” a city which never sleeps ” ಎಂದೇ ಖ್ಯಾತಿ ಹೊಂದಿರುವ ದೇಶದ ಬ್ಯುಸಿ ನಗರಗಳಲ್ಲಿ ಒಂದಾದ ಮುಂಬಯಿ ಮಹಾ ನಗರಕ್ಕೆ ಎಂಟ್ರಿ ಕೊಟ್ಟಿದ್ದೀರಾಂದ್ರೆ ನೀವು ಈ ಮರೀನ್ ಡ್ರೈವ್ ಬಗ್ಗೆ ಚೆನ್ನಾಗಿ ತಿಳ್ಕೊಂಡಿರ್ತೀರ.ಹೌದು ಮುಂಬಯಿಗೆ ಬಂದಿರೋ ಯಾವುದೇ ವ್ಯಕ್ತಿಯಾಗಿರ್ಲಿ ಮರೀನ್ ಡ್ರೈವ್ ನೋಡದಿರಲಾರ.ಮೊತ್ತಮೊದಲು ನೋಡಲೇಬೇಕಾದ ತೀರ ಆಕರ್ಷಣೀಯವಾಗಿರೋ ಒಂದು ಪ್ರವಾಸೀ ತಾಣವೇ ಈ ಮರೀನ್ ಡ್ರೈವ್ , ಮಳೆಗಾಲ ಬಂದ್ರಂತೂ ಭೋರ್ಘರೆಯುವ ಸಮುದ್ರದ ನಾದದೊಂದಿಗೆ, ಸೌಂದರ್ಯದ ಖನಿಯಂತೆ ಮೈವೆತ್ತಿರೋ ಈ ಮರೀನ್ ಡ್ರೈವ್ ನಲ್ಲಿರೋ ದೃಶ್ಯ ನೋಡುಗರ ಕಣ್ಣಿಗೆ ತಂಪನ್ನೀಯುವುದಲ್ಲದೆ ಮುಂಬಯಿ ನಗರಿಯ ಸೌಂದರ್ಯವನ್ನು ಇಮ್ಮಡಿಸುತ್ತದೆ.
ಈ ಮರೀನ್ ಡ್ರೈವ್ ಗೆ ಹೋಗಿದ್ದೀರಾಂದ್ರೆ,ಅಲ್ಲಿರೋ 4 ಕಾಲುಗಳಿರೋ ಕಾಂಕ್ರೀಟ್ ನ ರಚನಾತ್ಮಕ ಕಲ್ಲುಗಳನ್ನು ನೋಡಿರಬಹುದು.ಇವುಗಳೇನು? ಇವುಗಳ್ಯಾಕೆ ಹೀಗಿವೆ? ಎಂದು ಯಾವತ್ತಾದ್ರೂ ಆಶ್ಚರ್ಯ ಪಟ್ಟಿದ್ದೀರಾ?
ಇಲ್ಲಿದೆ ನಿಮಗೆ ಉತ್ತರ
ಈ ನಾಲ್ಕು ಕಾಲುಗಳಿರುವ ಆಕಾರಕ್ಕೆ ಟೆಟ್ರಾಪೋಡ್ಸ್(Tetrapods)ಅನ್ನಲಾಗುತ್ತದೆ.ಇದನ್ನು ಮೊತ್ತಮೊದಲಿಗೆ 1950 ರಲ್ಲಿ ಫ್ರಾನ್ಸ್ ನ ಗ್ರೆನೋಬಲ್ ಲ್ಯಾಬೋರೇಟರಿ ಡಾಫಿನೈಸ್ ಡಿ’ಹೈಡ್ರಾಲಿಕ್( Laboratoire Dauphinois d’Hydralique) (ಈಗ ಆರ್ಟೆಲಿಯ) ಯಲ್ಲಿ ಅನ್ವೇಷಿಸಲಾಯಿತು.1958 ರಲ್ಲಿ ಆಸ್ಟ್ರೇಲಿಯಾದಿಂದ ಇದನ್ನು ನಗರಕ್ಕೆ ಆಮದು ಮಾಡಲಾಯಿತು.ಪ್ರತೀ ಟೆಟ್ರಾಪೊಡ್ಸ್ 2 ಟನ್ ತೂಕವಿದ್ದು,ಸರಿ ಸುಮಾರು 6,500 ಟೆಟ್ರಾಪೊಡ್ಸ್ ಗಳು ಮೆರೈನ್ ಡ್ರೈವ್ ನಲ್ಲಿರುವುದು.ನಾವು ಹಲವಾರು ಬಾರಿ ಇದನ್ನು ಹಿಂದಿ ಸಿನಿಮಾಗಳಲ್ಲಿ,ಮ್ಯೂಸಿಕ್ ವೀಡಿಯೋಗಳಲ್ಲಿ,ಹಲವು ಆರ್ಟಿಕಲ್ ಗಳಲ್ಲಿ ನೋಡಿರುತ್ತೇವೆ.