ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ರಿಂಗಿಂಗ್ ಬೆಲ್ಸ್?

Date:

ಫ್ರೀಡಂ 251 ಅಥವಾ ರಿಂಗಿಂಗ್ ಬೆಲ್ಸ್. ಈ ಹೆಸರನ್ನು ಪ್ರತಿಯೊಬ್ಬರೂ ಕೇಳಿರುವ ಹೆಸರು. ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‍ಫೋನ್ ಎಂದು ಹೇಳಿಕೊಂಡು ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡಿ ಆನಂತರ ಅನೇಕ ವಿವಾದಕ್ಕೆ ಗುರಿಯಾಗಿದ್ದ ಕಂಪನಿ. ಈಗ ಮತ್ತೊಮ್ಮೆ ಅದು ಸುದ್ದಿಯಾಗಿದ್ದು
ಜುಲೈ 7 ರಿಂದ ಹಂತ ಹಂತವಾಗಿ ಮುಂಗಡ ಕಾಯ್ದಿರಿಸಿರುವವರಿಗೆ ಫ್ರೀಡಂ 251 ಸ್ಮಾರ್ಟ್‍ಫೋನ್‍ಗಳನ್ನು ತಲುಪಿಸಲು ಸಜ್ಜಾಗಿದೆ.
ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸ್ಮಾರ್ಟ್‍ಫೋನ್ ಹೊಂದಿರಬೇಕು ಎಂಬ ಇರಾದೆಯಿಂದ ಕೇವಲ 251ರುಪಾಯಿಗಳಿಗೆ ತನ್ನ ಕಂಪನಿಯ ಸ್ಮಾರ್ಟ್‍ಫೋನ್ ಅನ್ನು ಜನರ ಕೈಗಿಡಲಿದ್ದೇವೆ ಎಂದು ತಿಳಿಸಿದಾಗ ಅನೇಕ ಪ್ರತಿಷ್ಟಿತ ಕಂಪನಿಗಳು ಬೆವತು ಹೋಗಿದ್ದವು. ಹಲವಾರು ದಶಕಗಳ ಹಿಂದೆ ಸ್ಥಾಪಿಸಿರುವ ಕಂಪನಿಗಳೇ ಭಾರತದಲ್ಲಿ ಇನ್ನೂ ಸ್ಪಷ್ಟವಾಗಿ ನೆಲೆಯೂರಲು ಸಾಧ್ಯವಾಗಿಲ್ಲ ಅಂತಹದರಲ್ಲಿ ಕೇವಲ ಒಂದು ವರ್ಷದ ಹಿಂದೆ ಪ್ರಾರಂಭವಾದ ಕಂಪನಿ ಸ್ಮಾರ್ಟ್‍ಫೋನ್ ಅನ್ನು ತಯಾರಿಸಿ ಅತ್ಯಂತ ಅಗ್ಗದ ಬೆಲೆಯಲ್ಲಿ ಹೇಗೆ ಮಾರಲು ಸಾಧ್ಯ. ಅದೂ ಮಾರುಕಟ್ಟೆಯಲ್ಲಿ ಸಿಗುವ ಒಂದೊಳ್ಳೆ ಫೀಚರ್ಸ್‍ವುಳ್ಳ ಸ್ಮಾರ್ಟ್‍ಫೋನ್ ಖರೀದಿಸಬೇಕೆಂದರೆ ಕನಿಷ್ಟ ಏನಿಲ್ಲಾ ಅಂದರೂ 3-4 ಸಾವಿರ ಬೇಕು ಅಂತಹದರಲ್ಲಿ ಈ ಸ್ಮಾರ್ಟ್‍ಫೋನ್ ಅದೇ ಫೀಚರ್ಸ್ ಒಳಗೊಂಡು ಇಷ್ಟೊಂದು ಕಡಿಮೆ ಬೆಲೆಗೆ ಒದಗಿಸಲು ಹೇಗೆ ಸಾಧ್ಯ? ಇದೆಲ್ಲ ಕಂಪನಿಯ ಗಿಮಿಕ್. ಇದರಲ್ಲಿ ಏನೋ ಮೋಸ ಅಡಗಿದೆ. ಜನರ ಹಣವನ್ನು ದೋಚಿಕೊಂಡು ಕಾಲ್ಕಿತ್ತಲಿದೆ ಎಂದೆಲ್ಲಾ ಹಲವಾರು ಆಡಿಕೊಂಡಿದ್ದಲ್ಲದೇ ಕಂಪನಿಯ ವಿರುದ್ಧ ಹಲವಾರು ಕಂಪನಿಗಳು ವಂಚನೆಯ ಕೇಸುಗಳನ್ನೂ ದಾಖಲಿಸಿದ್ದವು.
ನೋಡಲು ಥೇಟ್ ಐಫೋನ್ ನಂತೆಯೇ ಕಾಣುವ ಈ ಸುಂದರವಾದ ಸ್ಮಾರ್ಟ್‍ಫೋನ್ ಆ್ಯಪಲ್ ಮಾದರಿ ಕದ್ದಿದೆ ಎಂದು ಪೇಟೆಂಟ್ ಇನ್‍ಫ್ರಿಂಜ್‍ಮೆಂಟ್ ಕೇಸು ದಾಖಲಿಸಿದ್ದಲ್ಲದೇ ಚೀನಾ ಮೂಲದ ಇನ್ನೊಂದು ಕಂಪನಿ ಆ್ಯಡ್‍ಕಾಂ ತನ್ನ ಕಂಪನಿಯ ಫೋನ್ ಗಳನ್ನೇ ಇವರ ಫ್ರೀಡಂ 251 ಹೆಸರಿನಲ್ಲೇ ಮಾರುತ್ತಿದೆ ಎಂದು ಆರೋಪ ಮಾಡಿತ್ತು.
