ಮುದ್ದೆಯಲ್ಲಿ ವಿಷ ಹಾಕಿ ತಂದೆ ತಾಯಿಯನ್ನು ಕೊಂದ ಮಗಳು

Date:

ಚಿತ್ರದುರ್ಗ ಜಿಲ್ಲೆಯ ಇಸಾಮುದ್ರ ಗ್ರಾಮದಲ್ಲಿ ಜುಲೈ 12 ರಂದು ಈ ಘಟನೆ ನಡೆದಿದ್ದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಘಟನೆಯಲ್ಲಿ ಬಾಲಕಿಯೇ ನಾಲ್ವರ ಸಾವಿಗೆ ಕಾರಣವಾಗಿದ್ದಾಳೆ ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದಿದ್ದೆ. ಹೌದು, ಘಟನೆ ಸಂಬಂಧ ತನಿಖೆಗೆ ಸಂಬಂಧಫಟ್ಟಂತೆ ಪೋಲಿಸರು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಅಂದು ಮನೆಯಲ್ಲಿ ಮಾಡಿದ್ದ ಅಡುಗೆಯನ್ನು ಕಳುಹಿಸಿದ್ದರು, ಪ್ರಯೋಗಾಲಯದ ವರದಿ ಬಂದಿದ್ದು, ಮುದ್ದೆಗೆ , ಬಾಲಕಿಯೇ ವಿಷಬೆರೆಸಿದ್ದಾಳೆ ಎನ್ನಲಾಗಿದೆ.

ಈ ನಡುವೆ ನಾಲ್ವರನ್ನು ಯುವತಿ ಸಾಯಿಸಲು ಪ್ರಮುಖ ಕಾರಣ, ನನ್ನ ಪೋಷಕರು ನನ್ನ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು, ಇದಲ್ಲದೇ ನನಗೆ ಬೈಯುತ್ತಿದ್ದರು, ಇದರಿಂದ ನಾನು ಮನನೊಂದು ಮುದ್ದೆಗೆ ವಿಷಬೆರೆಸಿ ನಾಲ್ವರನ್ನು ಹತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ ಅಂತ ಭರಮಸಾಗರ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಮುಂದೆ ಕಾನೂನು ಕ್ರಮ ಕೈಗೊಳ್ಳಾಗುವುದು ಅಂತ ತಿಳಿಸಿದ್ದಾರೆ. ಯುವತಿ ಹಾಕಿದ್ದ ವಿಷದ ಮುದ್ದೆ ತಿಂದು, ತಂದೆ ತಿಪ್ಪಾನಾಯ್ಕ್(46), ತಾಯಿ ಸುಧಾಬಾಯಿ(43), ಸಹೋದರಿ ರಮ್ಯ(16), ವೃದ್ಧೆ ಗುಂಡಿಬಾಯಿ(75) ಸಾವಿಗೀಡಾದ್ದರು. ಇದೇ ವೇಳೇ ಬಾಲಕಿಯ ತಮ್ಮ ರಾಹುಲ್(18) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾನೆ. ಇನ್ನೂ ಘಟನೆ ಪಡೆದ ಬಳಿಕ ಬಾಲಕಿಯನ್ನು ನಡೆದು ಕೊಂಡ ರೀತಿಯನ್ನು ಗಮನಿಸಿದ ಪೊಲೀಸರು ವಿಚಾರಣೆ ನಡೆಸಿದ ವೇಳೆಯಲ್ಲಿ ಘಟನೆ ಸಂಬಂಧ ಎಲ್ಲಾ ಮಾಹಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ ಎನ್ನಲಾಗಿದೆ.

 

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...