳವಾಗಿದ್ದು, ಬೇಡಿಕೆಗೆ ತಕ್ಕ ಮಾರಾಟವಾಗದ ಕಾರಣ ಬೆಲೆ ಏರಿಕೆ ಮಾಡಲಾಗಿದೆ. “ಉತ್ಪಾದನಾ ವೆಚ್ಚ ನಿರ್ವಹಣಾ ಹೊರೆ ಹೆಚ್ಚಾಗಿರುವುದರಿಂದ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಬೇಕಾಗಿದೆ” ಎಂದು ಎಂಎಸ್ಐ( ಮಾರ್ಕೆಟಿಂಗ್) ಕಾರ್ಯಕಾರಿ ನಿರ್ದೇಶಕ ಶಶಾಂಕ್ ವಾಸ್ತವ ಪ್ರತಿಕ್ರಿಯಿಸಿದ್ದಾರೆ.

ಜನಪ್ರಿಯ ಹ್ಯಾಚ್ ಬ್ಯಾಕ್ಸ್ ಸರಣಿಯ ಸ್ವಿಫ್ಟ್ ಹಾಗೂ ಬಲೆನೋಗೆ ಬೇಕಾದ ಚಿಪ್ ಅಲಭ್ಯವಾಗಿರುವುದರಿಂದ ಉತ್ಪದನಾ ಸಾಮರ್ಥ್ಯವನ್ನು ಸೆಪ್ಟೆಂಬರ್ ತಿಂಗಳಲ್ಲಿ ತಗ್ಗಿಸಲು ಸಂಸ್ಥೆ ಮುಂದಾಗಿದೆ. ಕಳೆದ ವಾರ ಪೆಟ್ರೋಲ್ ಮಾದರಿಯ 1,81,754 ವಾಹನಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು. ಇದು ಮಾರುತಿ ಸುಜುಕಿ ಇತಿಹಾಸದಲ್ಲೇ ಅತಿ ದೊಡ್ಡ ರೀಕಾಲ್ ಎನಿಸಿಕೊಂಡಿತ್ತು.

 

 

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...