ಸ್ಮಾರ್ಟ್‍ಫೋನ್ ಖರೀದಿಗೆಂದು ರಿಜಿಸ್ಟ್ರೇಷನ್ ಪ್ರಾರಂಭವಾದ ಮೊದಲನೇ ದಿನವೇ ಈ ವೆಬ್‍ಸೈಟ್‍ಗೆ ಸುಮಾರು 30 ಸಾವಿರಕ್ಕೂ ಹೆಚ್ಚು ಜನ ನೊಂದಾವಣೆ ಮಾಡಿದ್ದರು. ನೊಂದಣೆ ಸಮಯದಲ್ಲಿ ಜನರಿಗೆ ಮೋಸ ಎಂದು ಅನಿಸಿದರೂ ತಲೆ ಕೆಡಿಸಿಕೊಳ್ಳದೇ ಅಯ್ಯೋ ಕೇವಲ 25೧ ರುಪಾಯಿಗಳು ಮಾತ್ರ ತಾನೇ ಹೋದರೆ ಹೋಗಲಿ ಒಂದು ಪಿಜ್ಜಾ , ಬರ್ಗರ್ ತಿನ್ನುವುದಕ್ಕೇ ನಾವು 500ರುಪಾಯಿಗಟ್ಟಲೇ ಖರ್ಚು ಮಾಡುವ ನಾವು ಒಂದ್‍ಸಲ ಟ್ರೈ ಆದರೂ ಮಾಡಿ ನೋಡೋಣ ಎಂದು ಅಂದು ಕೊಂಡೇ ಮುಂಗಡ ಬುಕ್ಕಿಂಗ್ ಕಾಯ್ದಿರಿಸಿದರು.
ಕಂಪನಿ ನಿರೀಕ್ಷಿಸಿದಕ್ಕಿಂತಲು ಸಾಗರ ಮಟ್ಟದಲ್ಲಿ ಜನರು ನೊಂದಾಯಿಸಿಕೊಳ್ಳುತ್ತಿರುವುದನ್ನು ನೋಡಿ ಕಕ್ಕಾಬಿಕ್ಕಿಯಾದ ಕಂಪನಿ ತನ್ನ ವೆಬ್‍ಸೈಟ್ ಕ್ರಾಷ್ ಆಗಿದೆ, ಇನ್ನು ಮುಂದೆ ನೊಂದಾಯಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡು ನುಣುಚಿಕೊಂಡಿತು. ಇದಕ್ಕಾಗಿಯೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ದಿಗ್ಗಜ ಕಂಪನಿಗಳು ಇದೆಲ್ಲಾ ಬರೀ ಮೋಸ. ನೊಂದಾಯಿಸಿದವರ ಹಣವನ್ನು ವಾಪಸ್ ಮಾಡಲೇ ಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಜನರ ಹಣವಾಪಸ್ ನೀಡುವುದಾಗಿ ಕಂಪನಿ ಹೇಳಿಕೊಂಡರೂ ಜನರ ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ. ಖಂಡಿತವಾಗಿಯೂ ಅವರಿಗೆ ನಮ್ಮ ಸ್ಮಾರ್ಟ್‍ಫೋನ್ ತಲುಪಿಸಿಯೇ ತಲುಪಿಸುತ್ತೇವೆ ಎಂದು ರಿಂಗಿಂಗ್ ಬೆಲ್ಸ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋಹಿತ್ ಗೋಯಲ್ ಹೇಳಿಕೆ ನೀಡಿದ್ದರು.
ಈ ಹೇಳಿಕೆ ನೀಡಿ ಸುಮಾರು ತಿಂಗಳುಗಳೇ ಕಳೆದು ಹೋಗಿದೆ. ಖರೀದಿಗೆಂದು ನೊಂದಾಯಿಸಿದ್ದವರೂ ಮರೆತಿದ್ದ ಜನರಿಗೆ ಮತ್ತೊಮ್ಮೆ ಈ ಕಂಪನಿ ಸುದ್ದಿಮಾಡಿದ್ದು, ಮೊದಲ ದಿನದಂದು ರಿಜಿಸ್ಟ್ರೇಷನ್ ಮಾಡಿದವರಿಗೆ ಕಂಪನಿ ಸ್ಮಾರ್ಟ್‍ಫೋನ್ ಹಂತ ಹಂತವಾಗಿ ಇಂದಿನಿಂದ ಕಳುಹಿಸಲು ಸಜ್ಜಾಗಿ ನಿಂತಿದೆ.
ಇದರ ಗುಣಮಟ್ಟಗಳು ಹೇಗಿರಲಿವೆ ಎಂದು ಜನರ ಕೈಗೆ ತಲುಪಿದಾಗಲೇ ತಿಳಿಯುತ್ತದೆ. ಆದರೆ ಒಂದಂತೂ ನಿಜ ಈ ಕಂಪನಿ ಮಾರುಕಟ್ಟೆಯಲ್ಲಿ ಕ್ಲಿಕ್ ಏನೋ ಆಗಿದ್ದಲ್ಲಿ ಹಲವು ದಿಗ್ಗಜ ಕಂಪನಿಗಳಿಗೆ ನಡುಕ ಹುಟ್ಟುವುದಂತೂ ಗ್ಯಾರಂಟಿ!!

