ಮತ್ತೊಂದು ಕಾಸ್ಟ್ಲಿ ಕಾರು ಖರೀದಿಸಿದ ದರ್ಶನ್; ಬೆಲೆ ಎಷ್ಟು?

Date:

ನಟ ದರ್ಶನ್‌ರ ಕಾರು ಕ್ರೇಜ್ ಸಾಮಾನ್ಯದ್ದಲ್ಲ. ಹಲವು ಅತ್ಯುತ್ತಮ ಕಾರುಗಳನ್ನು ತಮ್ಮ ಸಂಗ್ರಹದಲ್ಲಿಟ್ಟುಕೊಂಡಿದ್ದಾರೆ ದರ್ಶನ್.

ಯಾವುದೇ ಒಳ್ಳೆಯ ಕಾರು ಮಾರುಕಟ್ಟೆಗೆ ಬಂದರೆ ಅದನ್ನು ಟೆಸ್ಟ್ ಮಾಡುವುದು ಇಷ್ಟವಾದರೆ ಖರೀದಿಸುವುದು ದರ್ಶನ್‌ರ ಹವ್ಯಾಸವೇ ಆಗಿಬಿಟ್ಟಿದೆ. ಲ್ಯಾಂಬರ್ಗಿನಿ ಉರುಸ್ ಸೇರಿದಂತೆ ಹಲವು ಐಶಾರಾಮಿ, ದುಬಾರಿ ಕಾರುಗಳು ಈಗಾಗಲೇ ದರ್ಶನ್‌ ಬಳಿ ಇವೆ. ಇದೀಗ ಹೊಸ ಕಾರೊಂದು ಅವರ ಸಂಗ್ರಹಕ್ಕೆ ಸೇರಿಕೊಂಡಿದೆ. ನಟ ದರ್ಶನ್ ಹೊಸದಾಗಿ ಫೋರ್ಡ್ ಎಂಡೊವೆರಾ ಕಾರನ್ನು ಖರೀದಿಸಿದ್ದಾರೆ. ಬಹಳ ಬಲಶಾಲಿಯೂ, ಮಸಲ್‌ ಲುಕ್ಕನ್ನೂ ಹೊಂದಿರುವ ಈ ಕಾರು ಅಷ್ಟೆ ದುಬಾರಿ ಬೆಲೆಯನ್ನು ಸಹ ಹೊಂದಿದೆ.

ದರ್ಶನ್‌ ಈಗ ಖರೀದಿಸಿರುವ ಫೋರ್ಡ್ ಎಂಡೊವೆರಾ 150 ಕಾರಿನ ಬೆಲೆ ಸುಮಾರು ಅರ್ಧ ಕೋಟಿ ದಾಟಿದೆ ಸಮೀಪ ಆಗುತ್ತದೆ. ಮೊದಲಿನಿಂದಲೂ ಫೋರ್ಡ್ ಸಂಸ್ಥೆ ಎಂಡೊವೆರಾ ಕಾರು ಮಾರಾಟ ಮಾಡುತ್ತಲೇ ಬರುತ್ತಿದೆ. ಆದರೆ ಈಗ ದರ್ಶನ್ ಖರೀದಿಸಿರುವುದು ಸಂಪೂರ್ಣ ಹೊಸ ಮಾದರಿಯ ಎಂಡೊವೆರಾ ಕಾರು. ತಮ್ಮ ಕಾರಿಗೆ ಸಾಕಷ್ಟು ಮಾಡಿಫಿಕೇಶನ್‌ಗಳನ್ನು ದರ್ಶನ್ ಮಾಡಿಸಿದ್ದು ಅದ್ಭುತ ಆಫ್‌ ರೋಡ್ ಲುಕ್ ಅನ್ನು ನೀಡಿದ್ದಾರೆ. ಬಿಳಿ ಬಣ್ಣದ ಗೂಳಿಯಂತೆ ಘೇಂಡಾಮೃಗದಂತೆ ದೈತ್ಯವಾಗಿ, ಗಂಭೀರವಾಗಿ ಕಾರು ಕಾಣುತ್ತಿದೆ. ದರ್ಶನ್‌ರ ಹೊಸ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ದರ್ಶನ್‌ರ ಹೊಸ ಕಾರಿನ ಎಕ್ಸ್ ಶೋರೂಂ ಬೆಲೆ 36 ಲಕ್ಷ ಇದ್ದು, ರಸ್ತೆ ತೆರಿಗೆ, ವಿಮೆ ಇತ್ಯಾದಿ-ಇತ್ಯಾದಿ ಸೇರಿ 50 ಲಕ್ಷ ವಾಗುತ್ತದೆ. ಇನ್ನು ದರ್ಶನ್ ಸಾಕಷ್ಟು ಮಾಡಿಫಿಕೇಶನ್‌ಗಳನ್ನು ಮಾಡಿಸಿದ್ದು, ಇದಕ್ಕೆ ಹೆಚ್ಚುವರಿ ಹಣ ತಗುಲಿರುವುದರಲ್ಲಿ ಅನುಮಾನವಿಲ್ಲ. ದರ್ಶನ್‌ ಬಳಿ ಈಗಾಗಲೇ ಹಲವು ದುಬಾರಿ ಕಾರುಗಳಿವೆ, ಲ್ಯಾಂಬರ್ಗಿನಿ ಉರುಸ್, ಜಾಗ್ವಾರ್, ಪೋರ್ಷೆ, ಮಿನಿ ಕೂಪರ್, ಫೋರ್ಡ್ ಮಸ್ಟಾಂಗ್, ಟೊಯೊಟಾ ಫಾರ್ಚ್ಯುನರ್, ಮಹೀಂದ್ರಾ ಸ್ಕಾರ್ಪಿಯೋ ಇನ್ನೂ ಹಲವು ಸಾಧಾರಣ ಕಾರುಗಳು ಸಹ ಇವೆ.

 

 

Share post:

Subscribe

spot_imgspot_img

Popular

More like this
Related

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ ಸ್ಯಾಂಡಲ್‌ವುಡ್‌ನ ಖ್ಯಾತ ನಟ...

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಜಾ

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ...

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....