ಬಹುನಿರೀಕ್ಷಿತ ಹಲವು ಸಿನಿಮಾಗಳ ಬಿಡುಗಡೆ ದಿನಾಂಕಗಳು ದಿನಕಳೆದಂತೆ ಬದಲಾಗುತ್ತಿದೆ. ಕೆಲವು ನಿರ್ದಿಷ್ಟ ಸಮಯಕ್ಕೆ ಮುಂದೂಡಲ್ಪಟ್ಟಿದೆ. ಮತ್ತೆ ಕೆಲವು ಚಿತ್ರಗಳು ಮುಂದಿನ ವರ್ಷದ ಸಂಕ್ರಾಂತಿ ಮತ್ತು ಫೆಬ್ರವರಿ ಮಾಸಕ್ಕೆ ಹೊಸ ಡೇಟ್ ಗಳನ್ನು ಫಿಕ್ಸ್ ಮಾಡಿಕೊಂಡಿವೆ. ಹೀಗಾಗಿ ಎಲ್ಲರ ಕಣ್ಣು ಕೆಜಿಎಫ್ 2 ಚಿತ್ರದ ಬಿಡುಗಡೆ ದಿನಾಂಕದ ಮೇಲೆ ಕೇಂದ್ರೀಕೃತವಾಗಿತ್ತು.
ಕೆಜಿಎಫ್-2 ಏಪ್ರಿಲ್ 14, 2022ಕ್ಕೆ ಚಿತ್ರಮಂದಿರಕ್ಕೆ ಬರುವುದಾಗಿ ಮೊದಲೇ ಘೋಷಿಸಿತ್ತು ಆದರೆ ಕೆಲವು ಚಿತ್ರಗಳ ಬದಲಾವಣೆಯ ಹಿನ್ನಲೆಯಲ್ಲಿ ‘ಕೆಜಿಎಫ್ 2’ ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆ ಒಂದಷ್ಟು ಗೊಂದಲಗಳು ಮೂಡಿತ್ತು. ಅಲ್ಲದೆ ಹಿಂದೆಯೇ ಹೊಂಬಾಳೆ ಮೂವೀಸ್ ಅವರ ಮತ್ತೊಂದು ಪ್ರತಿಷ್ಠಿತ ಚಿತ್ರವಾದ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟಿಸಿರುವ ‘ಸಲಾರ್’ ಚಿತ್ರಕ್ಕೂ ಇದೇ ಡೇಟ್ ಫಿಕ್ಸ್ ಆಗಿತ್ತು. ಕೊರೊನಾದ ಹಿನ್ನಲೆಯಲ್ಲಿ ‘ಕೆಜಿಎಫ್ 2’ ಚಿತ್ರದ ಬಿಡುಗಡೆ ತಡವಾಗಿ ಈಗ ಅಧಿಕೃತವಾಗಿ ಏಪ್ರಿಲ್ 14ಕ್ಕೆ ಬಿಡುಗಡೆಯಾಗುವುದು ಖಚಿತವಾಗಿದೆ. ಆದರೆ ‘ಸಲಾರ್’ ಚಿತ್ರದ ಬಿಡುಗಡೆ ಮತ್ತಷ್ಟು ಮುಂದಕ್ಕೆ ಹೋಗಬಹುದು.
ಹಿಂದೆಯೇ ಏಪ್ರಿಲ್ 14ಕ್ಕೆ ‘ಕೆಜಿಎಫ್ 2’ ಬಿಡುಗಡೆ ಖಚಿತವಾಗಿತ್ತು. ಹೀಗೆ ಕೆಲವು ಮಹತ್ವದ ಚಿತ್ರಗಳು ಬಿಡುಗಡೆಯಲ್ಲಿ ಏರುಪೇರು ಆಗುತ್ತಿರುವ ಕಾರಣದಿಂದ ‘ಕೆಜಿಎಫ್ 2’ ಬಗ್ಗೆ ಇದ್ದ ಆತಂಕಗಳಿಗೆಲ್ಲಾ ಈಗ ತೆರೆ ಬಿದ್ದಿದೆ. ‘ಕೆಜಿಎಫ್-2’ ಚಿತ್ರ ತನ್ನ ಅಧಿಕೃತ ಘೋಷಿತ ದಿನದಂದೇ ಬಿಡುಗಡೆಯಾಗುತ್ತಿದೆ. ಸಿನಿ ಕ್ರಿಟಿಕ್ ತರುಣ್ ಆದರ್ಶ್ ಈ ಬಗ್ಗೆ ಮಾಹಿತಿಯನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದು ‘ಎಲ್ಲಾ ಅಂತೆ-ಕಂತೆಗಳಿಗೆ ತೆರೆಬಿದ್ದಿದೆ. ‘ಕೆಜಿಎಫ್’ 2′ ತನ್ನ ಅಧಿಕೃತ ಘೋಷಿತ ದಿನಾಂಕ ಏಪ್ರಿಲ್ 14 ,2022 ರಂದು ಬಿಡುಗಡೆಯಾಗುತ್ತಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ’ ಅಂತ ಅದರಲ್ಲಿ ಸ್ಪಷ್ಟಪಡಿಸಿದ್ದಾರೆ.