  • ವಿಶು

POPULAR  STORIES :

ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಯಲ್ಲಿ ಶೋಭ ಹಸ್ತಕ್ಷೇಪ ಇಲ್ವಂತೆ..!?

11ರ ಪೋರ ಕಲ್ಲಾಗುತ್ತಿದ್ದಾನೆ..!

ಸುದೀಪ್, ಪ್ರಿಯ ಒಂದಾದ್ರ.? ಮತ್ತೆ ಒಂದಾಯ್ತು ಕಿಚ್ಚನ ಸಂಸಾರ..!?

ಇನ್ಮುಂದೆ ಶಾಲೆಗಳಿಗೆ ಕಟ್ಟಬೇಕಿಲ್ಲ ಲಕ್ಷಗಟ್ಟಲೆ ಡೊನೇಷನ್..!

ನೀವು ಫೇಸ್‍ಬುಕ್‍ನಲ್ಲಿ ಫೇಮಸ್ಸಾದ್ರೆ ಸುಲಭದಲ್ಲಿ ಸಾಲ ಸಿಗುತ್ತೆ..!

ಇಟ್ಟರೆ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ..ಮೂತ್ರ ಹೊಯ್ದರೆ ಬಂಗಾರವಾದೆ..! #Gold in Cow

ಹಾಳಾಗಿ ಹೋಗ್ತೀಯಾ…! ಕೊಳ್ಳೇಗಾಲ ಅಂದಾಕ್ಷಣ ಸಿಎಂ ಕಾಲ್ಕಿತ್ತಿದ್ದು ಯಾಕೆ..?

ಹುಡುಗಿಯರಿಗೆ ಕಿರುಕುಳ ಕೊಡ್ತಿದ್ದ 420ಗೆ ಧರ್ಮದೇಟು..! ಹೆಂಗಿದ್ದಾ ಹೆಂಗಾದ? ಬೇಕಿತ್ತಾ ಪಾಪಿ ನಿನಗಿದು?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...