ಅಫ್ಘಾನಿಸ್ತಾನ ಕುರಿತಾಗಿ ರಷ್ಯಾದ ಮಾತಿಗೆ ಅಸ್ತು ಎಂದ ಭಾರತ

Date:

ಮಾಸ್ಕೋದಲ್ಲಿ ತಾಲಿಬಾನಿಗಳ ಜತೆ ನಡೆಯಲಿರುವ ಮಾತುಕತೆಯಲ್ಲಿ ಭಾಗವಹಿಸಲು ಭಾರತ ಒಪ್ಪಿಕೊಂಡಿದೆ. ಅಕ್ಟೋಬರ್ 20ರಂದು ಮಾಸ್ಕೋದಲ್ಲಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾವು ನೀಡಿದ್ದ ಆಹ್ವಾನವನ್ನು ಭಾರತ ಸ್ವೀಕರಿಸಿದೆ.

 

ತಾಲಿಬಾನ್ ಕಳೆದ ಎರಡು ತಿಂಗಳ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದು, ಅಲ್ಲಿ ತನ್ನ ಸರ್ಕಾರವನ್ನು ರಚಿಸಿದೆ. ಅಫ್ಘಾನಿಸ್ತಾನದಲ್ಲಿ ಆರ್ಥಿಕ ವ್ಯವಸ್ಥೆ ಕುಂಠಿತದ ಜತೆ ಹಲವು ತೊಂದರೆಗಳು ಕಾಡುತ್ತಿವೆ. ಇದೆಲ್ಲದರ ಕುರಿತು ಮಾತುಕತೆ ನಡೆಯಲಿದೆ.

ಭಾರತೀಯ ಭಾಗವಹಿಸುವಿಕೆಯನ್ನು ದೃಢೀಕರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅಕ್ಟೋಬರ್ 20 ರಂದು ಅಫ್ಘಾನಿಸ್ತಾನದ ಬಗ್ಗೆ ಮಾಸ್ಕೋದಲ್ಲಿ ನಡೆಯುವ ಸಭೆಗೆ ನಮಗೆ ಆಹ್ವಾನ ಬಂದಿದೆ. ನಾವು ಅದರಲ್ಲಿ ಭಾಗವಹಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

 

ಕಳೆದ ವಾರ ಅಫ್ಘಾನಿಸ್ತಾನದ ಕುರಿತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿಶೇಷ ಪ್ರತಿನಿಧಿ ಜಮೀರ್ ಕಾಬುಲೋವ್, ರಷ್ಯಾ ಅಕ್ಟೋಬರ್ 20 ರಂದು ಅಫ್ಘಾನಿಸ್ತಾನದ ಕುರಿತು ಅಂತರಾಷ್ಟ್ರೀಯ ಮಾತುಕತೆಗೆ ತಾಲಿಬಾನ್ ಪ್ರತಿನಿಧಿಗಳನ್ನು ಆಹ್ವಾನಿಸಿದೆ ಎಂದು ಹೇಳಿದರು.

 

ಈ ವರ್ಷದ ಮಾರ್ಚ್‌ನಲ್ಲಿ ಮಾಸ್ಕೋ ಅಫ್ಘಾನಿಸ್ತಾನದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತು. ಇದರಲ್ಲಿ ರಷ್ಯಾ, ಅಮೆರಿಕ, ಚೀನಾ ಮತ್ತು ಪಾಕಿಸ್ತಾನ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ಆಗ ಯುದ್ಧ ಮಾಡುತ್ತಿದ್ದ ಅಫ್ಘಾನ್ ಪಕ್ಷಗಳು ಶಾಂತಿ ಒಪ್ಪಂದಕ್ಕೆ ಬರುವಂತೆ ಕರೆ ನೀಡಿದವು.

ಎಂಇಎ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯನ್ನು ಸಭೆಗೆ ಕಳುಹಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು ಅಂತಿಮ ನಿರ್ಧಾರವನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ.ಅಫ್ಘಾನಿಸ್ತಾನದಲ್ಲಿನ ಬದಲಾವಣೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಮಾನವೀಯ ಅನಾಹುತಗಳನ್ನು ತಪ್ಪಿಸಲು ಸಹಾಯ ಮಾಡುವುದಕ್ಕಾಗಿ ಅಕ್ಟೋಬರ್ 12 ರಂದು ನಡೆದ ಜಿ 20 ಶೃಂಗಸಭೆಯ ಬೆನ್ನಲ್ಲೇ ಈ ಮಾತುಕತೆ ನಡೆಯಲಿದೆ. ಆಗಸ್ಟ್ ತಿಂಗಳಲ್ಲಿ ಅಫ್ಘಾನಿಸ್ತಾನದಲ್ಲಿ ಅಧಿಕಾರ ಪತನದ ಬಳಿಕ ಭಾರತವು ಹೊಸ ತಾಲಿಬಾನ್ ಆಡಳಿತದಲ್ಲಿ ಒಳಗೊಳ್ಳುವಿಕೆಯ ಕೊರತೆ, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಪ್ರಶ್ನೆಗಳನ್ನು ಇರಿಸಿತ್ತು ಹಾಗೆಯೇ ಅಫ್ಘಾನಿಸ್ತಾನದ ಭಯೋತ್ಪಾದನೆಯ ಬಗ್ಗೆ ಕಳವಳವನ್ನು ಕೂಡ ವ್ಯಕ್ತಪಡಿಸಿತ್ತು.

