ಮೈಸೂರು ದಸರಾ ಕಾರ್ಯಕ್ರಮಗಳ ಪಟ್ಟಿ ಪ್ರಕಟ

Date:

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು. ಕೊರೊನಾ ಆತಂಕದ ನಡುವೆಯೇ ಕಳೆದ ಬಾರಿಯಂತೆ ಈ ಬಾರಿಯೂ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಜರುಗಲಿದೆ. ಮೈಸೂರು ದಸರಾವನ್ನು ಎಷ್ಟೇ ಸರಳವಾಗಿ ಆಚರಿಸಿದರೂ ಅದರ ಮುಖ್ಯ ಆಕರ್ಷಣೆ ಜಂಬೂ ಸವಾರಿ. ಹೀಗಾಗಿ ಈ ಬಾರಿಯ ದಸರಾ ಸಂಬಂಧಿತ ಸಭೆಯಲ್ಲಿ ಜಂಬೂ ಸವಾರಿ ಸೇರಿದಂತೆ ಕೆಲ ವಿಚಾರಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದ್ದು, ದಸರಾ ಆನೆಗಳ ಪಟ್ಟಿಯನ್ನು ಬಿಡುಗಡೆ‌ ಮಾಡಲಾಗಿದೆ.

ಮೈಸೂರು ದಸರಾ ಕಾರ್ಯಕಾರಿ ಸಮಿತಿ ಸಭೆ ಮುಕ್ತಾಯದ ಬಳಿಕ ಸಚಿವ ಎಸ್.ಟಿ. ಸೋಮಶೇಖರ್ ಸುದ್ದಿಗೋಷ್ಠಿ ನಡೆಸಿ ದಸರಾ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ನೀಡಿದರು.

 

ಮೈಸೂರು ದಸರಾ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ
* ಸೆಪ್ಟೆಂಬರ್ 13 ರಂದು ಬೆಳಿಗ್ಗೆ 9.30ಕ್ಕೆ ಗಜಪಡೆ ಪೂಜೆ ಮಾಡಿ, ವೀರನಹೊಸಹಳ್ಳಿಯಿಂದ ಎಂಟು ಆನೆಗಳನ್ನು ಕರೆ ತರಲಾಗುತ್ತದೆ.

* ಸೆಪ್ಟೆಂಬರ್ 16 ರಂದು ಮೈಸೂರು ಅರಮನೆ ಬಳಿ ಗಜಪಡೆಯನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುವುದು

* ಅಕ್ಟೋಬರ್ 7ರಿಂದ 15 ರವರೆಗೆ ದಸರಾ ಮಹೋತ್ಸವದಲ್ಲಿ ದೀಪಾಲಂಕಾರವಿರುತ್ತದೆ.

* ಅಕ್ಟೋಬರ್ 1ರಿಂದ 9 ದಿನ ಅರಮನೆ ಆವರಣದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ

* ಅಕ್ಟೋಬರ್ 7ರಂದು ಚಾಮುಂಡಿ ಬೆಟ್ಟದಲ್ಲಿ ಅಧಿಕೃತ ಮೈಸೂರು ದಸರಾ ಉದ್ಘಾಟನೆ

* ಅಕ್ಟೋಬರ್ 15ರ ಸಂಜೆ 4.36ಕ್ಕೆ ಮೈಸೂರು ಅರಮನೆ ಆವರಣದಲ್ಲಿ ನಂದಿ ಪೂಜೆ

*ಅಕ್ಟೋಬರ್ 15ರ ಸಂಜೆ 5ಕ್ಕೆ ಅರಮನೆ ಆವರಣದಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಜಂಬೂಸವಾರಿ

* ಅಕ್ಟೋಬರ್ 16ರಂದು ಗಜಪಡೆಗೆ ಬೀಳ್ಕೊಡುಗೆ

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...