ಕೇಂದ್ರ ಸರ್ಕಾರಿ ನೌಕರರಿಗೆ ಇಂದು ಸಿಹಿ ಸುದ್ದಿ ಸಿಗೋ ಸಾಧ್ಯತೆಯಿದೆ. ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಹಲವು ತಿಂಗಳಿಂದ ನಿರೀಕ್ಷಿಸುತ್ತಿರುವ 7ನೇ ವೇತನ ಆಯೋಗದ ಶಿಫಾರಸುಗಳಿಗೆ ಇಂದು ಕೇಂದ್ರ ಸಚಿವ ಸಂಪುಟದ ಅಂಗೀಕಾರ ದೊರಕೋ ಸಾಧ್ಯತೆ ಇದೆ. ಹೀಗಾದಲ್ಲಿ ಜನವರಿ 1ರಿಂದಲೇ ಪೂರ್ವಾನ್ವಯವಾಗುವಂತೆ ನೌಕರರ ವೇತನ, ಪಿಂಚಣಿ ಕನಿಷ್ಠ ಶೇ. 23.5ರಷ್ಟು ಹೆಚ್ಚಾಗುವ ಸಂಭವವಿದೆ. 7ನೇ ವೇತನ ಆಯೋಗದ ಶಿಫಾರಸುಗಳನ್ನು ಪರಿಶೀಲಿಸಲು ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ನೇತೃತ್ವದಲ್ಲಿ ಕಳೆದ ಜನವರಿಯಲ್ಲಿ ಕೇಂದ್ರ ಸರ್ಕಾರ ಕಾರ್ಯದರ್ಶಿಗಳ ಸಮಿತಿಯೊಂದನ್ನು ರಚಿಸಿತ್ತು.
ಆ ಸಮಿತಿ ತನ್ನ ಶಿಫಾರಸು ಸಲ್ಲಿಸಿದ್ದು, ಅವನ್ನು ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹಣಕಾಸು ಸಚಿವಾಲಯಕ್ಕೆ ಸೂಚಿಸಿದ್ದಾರೆ. ವೇತನ ಆಯೋಗದ ಶಿಫಾರಸು ಜಾರಿಯಿಂದ 50 ಲಕ್ಷ ನೌಕರರು ಹಾಗೂ 58 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಹೊಸದಾಗಿ ಕೆಲಸಕ್ಕೆ ಸೇರುವ ನೌಕರರಿಗೆ ನೀಡಲಾಗುವ ವೇತನವನ್ನು ಹಾಲಿ 7 ಸಾವಿರ ರೂಪಾಯಿಗಳಿಂದ 23 ಸಾವಿರದ 500 ರೂಪಾಯಿಗಳಿಗೆ ಹಾಗೂ ಗರಿಷ್ಠ ವೇತನವನ್ನು ಹಾಲಿ 90 ಸಾವಿರದಿಂದ 3.25 ಲಕ್ಷ ರೂಪಾಯಿಗಳವರೆಗೆ ಹೆಚ್ಚಿಸಬೇಕು ಎಂದು ಸಿನ್ಹಾ ನೇತೃತ್ವದ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎನ್ನಲಾಗಿದೆ.
- ಶ್ರೀ
POPULAR STORIES :
ಹಾಳಾಗಿ ಹೋಗ್ತೀಯಾ…! ಕೊಳ್ಳೇಗಾಲ ಅಂದಾಕ್ಷಣ ಸಿಎಂ ಕಾಲ್ಕಿತ್ತಿದ್ದು ಯಾಕೆ..?
ಹುಡುಗಿಯರಿಗೆ ಕಿರುಕುಳ ಕೊಡ್ತಿದ್ದ 420ಗೆ ಧರ್ಮದೇಟು..! ಹೆಂಗಿದ್ದಾ ಹೆಂಗಾದ? ಬೇಕಿತ್ತಾ ಪಾಪಿ ನಿನಗಿದು?
ಗ್ರೇಟ್ ಖಲಿಯ ಶಿಷ್ಯನನ್ನು ಸೋಲಿಸಿದ ಹರ್ಭಜನ್ ಸಿಂಗ್..!
ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?
26 ವರ್ಷದ ಮಾಡೆಲಿಂಗ್ ಹುಡುಗಿ 62 ವರ್ಷದ ತಾತನನ್ನೇ ಯಾಕೆ ಮದುವೆಯಾದ್ಲು?
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?