 

ಕತಾರ್‌ನಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಅವರು ಆಗಸ್ಟ್ ಅಂತ್ಯದ ವೇಳೆಗೆ ದೋಹಾದಲ್ಲಿ ತಾಲಿಬಾನ್ ಪ್ರತಿನಿಧಿಗಳನ್ನು ಭೇಟಿಯಾಗಿದ್ದರು. ಮಾಸ್ಕೊದಲ್ಲಿ ನಡೆಯಲಿರುವ ಸಭೆಯು ಭಾರತೀಯರಿಗೆ ಎರಡನೆಯ ಸಭೆಯಾಗಿದೆ. ದಾಳಿ ಮಾಡದಂತೆ ತಾಲಿಬಾನ್‌ಗಳನ್ನು ಕೇಳಲಾಗಿತ್ತು, ಆದರೆ ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು 20 ವರ್ಷಗಳ ನಂತರ ತಮ್ಮ ಸೈನ್ಯವನ್ನು ಹಿಂತೆಗೆದುಕೊಳ್ಳಲು ಆರಂಭಿಸಿದಾಗ, ತಾಲಿಬಾನ್ ಅಧಿಕಾರವನ್ನು ತನ್ನ ಮುಷ್ಟಿಗೆ ಪಡೆಯಿತು.

 

ಕೆಲ ದಿನಗಳ ಹಿಂದೆ, ಸ್ಥಾಪಿತ ಪ್ರಜಾಪ್ರಭುತ್ವ ಸರ್ಕಾರವನ್ನು ಉರುಳಿಸಿ ಅಫ್ಘಾನಿಸ್ತಾನದಲ್ಲಿ ರಚನೆಯಾದ ತಾಲಿಬಾನ್‌ ಉಗ್ರರ ಸರ್ಕಾರವನ್ನು ವಿಶ್ವವೇ ಟೀಕಿಸುತ್ತಿದ್ದರೆ ರಷ್ಯಾ, ಪಾಕಿಸ್ತಾನ, ಚೀನಾ ಮತ್ತು ಇರಾನ್ ಸರ್ಕಾರ ಸ್ವಾಗತಿಸಿವೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಸೇರಿದಂತೆ ಬಹುತೇಕ ಭೂಭಾಗಗಳಲ್ಲಿ ತಾಲಿಬಾನಿಗಳ ಆಕ್ರಮಣ ಮುಂದುವರಿದಿದೆ. ಬಹುತೇಕ ಜನರು ದಿಕ್ಕಾಪಾಲಾಗಿದ್ದು, ಮನೆಗಳಲ್ಲೇ ಉಳಿದಿರುವ ಮಂದಿ ರಕ್ಷಣೆಗಾಗಿ ಕಾದು ಕುಳಿತಿದ್ದಾರೆ. ಆದರೆ ತಾಲಿಬಾನ್ ಉಗ್ರರು ಮಾತ್ರ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಈಗಾಗಲೇ 24 ಗಂಟೆಗಳು ಕಳೆದಿವೆ. ಈ ಅವಧಿಯಲ್ಲಿ ಹಿಂದಿನ ಪ್ರಜಾಪ್ರಭುತ್ವ ಸರ್ಕಾರಕ್ಕಿಂತ ತಾಲಿಬಾನಿಗಳ ಕೈಯಲ್ಲಿ ಕಾಬೂಲ್​ ನಗರ ಸುರಕ್ಷಿತವಾಗಿದೆ ಎಂದು ರಷ್ಯಾ ಹೇಳಿತ್ತು.

Share post:

Subscribe

spot_imgspot_img

Popular

More like this
Related

ದೆಹಲಿ ಕಾರು ಸ್ಫೋಟ ಪ್ರಕರಣ: ಲಖನೌ ಮೂಲದ ವೈದ್ಯೆ ಅರೆಸ್ಟ್.!‌

ದೆಹಲಿ ಕಾರು ಸ್ಫೋಟ ಪ್ರಕರಣ: ಲಖನೌ ಮೂಲದ ವೈದ್ಯೆ ಅರೆಸ್ಟ್.!‌ ನವದೆಹಲಿ: ಭಾರತದ...

ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು: ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ ಸೂಚನೆ: ಸಿಎಂ ಸಿದ್ದರಾಮಯ್ಯ

ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು: ತಪ್ಪಿದವರ ವಿರುದ್ಧ ವರದಿ ನೀಡಲು...

ರಾಜ್ಯದಲ್ಲಿ ಸಾಧಾರಣ ಮಳೆ ಸಾಧ್ಯತೆ: ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜ್ಯದಲ್ಲಿ ಸಾಧಾರಣ ಮಳೆ ಸಾಧ್ಯತೆ: ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಬೆಂಗಳೂರು: ಇಂದು...

ದೆಹಲಿಯಲ್ಲಿ ಸ್ಫೋಟದ ಬೆನ್ನಲ್ಲೇ ಬೆಂಗಳೂರಲ್ಲಿ ಕಟ್ಟೆಚ್ಚರ

ದೆಹಲಿಯಲ್ಲಿ ಸ್ಫೋಟದ ಬೆನ್ನಲ್ಲೇ ಬೆಂಗಳೂರಲ್ಲಿ ಕಟ್ಟೆಚ್ಚರ ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರು...