ಭಾರತ ಅಂಡರ್ – 19 ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಸೌರಾಷ್ಟ್ರ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾದ ಅವಿ ಬರೋಟ್ 29ನೇ ವಯಸ್ಸಿಗೆ ತಮ್ಮ ಜೀವನ ಪಯಣವನ್ನು ಮುಗಿಸಿದ್ದಾರೆ. ಇನ್ನೂ ಬಾಳಿ ಬದುಕಿ, ತಮ್ಮ ಕ್ರಿಕೆಟ್ ಜೀವನದಲ್ಲಿ ಹಲವಾರು ಮೆಟ್ಟಿಲುಗಳನ್ನು ತುಳಿಯಬೇಕಾಗಿದ್ದ ಕ್ರಿಕೆಟಿಗ ಅವಿ ಬರೋಟ್ ಅಕ್ಟೋಬರ್ 15ರ ಶುಕ್ರವಾರದಂದು ಹೃದಯ ಸ್ತಂಭನದಿಂದ ಅಸುನೀಗಿದ್ದಾರೆ.
ಕಿರಿಯ ವಯಸ್ಸಿಗೇ ಹೃದಯ ಸ್ತಂಭನದಿಂದ ಕ್ರಿಕೆಟಿಗನೊಬ್ಬ ಸಾವಿಗೀಡಾಗಿರುವುದನ್ನು ಕಂಡ ಹಲವಾರು ಕ್ರಿಕೆಟ್ ಅಭಿಮಾನಿಗಳು, ಜನಸಾಮಾನ್ಯರು ಮತ್ತು ಮಾಜಿ ಕ್ರಿಕೆಟಿಗರು ಆಶ್ಚರ್ಯಕ್ಕೊಳಗಾಗಿದ್ದು ಸಂತಾಪ ಸೂಚಿಸಿದ್ದಾರೆ. ಅಕ್ಟೋಬರ್ 15ರ ಶುಕ್ರವಾರದಂದು ಮನೆಯಲ್ಲಿಯೇ ಇದ್ದ ಅವಿ ಬರೋಟ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗೆ ಅಸ್ವಸ್ಥರಾದ ಅವಿ ಬರೋಟ್ ಅವರನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಸನಿಹದ ಆಸ್ಪತ್ರೆಗೆ ಸಾಗಿಸುವ ಯತ್ನವನ್ನು ಮಾಡಲಾಗಿದೆ. ಆದರೆ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಅವಿ ಬರೋಟ್ ತಮ್ಮ ಕೊನೆ ಉಸಿರು ಎಳೆದಿದ್ದಾರೆ.