ಇವುಗಳು ಸ್ಥಳಾಂತರವಾಗುವುದನ್ನು ತಪ್ಪಿಸಲು ಒಂದಕ್ಕೊಂದು ಬೆಸೆಯುವಂತೆ ಸಮುದ್ರ ದಂಡೆಯುದ್ದಕ್ಕೂಇದನ್ನು ಹಾಕಲಾಗಿದೆ.ಅತ್ಯಂತ ಬಲಶಾಲಿ ತೆರೆಗಳು ಸಮುದ್ರದ ದಂಡೆಗಳಿಗೆ ಅಪ್ಪಳಿಸುತ್ತಾ ನೀರು ಮುಂದಕ್ಕೆ ಬರುವುದನ್ನು ತಡೆಹಿಡಿಯುವ ಸಾಮರ್ಥ್ಯ ಇದಕ್ಕಿದ್ದು,ಇದೊಂದು ರಕ್ಷಣಾ ಕವಚದಂತೆ ವರ್ತಿಸುತ್ತದೆ.ಸಮುದ್ರದಿಂದ ಬರೋ ತೆರೆಗಳ ವಿರುದ್ದ ತಡೆಹಿಡಿಯೋದಲ್ಲದೆ,ಸಮುದ್ರದ ತೆರೆಗಳು ಕಲ್ಲಿನ ಸುತ್ತಲೂ ಪ್ರವಹಿಸಿದಾಗ ಆ ನೀರನ್ನು ಹೀರಿಕೊಳ್ಳೋ ಸಾಮರ್ಥ್ಯ ಈ ಟೆಟ್ರಾಪೋಡ್ಗಿದ್ದುದರಿಂದ ಇದಕ್ಕೆ ಈ ತರನಾದ ಆಕಾರವನ್ನು ಕೊಡಲಾಗಿದೆ.
ಕೇವಲ ನಮ್ಮ ಭಾರತದಲ್ಲಷ್ಟೇ ಅಲ್ಲ,ಹೊರದೇಶವಾದ ಜರ್ಮನಿಯಲ್ಲಿರೋ ನೋರ್ತ್ ಸೀ ಅಂದು ಕರೆಯಲ್ಪಡುವ ಅಟ್ಲಾಂಟಿಕ್ ಸಮುದ್ರದ ಸೀಮೆಯಲ್ಲಿರುವ ಸಮುದ್ರ,ಮೌಂಟ್ ಫುಜಿ ಸುತ್ತಲಿರೋ ಸುರುಗ ಕೊಲ್ಲಿಯ ದಂಡೆಗಳಲ್ಲೂ ಈ ಟೆಟ್ರೋಪೋಡ್ ಗಳನ್ನು ಕಾಣಬಹುದಾಗಿದೆ.
- ಸ್ವರ್ಣಲತ ಭಟ್
POPULAR STORIES :
ಸೆಲ್ಫಿ ಹುಚ್ಚು ಹೆಚ್ಚಾಯ್ತು..! ಅತ್ಯಾಚಾರ ಸಂತ್ರಸ್ತೆ ಜೊತೆ ಸೆಲ್ಫಿ ತೆಗೆದುಕೊಂಡ್ಲು ಮಹಿಳಾ ಆಯೋಗದ ಸದಸ್ಸೆ..!
ಬಟ್ಟೆ ಕಳಚಿ ಬೆತ್ತಲಾದ್ರು ಆ ದೇಶದ ಜನ.. ಬೆತ್ತಲಾಗೇ ಮಾಡಿದ್ರು ಕಚೇರಿ ಕೆಲಸ ಯಾಕೆ ಗೊತ್ತಾ..?
ನಿರ್ದೇಶಕನ ಬೆವರಿಳಿಸಿದ ಜಗ್ಗುದಾದ.. ರಾಘವೇಂದ್ರ ಹೆಗಡೆ ಮೈ ಚಳಿ ಬಿಡಿಸಿದ ದರ್ಶನ್..!
ಜೈಲ್ ನಿಂದಲೇ IIT ಪರೀಕ್ಷೆ ಬರೆದು ಪಾಸಾದ ಈ ಹುಡುಗನ ಬಗ್ಗೆ ಗೊತ್ತೇ??
ಸತ್ತ ನಂತರವೂ ವ್ಯಕ್ತಿಗಳ ಜತೆ ಸಂವಹನ ನಡೆಸಿ!!
ವಿಮಾನದ ಮೆಟ್ಟಿಲಿನಿಂದ ಬಿದ್ದವಳು ಏನಾದಳು? ಹೆಂಗಿದ್ದ ಮಹಿಳೆ ಹೇಗಾದ್ಲು ಗೊತ್ತಾ?